ಪ್ರೋ ಕಬಡ್ಡಿ ಲೀಗ್: ಎನ್‌ಟಿಆರ್ ಕನ್ನಡ ಕಾಮೆಂಟರಿಗೆ ನೆಟ್ಟಿಗರ ಬಹುಪರಾಕ್

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ನಿನ್ನೆ ( ಡಿಸೆಂಬರ್ 22 ) ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಹೌದು, 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಯು ಮುಂಬಾ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ಹಾಗೂ ಮೊದಲನೇ ದಿನ ನಡೆದ ಮತ್ತೆರಡು ಪಂದ್ಯಗಳ ಪೈಕಿ ತೆಲುಗು ಟೈಟಾನ್ಸ್ ಮತ್ತು ತಮಿಳು ತಲೈವಾಸ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧಾ ನಡುವಿನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಜಯ ಸಾಧಿಸಿದೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಪಂದ್ಯಕ್ಕೆ ತೆಲುಗು ಚಿತ್ರರಂಗದ ನಟ ಜೂನಿಯರ್ ಎನ್‌ಟಿಆರ್ ಕನ್ನಡದಲ್ಲಿಯೇ ಕಾಮೆಂಟರಿ ಮಾಡುವ ಮುಖಾಂತರ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ಹೌದು, ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ನಡುವೆ ನಡೆದ ಪಂದ್ಯಕ್ಕೆ ತಮ್ಮ ಮುಂದಿನ ಚಿತ್ರ ಆರ್ ಆರ್ ಆರ್ ಪ್ರಚಾರದ ನಿಟ್ಟಿನಲ್ಲಿ ಎನ್‌ಟಿಆರ್ ಕನ್ನಡದಲ್ಲಿ ಕಾಮೆಂಟರಿ ಮಾಡಿದ್ದು ವಿಶೇಷವಾಗಿತ್ತು. ಚಿತ್ರದ ಸಲುವಾಗಿ ಎನ್‌ಟಿಆರ್ ಕಾಮೆಂಟರಿ ಮಾಡಿದರೂ ಕೂಡ ಬೇರೆ ನಟರ ಹಾಗೂ ನಟಿಯರ ರೀತಿ ಹೆಚ್ಚು ಆಂಗ್ಲ ಭಾಷೆಯನ್ನು ಬಳಸದೇ, ಆಗಾಗ ತೆಲುಗು ಪದಗಳನ್ನು ತುರುಕುವ ಕೆಲಸಕ್ಕೆ ಕೈಹಾಕದೇ ಬಹುತೇಕ ಪಾಲು ಕನ್ನಡದಲ್ಲಿಯೇ ಸ್ವಚ್ಚವಾಗಿ ಕಾಮೆಂಟರಿ ಮಾಡುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಈ ಹಿಂದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದ ಜೂನಿಯರ್ ಎನ್‌ಟಿಆರ್ ಅವರ ತಾಯಿ ಕೂಡ ಕರ್ನಾಟಕದವರೇ ಆದ್ದರಿಂದ ಎನ್‌ಟಿಆರ್ ಕನ್ನಡ ಭಾಷೆ ಮೇಲೆ ಒಂದು ಹಂತದ ಹಿಡಿತವನ್ನು ಹೊಂದಿದ್ದು, ಅವರ ಪ್ರೋ ಕಬಡ್ಡಿ ಲೀಗ್ ಕಾಮೆಂಟರಿ ಕೇಳಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಳಕಂಡಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಕನ್ನಡ ಮಾತನಾಡುತ್ತಿರುವ ಚಿತ್ರದೊಂದಿಗೆ ಕನ್ನಡ ನಟ ಪುನೀತ್ ರಾಜ್ ಕುಮಾರ್ ಅವರು ನಗುತ್ತಿರುವ ಚಿತ್ರವನ್ನು ಬಳಸಿ ಮೀಮ್ ಮಾಡಿರುವ ಕನ್ನಡದ ಸಿನಿಮಾ ಪುಟವೊಂದು ಜೂನಿಯರ್ ಎನ್‌ಟಿಆರ್ ಕನ್ನಡವನ್ನು ಕೇಳುವುದೇ ಚೆಂದ ಎಂದು ಬರೆದುಕೊಂಡು ತಮ್ಮ ಖುಷಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದೇ ರೀತಿ ಜೂನಿಯರ್ ಎನ್‌ಟಿಆರ್ ಕರ್ನಾಟಕದ ಅಭಿಮಾನಿ ಬಳಗ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು 'ಎನ್‌ಟಿಆರ್ ಅಣ್ಣಾ ನಿಮ್ಮ ಮುದ್ದಾದ ಸ್ಪಷ್ಟ ಕನ್ನಡ, ಕನ್ನಡದ ಬಗ್ಗೆ ನಿಮ್ಮ ಪ್ರೀತಿ ನಿರಂತರವಾಗಿರಲಿ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮತ್ತೋರ್ವ ನೆಟ್ಟಿಗ ಜೂನಿಯರ್ ಎನ್‌ಟಿಆರ್ ಅಧಿಕೃತ ಟ್ವಿಟರ್ ಖಾತೆಯನ್ನು ಉಲ್ಲೇಖಿಸಿ ಎನ್‌ಟಿಆರ್ ಕನ್ನಡ ಕಾಮೆಂಟರಿಯ ವಿಡಿಯೋವನ್ನು ಹಂಚಿಕೊಂಡು, ಕನ್ನಡ ಮಾತನಾಡಿರುವುದಕ್ಕೆ ಕೃತಜ್ಞತೆ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications