
ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 2) ನಡೆದ ಪ್ರೊ ಕಬಡ್ಡಿ ಲೀಗ್ 2019ರ 72ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ತೆಲುಗು ಟೈಟಾನ್ಸ್ 35-30ರ ಜಯ ದಾಖಲಿಸಿದೆ. ಇದರೊಂದಿಗೆ ತಲೈವಾಸ್ ಪರ ವಿ ಅಜಿತ್ ಕುಮಾರ್ ಮಾಡಿದ ಏಕಾಂಗಿ ಹೋರಾಟ ವ್ಯರ್ಥಗೊಂಡಿತು.
ತಮಿಳ್ ತಲೈವಾಸ್ ಬೆಸ್ಟ್ ರೈಡರ್ ಅಜಿತ್ ಕುಮಾರ್ 13 ರೈಡ್, 1 ಬೋನಸ್ ಸೇರಿ ಒಟ್ಟು 14 ಅಂಕಗಳ ಕೊಡುಗೆಯಿತ್ತರು. ಶಬೀರ್ ಬಾಪ್ಪು 5, ರಾಹುಲ್ ಚೌಧರಿ 4, ಮನ್‌ಜೀತ್ ಛಿಲ್ಲರ್ 2, ರಣ್ ಸಿಂಗ್ 2, ಅಜೀತ್, ಆನಂದ್, ಮೋಹಿತ್ ಛಿಲ್ಲರ್ ಅವರಿಂದ ತಲಾ 1 ಪಾಯಿಂಟ್ ಲಭಿಸಿತು.
ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ್ ದೇಸಾಯ್ 9, ವಿಶಾಲ್ ಭಾರದ್ವಾಜ್ 6, ಫರ್ಹಾದ್ ಮಿಲಗಾರ್ಡನ್ 5, ರಜನೀಶ್ ದಲಾಳ್ 4, ಅರ್ಮಾನ್ 3, ಸೂರಜ್ ದೇಸಾಯ್ 2, ಅಬೋಝರ್ ಮೊಹಜೆರ್‌ಮಿಘಾನಿ 1 ಅಂಕ ಸೇರಿಸಿ ತಂಡದ ಗೆಲುವನ್ನು ಬರೆದರು. ಈ ಪಂದ್ಯ ಬಳಿಕ ಅಂಕಪಟ್ಟಿಯಲ್ಲಿ ಡೆಲ್ಲಿ, ಹರ್ಯಾಣ, ಬೆಂಗಾಲ್, ಬೆಂಗಳೂರು, ಜೈಪುರ್ ಮೊದಲ 5 ತಂಡಗಳಲ್ಲಿದ್ದವು.