For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಡಿಸೆಂಬರ್ 29ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 2021, December 29: All matches preview, Predicted 7, Head to head details and live streaming

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಡಿಸೆಂಬರ್ 28ರ ಮಂಗಳವಾರದವರೆಗೂ ಒಟ್ಟು 18 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ತಲಾ ಎರೆಡೆರಡು ಪಂದ್ಯಗಳನ್ನು ಗೆದ್ದಿರುವ ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನ, ಬೆಂಗಾಲ್ ವಾರಿಯರ್ಸ್ ತೃತೀಯ ಸ್ಥಾನ, ಜೈಪುರ್ ಪಿಂಕ್ ಪ್ಯಾಂಥರ್ಸ್ ನಾಲ್ಕನೇ ಸ್ಥಾನ ಮತ್ತು ಬೆಂಗಳೂರು ಬುಲ್ಸ್ ಐದನೇ ಸ್ಥಾನದಲ್ಲಿದೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 18 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಡಿಸೆಂಬರ್ 28 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಗುಜರಾತ್ ಜಿಯಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪಂದ್ಯ 1: ದಬಾಂಗ್ ಡೆಲ್ಲಿ vs ಬೆಂಗಾಲ್ ವಾರಿಯರ್ಸ್

ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ಈ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿವೆ. ಎರಡೂ ತಂಡಗಳು ಸಹ ಇದುವರೆಗೂ ತಲಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ದಬಾಂಗ್ ಡೆಲ್ಲಿ 2 ಪಂದ್ಯಗಳಲ್ಲಿ ಜಯ ಸಾಧಿಸಿ ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ ಹಾಗೂ ಬೆಂಗಾಲ್ ವಾರಿಯರ್ಸ್ 2 ಪಂದ್ಯಗಳಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋತಿದೆ. ಹಾಗೂ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೆ, ಬೆಂಗಾಲ್ ವಾರಿಯರ್ಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 19ನೇ ಪಂದ್ಯವಾಗಿದ್ದು ಇಂದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಮುಖಾಮುಖಿಯ ಪಂದ್ಯಗಳ ಫಲಿತಾಂಶದ ವಿಚಾರಕ್ಕೆ ಬಂದರೆ ಎರಡೂ ತಂಡಗಳು ಜಿದ್ದಾಜಿದ್ದಿನ ಹೋರಾಟವನ್ನು ನಡೆಸಿವೆ. ಇತ್ತಂಡಗಳು ಇದುವರೆಗೂ ಒಟ್ಟು 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಬೆಂಗಾಲ್ ವಾರಿಯರ್ಸ್ 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ದಬಾಂಗ್ ಡೆಲ್ಲಿ 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ದಬಾಂಗ್ ಡೆಲ್ಲಿ ಸಂಭಾವ್ಯ ತಂಡ: ನವೀನ್ ಕುಮಾರ್ ಗೋಯತ್ (ರೈಡರ್) ಅಜಯ್ ಠಾಕೂರ್ (ರೈಡರ್) ವಿಜಯ್ ಮಲಿಕ್ (ರೈಡರ್) ಮಂಜೀತ್ ಚಿಲ್ಲರ್ (ಎಡ ಕವರ್) ಜೀವ ಕುಮಾರ್ (ಬಲ ಕವರ್) ಜೋಗಿಂದರ್ ನರ್ವಾಲ್ (ಎಡ ಮೂಲೆ) ಸಂದೀಪ್ ನರ್ವಾಲ್ (ಬಲ ಮೂಲೆ)

ಬೆಂಗಾಲ್ ವಾರಿಯರ್ಸ್ ಸಂಭಾವ್ಯ ತಂಡ: ಮಣಿಂದರ್ ಸಿಂಗ್ (ರೈಡರ್) ಸುಕೇಶ್ ಹೆಗ್ಡೆ (ರೈಡರ್) ಮೊಹಮ್ಮದ್ ನಬಿಬಕ್ಷ್ (ಆಲ್ ರೌಂಡರ್) ಪರ್ವೀನ್ ಸತ್ಪಾಲ್ (ಎಡ ಕವರ್) ದರ್ಶನ್ ಜೆ (ರೈಟ್ ಕವರ್) ರಿಂಕು ನರ್ವಾಲ್ (ಎಡ ಮೂಲೆ) ಅಬೋಜರ್ ಮಿಘಾನಿ (ಬಲ ಮೂಲೆ)

ಪಂದ್ಯ 2: ಯುಪಿ ಯೋಧಾ vs ಗುಜರಾತ್‌‌ ಜಿಯಂಟ್ಸ್

ಯುಪಿ ಯೋಧಾ ಮತ್ತು ಗುಜರಾತ್ ಜಿಯಂಟ್ಸ್ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿವೆ. ಯುಪಿ ಯೋಧಾ ಮತ್ತು ಗುಜರಾತ್ ಜಿಯಂಟ್ಸ್ ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 3 ಪಂದ್ಯಗಳನ್ನಾಡಿದ್ದು ಯುಪಿ ಯೋಧಾ 1 ಪಂದ್ಯದಲ್ಲಿ ಗೆದ್ದು ಮತ್ತೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದರೆ, ಗುಜರಾತ್ ಜಿಯಂಟ್ಸ್ 1 ಪಂದ್ಯದಲ್ಲಿ ಗೆದ್ದು, 1 ಪಂದ್ಯದಲ್ಲಿ ಸೋತು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ಇನ್ನು ಅಂಕಪಟ್ಟಿಯಲ್ಲಿ ಗುಜರಾತ್ ಜಿಯಂಟ್ಸ್ ಏಳನೇ ಸ್ಥಾನದಲ್ಲಿದ್ದರೆ, ಯುಪಿ ಯೋಧಾ ಒಂಬತ್ತನೇ ಸ್ಥಾನದಲ್ಲಿದೆ. ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 20ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭವಾಗಲಿದೆ. ಇನ್ನು ಇತ್ತಂಡಗಳ ನಡುವಿನ ಪ್ರೊ ಕಬಡ್ಡಿ ಲೀಗ್ ಇತಿಹಾಸದ ಮುಖಾಮುಖಿ ಫಲಿತಾಂಶದ ಅಂಕಿಅಂಶದಲ್ಲಿ ಯುಪಿ ಯೋಧಾ ವಿರುದ್ಧ ಗುಜರಾತ್ ಜಿಯಂಟ್ಸ್ ಸ್ಪಷ್ಟ ಮೇಲುಗೈ ಸಾಧಿಸಿದೆ. ಇತ್ತಂಡಗಳು ಇದುವರೆಗೂ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ಗುಜರಾತ್ ಜಿಯಂಟ್ಸ್ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಯುಪಿ ಯೋಧಾ 1 ಪಂದ್ಯದಲ್ಲಿ ಗೆದ್ದಿದೆ ಮತ್ತು ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಗುಜರಾತ್‌‌ ಜಿಯಂಟ್ಸ್ ಸಂಭಾವ್ಯ ತಂಡ: ರಾಕೇಶ್ ನರ್ವಾಲ್ (ರೈಡರ್) ಮಹೇಂದ್ರ ಗಣೇಶ್ ರಜಪೂತ್ (ರೈಡರ್) ರಾಕೇಶ್ ಸುಂಗ್ರೋಯಾ (ಆಲ್ ರೌಂಡರ್) ಪರ್ವೇಶ್ ಭೈನ್‌ವಾಲ್ (ಎಡ ಕವರ್) ಸುನೀಲ್ ಕುಮಾರ್ (ರೈಟ್ ಕವರ್) ಗಿರೀಶ್ ಎರ್ನಾಕ್ (ಎಡ ಮೂಲೆ) ರವೀಂದರ್ ಪಹಲ್ (ಬಲ ಮೂಲೆ)

ಯುಪಿ ಯೋಧಾ ಸಂಭಾವ್ಯ ತಂಡ: ಪರ್ದೀಪ್ ನರ್ವಾಲ್ (ರೈಡರ್) ಸುರೇಂದರ್ ಗಿಲ್ (ರೈಡರ್) ರೋಹಿತ್ ತೋಮರ್ (ರೈಡರ್) ಗುರ್ದೀಪ್ (ಎಡ ಕವರ್) ಅಶು ಸಿಂಗ್ (ಬಲ ಕವರ್) ಸುಮಿತ್ ಸಾಂಗ್ವಾನ್ (ಎಡ ಮೂಲೆ)

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Wednesday, December 29, 2021, 19:01 [IST]
Other articles published on Dec 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+