
ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 19ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ದಬಾಂಗ್ ಡೆಲ್ಲಿ ಅಬ್ಬರಿಸಿದ್ದು ಬರೋಬ್ಬರಿ 52 ಪಾಯಿಂಟ್ಸ್ ಕಲೆಹಾಕಿದೆ.
ರೈಡಿಂಗ್ ಮತ್ತು ಟ್ಯಾಕಲ್ ಪಾಯಿಂಟ್ಸ್‌ಗಳೆರಡಲ್ಲೂ ಮಿಂಚಿದ ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್ ವಿರುದ್ಧ 52-35 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿದೆ.
ಇನ್ನು ದಬಾಂಗ್ ಡೆಲ್ಲಿ ರೈಡಿಂಗ್‌ನಿಂದಲೇ 36 ಪಾಯಿಂಟ್ಸ್ ಕಲೆಹಾಕಿದ್ದು , ರೈಡರ್ ನವೀನ್ ಕುಮಾರ್ ಬರೋಬ್ಬರಿ 21 ಪಾಯಿಂಟ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೆಂಗಾಲ್ ವಾರಿಯರ್ಸ್ ಪರ 28 ರೈಡಿಂಗ್ ಪಾಯಿಂಟ್ಸ್ ಗಳಿಸಿರುವ ಬೆಂಗಾಲ್ ಪರ ಮನಿಂದರ್ ಸಿಂಗ್ 12 ಪಾಯಿಂಟ್ಸ್ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡಿಗ ಸುಕೇಶ್ ಹೆಗ್ಡೆ ನಾಲ್ಕು ರೈಡಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
ಇನ್ನು ನಡೆದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಗುಜರಾತ್ ಜಾಯಂಟ್ಸ್ ಪಂದ್ಯವು ಟೈನಲ್ಲಿ ಅಂತ್ಯಗೊಂಡಿದೆ. ಉಭಯ ತಂಡಗಳು ಪಂದ್ಯ ಮುಕ್ತಾಯದ ಹೊತ್ತಿಗೆ 32-32 ಪಾಯಿಂಟ್ಸ್ ಸಮಬಲ ಸಾಧಿಸಿದೆ.
ಯುಪಿ ಯೋಧಾ ಪರ ಪರ್ದೀಪ್ ನರ್ವಾಲ್ 10 ಪಾಯಿಂಟ್ಸ್, ಸುರೇಂದರ್ ಗಿಲ್ 3 ಪಾಯಿಂಟ್ಸ್ ಗಳಿಸಿದ್ರೆ, ಸುಮಿತ್ 3 ಪಾಯಿಂಟ್ಸ್ ಟ್ಯಾಕಲ್ ಮೂಲಕ ಗಳಿಸಿದ್ದಾರೆ. ಆದ್ರೆ ಗುಜರಾತ್ ಜಾಯಂಟ್ಸ್ ಪರ ರಾಕೇಶ್ ನರ್ವಾ್ಲ್ 11 ರೈಡಿಂಗ್ ಪಾಯಿಂಟ್ಸ್ ಕಲೆಹಾಕಿದ್ದು, ಅಜಯ್ ಕುಮಾರ್ 3, ರಾಕೇಶ್ 2 ಪಾಯಿಂಟ್ಸ್ ಮುಟ್ಟಿದ್ದಾರೆ.
ಅಂತಿಮವಾಗಿ ಪಂದ್ಯವು 32 ಪಾಯಿಂಟ್ಸ್ ಸಮಬಲದೊಂದಿಗೆ ಕೊನೆಗೊಂಡಿದೆ.
ಪಿಕೆಎಲ್ ಪಾಯಿಂಟ್ಸ್ ಟೇಬಲ್:
ದಬಾಂಗ್ ಡೆಲ್ಲಿ 18 ಪಾಯಿಂಟ್ಸ್
ಗುಜರಾತ್ ಜಾಯಿಂಟ್ಸ್ 12 ಪಾಯಿಂಟ್ಸ್
ಪಾಟ್ನಾ ಪೈರೇಟ್ಸ್ 11 ಪಾಯಿಂಟ್ಸ್
ಪಿಂಕ್ ಪ್ಯಾಂಥರ್ಸ್ 11 ಪಾಯಿಂಟ್ಸ್
ಬೆಂಗಾಲ್ ವಾರಿಯರ್ಸ್ 11 ಪಾಯಿಂಟ್ಸ್
ಬೆಂಗಳೂರು ಬುಲ್ಸ್ 10 ಪಾಯಿಂಟ್ಸ್