For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಜನವರಿ 1ರ ಎಲ್ಲಾ ಪಂದ್ಯಗಳ ಮಾಹಿತಿ ಮತ್ತು ಸಂಭಾವ್ಯ ತಂಡಗಳ ವಿವರ

PKL 2021, January 1: All matches preview, Predicted 7, Head to head details and live streaming

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಡಿಸೆಂಬರ್ 31ರ ಶುಕ್ರವಾರದವರೆಗೂ ಒಟ್ಟು 24 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಬುಲ್ಸ್ ದ್ವಿತೀಯ ಸ್ಥಾನ ಮತ್ತು ಯು ಮುಂಬಾ ತೃತೀಯ ಸ್ಥಾನದಲ್ಲಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 24 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 1 ) ಒಟ್ಟು 3 ಪಂದ್ಯಗಳು ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯು ಮುಂಬಾ ಮತ್ತು ಯುಪಿ ಯೋಧಾ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ ಹಾಗೂ ತೃತೀಯ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 3 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪಂದ್ಯ 1: ಯು ಮುಂಬಾ vs ಯುಪಿ ಯೋಧಾ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಯುಪಿ ಯೋಧಾ ತಂಡಕ್ಕಿಂತ ಯು ಮುಂಬಾ ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಈ ಬಾರಿಯ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಯು ಮುಂಬಾ 2 ಪಂದ್ಯಗಳಲ್ಲಿ ಗೆದ್ದು 1 ಪಂದ್ಯದಲ್ಲಿ ಸೋತಿದ್ದು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ. ಇನ್ನು ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಯುಪಿ ಯೋಧಾ ಕೇವಲ 1 ಪಂದ್ಯದಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತಿದ್ದು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 25ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಇತ್ತಂಡಗಳ ನಡುವೆ ಇದುವರೆಗೂ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ನಡೆದಿರುವ ಮುಖಾಮುಖಿ ಪಂದ್ಯಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ಇತ್ತಂಡಗಳ ನಡುವೆ ಒಟ್ಟು 6 ಪಂದ್ಯಗಳು ನಡೆದಿದ್ದು ಯುಪಿ ಯೋಧಾ 3 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ ಯು ಮುಂಬಾ ಕೂಡ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಯು ಮುಂಬಾ ಸಂಭಾವ್ಯ ತಂಡ: ಅಭಿಷೇಕ್ ಸಿಂಗ್ (ರೈಡರ್) ವಿ ಅಜಿತ್ ಕುಮಾರ್ (ರೈಡರ್) ಮೊಹ್ಸೆನ್ ಮಗ್ಸೌದ್ಲೌ (ಆಲ್ ರೌಂಡರ್) ಹರೇಂದ್ರ ಕುಮಾರ್ (ಎಡ ಕವರ್) ಸುನಿಲ್ ಸಿದ್ಧಗವ್ಲಿ (ರೈಟ್ ಕವರ್) ಫಾಜೆಲ್ ಅತ್ರಾಚಲಿ (ಎಡ ಮೂಲೆ) ರಿಂಕು (ಬಲ ಮೂಲೆ)

ಯುಪಿ ಯೋಧಾ ಸಂಭಾವ್ಯ ತಂಡ: ಪರ್ದೀಪ್ ನರ್ವಾಲ್ (ರೈಡರ್) ಸುರೇಂದರ್ ಗಿಲ್ (ರೈಡರ್) ರೋಹಿತ್ ತೋಮರ್ (ರೈಡರ್) ಗುರ್ದೀಪ್ (ಎಡ ಕವರ್) ಅಶು ಸಿಂಗ್ (ಬಲ ಕವರ್) ಸುಮಿತ್ ಸಾಂಗ್ವಾನ್ (ಎಡ ಮೂಲೆ)

ಪಂದ್ಯ 2: ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರೆ ತೆಲುಗು ಟೈಟಾನ್ಸ್ ಹೇಳಿಕೊಳ್ಳುವಂತಹ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಆವೃತ್ತಿಯಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಬೆಂಗಳೂರು ಬುಲ್ಸ್ 3 ಪಂದ್ಯಗಳಲ್ಲಿ ಗೆದ್ದಿದ್ದು ಮತ್ತೊಂದು ಪಂದ್ಯದಲ್ಲಿ ಸೋತು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ 3 ಪಂದ್ಯಗಳನ್ನಾಡಿ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಕೂಡ ಗೆಲ್ಲುವಲ್ಲಿ ಯಶಸ್ವಿಯಾಗಿರದ ತೆಲುಗು ಟೈಟಾನ್ಸ್ 2 ಪಂದ್ಯಗಳಲ್ಲಿ ಸೋತು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದು 11ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 26ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ನಡೆಯಲಿದೆ. ಇನ್ನು ಪ್ರೊ ಕಬಡ್ಡಿ ಇತಿಹಾಸದಲ್ಲಿ ಇತ್ತಂಡಗಳ ನಡುವೆ ನಡೆದಿರುವ ಮುಖಾಮುಖಿ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 17 ಪಂದ್ಯಗಳು ನಡೆದಿದ್ದು ಬೆಂಗಳೂರು ಬುಲ್ಸ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ ತೆಲುಗು ಟೈಟಾನ್ಸ್ 3 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ 4 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

ಬೆಂಗಳೂರು ಬುಲ್ಸ್ ಸಂಭಾವ್ಯ ತಂಡ: ಪವನ್ ಕುಮಾರ್ ಸೆಹ್ರಾವತ್ (ರೈಡರ್) ಚಂದ್ರನ್ ರಂಜಿತ್ (ರೈಡರ್) ಜಿಬಿ ಮೋರ್ (ಆಲ್ ರೌಂಡರ್) ಮಹೇಂದರ್ ಸಿಂಗ್ (ಎಡ ಕವರ್) ಮಯೂರ್ ಕದಮ್ (ರೈಟ್ ಕವರ್) ಅಮನ್ ಆಂಟಿಲ್ (ಎಡ ಮೂಲೆ) ಸೌರಭ್ ನಂದಲ್ (ಬಲ ಮೂಲೆ)

ತೆಲುಗು ಟೈಟಾನ್ಸ್ ಸಂಭಾವ್ಯ ತಂಡ: ಸಿದ್ಧಾರ್ಥ್ ದೇಸಾಯಿ (ರೈಡರ್) ರೋಹಿತ್ ಕುಮಾರ್ (ರೈಡರ್) ಅಂಕಿತ್ ಬೇನಿವಾಲ್ (ರೈಡರ್) ಸಿ ಅರುಣ್ (ಎಡ ಕವರ್) ಸುರೀಂದರ್ ಸಿಂಗ್ (ರೈಟ್ ಕವರ್) ಸಂದೀಪ್ ಕಾಂಡೋಲಾ (ಎಡ ಮೂಲೆ) ರುತುರಾಜ್ ಕೊರವಿ (ಬಲ ಮೂಲೆ)

ಪಂದ್ಯ 3: ದಬಾಂಗ್ ಡೆಲ್ಲಿ vs ತಮಿಳ್ ತಲೈವಾಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ದಬಾಂಗ್ ಡೆಲ್ಲಿ ಇದುವರೆಗೂ ಒಟ್ಟು 4 ಪಂದ್ಯಗಳನ್ನಾಡಿದ್ದು 3 ಪಂದ್ಯಗಳಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅತ್ತ ಈ ಆವೃತ್ತಿಯಲ್ಲಿ ಇದುವರೆಗೂ ಗೆಲುವನ್ನೇ ಕಾಣದಿರುವ ತಮಿಳ್ ತಲೈವಾಸ್ 3 ಪಂದ್ಯಗಳನ್ನಾಡಿದ್ದು 2 ಪಂದ್ಯಗಳಲ್ಲಿ ಸೋತು ಮತ್ತೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 27ನೇ ಪಂದ್ಯವಾಗಿದ್ದು ರಾತ್ರಿ 9.30ಕ್ಕೆ ಆರಂಭವಾಗಲಿದೆ. ಇನ್ನು ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವೆ ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ನಡೆದಿರುವ ಎಲ್ಲಾ 4 ಪಂದ್ಯಗಳಲ್ಲಿಯೂ ಕೂಡ ದಬಾಂಗ್ ಡೆಲ್ಲಿ ಗೆದ್ದು ಬೀಗಿದೆ.

ದಬಾಂಗ್ ಡೆಲ್ಲಿ ಸಂಭಾವ್ಯ ತಂಡ: ನವೀನ್ ಗೋಯತ್ (ರೈಡರ್) ವಿಜಯ್ ಮಲಿಕ್ (ರೈಡರ್) ಅಜಯ್ ಠಾಕೂರ್ (ರೈಡರ್) ಮಂಜೀತ್ ಚಿಲ್ಲರ್ (ಎಡ ಕವರ್) ಜೀವ ಕುಮಾರ್ (ಬಲ ಕವರ್) ಸಂದೀಪ್ ನರ್ವಾಲ್ (ಬಲ ಮೂಲೆಯಲ್ಲಿ) ಜೋಗಿಂದರ್ ನರ್ವಾಲ್ (ನಾಯಕ) (ಎಡ ಮೂಲೆ)

ತಮಿಳ್ ತಲೈವಾಸ್ ಸಂಭಾವ್ಯ ತಂಡ: ಮಂಜೀತ್ (ರೈಡರ್) ಅಜಿಂಕ್ಯ ಪವಾರ್ (ರೈಡರ್) ಅತುಲ್ ಎಂಎಸ್ (ರೈಡರ್) ಮೋಹಿತ್ ಜಖರ್ (ರೈಟ್ ಕವರ್) ಸುರ್ಜೀತ್ (ನಾಯಕ) (ಎಡ ಕವರ್) ಸಾಹಿಲ್ ಮಲಿಕ್ (ಎಡ ಮೂಲೆ) ಸಾಗರ್ ರಥಿ (ಬಲ ಮೂಲೆ)

Story first published: Saturday, January 1, 2022, 15:35 [IST]
Other articles published on Jan 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+