For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್ : ಹರಿಯಾಣ ಸ್ಟೀಲರ್ಸ್ v/s ತೆಲುಗು ಟೈಟನ್ಸ್ ರೋಚಕ ಕಾದಾಟ, ಟೈನಲ್ಲಿ ಅಂತ್ಯ

Haryana steelers vs Telugu Titans

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 77ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್ ಜಿದ್ದಾಜಿದ್ದಿನ ಪಂದ್ಯಕ್ಕೆ ಸಾಕ್ಷಿಯಾಗಿದ್ದು, ಉಭಯ ತಂಡಗಳು ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಟ ನಡೆಸಿ ಪಂದ್ಯ ಟೈನಲ್ಲಿ ಕೊನೆಗೊಂಡಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ತೆಲುಗು ಟೈಟನ್ಸ್ 19 ಪಾಯಿಂಟ್ಸ್ ಕಲೆಹಾಕಿದ್ರೆ, ಹರಿಯಾಣ ಸ್ಟೀಲರ್ಸ್ 20 ಪಾಯಿಂಟ್ಸ್‌ ಕಬಳಿಸಿದ್ರು. ಆದ್ರೆ ಅದೇ ಎರಡನೇ ಆಫ್‌ನಲ್ಲಿ ಇದೇ ಸ್ಕೋರ್ ತದ್ವಿರುದ್ದಗೊಂಡು ಒಂದು ಪಾಯಿಂಟ್ ವ್ಯತ್ಯಾಸಗೊಂಡಿತು. ಅಂತಿಮವಾಗಿ ಹರಿಯಾಣ 26 ರೈಡಿಂಗ್ ಪಾಯಿಂಟ್ಸ್ ಗಳಿಸಿದ್ರೆ, ತೆಲುಗು ಟೈಟನ್ಸ್ 22 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು.

ಇನ್ನು ಟ್ಯಾಕಲ್ ವಿಚಾರದಲ್ಲಿ ಹರಿಯಾಣಗಿಂತ ತೆಲುಗು ಟೈಟನ್ಸ್ ಮುಂದಿದೆ. ಹರಿಯಾಣ 8 ಟ್ಯಾಕಲ್ ಪಾಯಿಂಟ್ಸ್‌ ಗಳಿಸಿದ್ರೆ, ತೆಲುಗು ಟೈಟನ್ಸ್ 13 ಪಾಯಿಂಟ್ಸ್ ಪಡೆಯಿತು. ತೆಲುಗು ಟೈಟನ್ಸ್ ಪರ ಅಂಕಿತ್ ಬೆನಿವಲ್ 10 ಪಾಯಿಂಟ್ಸ್, ರೋಹಿತ್ ಕುಮಾರ್ 8, ಆದರ್ಷ್ ಟಿ 6, ಸಂದೀಪ್ ಖಂಡೋಲ 6 ಪಾಯಿಂಟ್ಸ್ ಪಡೆದರು.

ಅತ್ತ ಹರಿಯಾಣ ಸ್ಟೀಲರ್ಸ್ ಪರ ವಿಕಾಸ್ ಖಂಡೋಲ 10, ರೋಹಿತ್ ಗುಲಿಯಾ 8, ವಿನಯ್ 8 ಹಾಗೂ ಜೈದೀಪ್ 4 ಪಾಯಿಂಟ್ಸ್ ಕಲೆಹಾಕಿದರು. ಅಂತಿಮವಾಗಿ ಪಂದ್ಯವು ಕೊನೆಯಲ್ಲಿ 39-39 ಪಾಯಿಂಟ್ಸ್‌ನೊಂದಿಗೆ ಟೈನಲ್ಲಿ ಕೊನೆಗೊಂಡಿತು.

ಆದ್ರೆ ಇಂದು ನಡೆಯಬೇಕಿದ್ದ ಮತ್ತೊಂದು ಪಂದ್ಯ ಕೋವಿಡ್-19 ಸೋಂಕಿನ ಕಾರಣದಿಂದಾಗಿ ಮುಂದೂಡಲಾಯಿತು. ತೆಲುಗು ಟೈಟಾನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವಿನ ಏಕೈಕ ಪಂದ್ಯ ನಡೆಯಿತು. ಸದ್ಯ ಸೋಂಕಿಗೆ ಒಳಗಾಗಿರುವ ಆಟಗಾರರಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದು, ಉಳಿದ ಆಟಗಾರರಿಗೆ ಆಗಾಗ್ಗೆ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತಿದೆ. ಸದ್ಯ ಉಳಿದ ಪಂದ್ಯಗಳನ್ನು ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ನಡೆಸಲಿದ್ದು, ಸೋಂಕಿಗೆ ಒಳಗಾಗಿರುವ ಆಟಗಾರರು ಚೇತರಿಸಿಕೊಂಡ ನಂತರ ಪಂದ್ಯ ನಡೆಸಲಾಗುವುದು.

ಪಾಯಿಂಟ್ಸ್‌ ಟೇಬಲ್‌ಲ್ಲಿ ಬೆಂಗಳೂರು ಬುಲ್ಸ್ 46 ಪಾಯಿಂಟ್ಸ್‌ನೊಂದಿಗೆ ಟೇಬಲ್ ಟಾಪರ್ ಆಗಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನ ಹಿಂದಿಕ್ಕಿ ಹರಿಯಾಣ ಸ್ಟೀಲರ್ಸ್ ಸ್ಥಾನ ಪಡೆದಿದೆ.

Story first published: Tuesday, January 25, 2022, 22:52 [IST]
Other articles published on Jan 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+