ಪ್ರೋ ಕಬಡ್ಡಿ ಲೀಗ್ 8: ಪಂದ್ಯದ ಕೊನೆಯ ರೈಡ್ ಮೂಲಕ ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದ ಯುಪಿ ಯೋಧಾ

ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ನಾಲ್ಕನೇ ದಿನದಾಟದ ಮೊದಲನೇ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಿದವು. ಈ ಹಣಾಹಣಿಯಲ್ಲಿ ಅಂತಿಮ ರೈಡ್ ಮೂಲಕ ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದಿರುವ ಯುಪಿ ಯೋಧಾ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಹಾಗೂ ಈ ಬಾರಿಯ ಆವೃತ್ತಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಗೆದ್ದಿದ್ದ ಪಾಟ್ನಾ ಪೈರೇಟ್ಸ್ ತನ್ನ ಎರಡನೇ ಪಂದ್ಯದಲ್ಲಿ ಗೆಲ್ಲುವ ಅವಕಾಶವನ್ನು ಅಂತಿಮ ಹಂತದಲ್ಲಿ ಕೈ ತಪ್ಪಿಸಿಕೊಂಡಿದೆ.
ಹತ್ತನೇ ನಿಮಿಷದಲ್ಲಿ ಯುಪಿ ಯೋಧಾದ ಶ್ರೀಕಾಂತ್ ಜಾಧವ್ 3 ಪಾಯಿಂಟ್ಸ್ ಸೂಪರ್ ರೈಡ್ ಮಾಡುವ ಮೂಲಕ 3 ಬಾರಿ ಚಾಂಪಿಯನ್ಸ್ ಆಗಿರುವ ಪಾಟ್ನಾ ಪೈರೇಟ್ಸ್ ತಂಡಕ್ಕೆ ನಡುಕ ಹುಟ್ಟಿಸಿದರು. ಹೀಗೆ ಆರಂಭದಲ್ಲಿಯೇ ಆಘಾತ ಅನುಭವಿಸಿದ ಪಾಟ್ನಾ ಪೈರೇಟ್ಸ್ ತಂಡದ ಸಚಿನ್ ತಕ್ಷಣವೇ ಪ್ರಮುಖ ರೇಡ್ ಪಾಯಿಂಟ್ ಅನ್ನು ಸಂಪಾದಿಸಿದರು ಹಾಗೂ ಅದರ ಬೆನ್ನಲ್ಲೇ ಸೂಪರ್ ಟ್ಯಾಕಲ್ ಅನ್ನು ಕೂಡ ಮಾಡಿದರು. ಹೀಗೆ ಆರಂಭದಲ್ಲಿಯೇ ಇತ್ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಇದಾದ ಬೆನ್ನಲ್ಲೇ ಪಾಟ್ನಾ ಪೈರೇಟ್ಸ್ ತಂಡ ಮಹಮ್ಮದ್ರೆಜಾ ಮತ್ತು ಸಚಿನ್ ಅವರ ಉತ್ತಮ ಆಟದೊಂದಿಗೆ 4 ಸೂಪರ್ ಟ್ಯಾಕಲ್ ಮಾಡಿ 20-12 ಅಂಕಗಳ ಮುನ್ನಡೆಯೊಂದಿಗೆ ಮೊದಲಾರ್ಧವನ್ನು ಮುಗಿಸಿತು. ಈ ಮೂಲಕ ಪಾಟ್ನಾ ಪೈರೇಟ್ಸ್ ಮೊದಲನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿತಾದರೂ ಎರಡೂ ತಂಡಗಳು ಕೂಡ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಗಲಿಲ್ಲ.
ಇನ್ನು ಪಂದ್ಯದ ದ್ವಿತೀಯಾರ್ಧದ ಪೂರ್ತಿ ಇತ್ತಂಡಗಳ ರಕ್ಷಣಾ ವಿಭಾಗಗಳೇ ಹಿಡಿತವನ್ನು ಸಾಧಿಸಿದವು. ಆದರೆ ಪಟ್ನಾ ಪೈರೇಟ್ಸ್ ತಂಡದ ಕೆಲವೊಂದು ತಪ್ಪುಗಳಿಂದ ಹತ್ತೇ ನಿಮಿಷಗಳ ಅವಧಿಯಲ್ಲಿ ಆಲ್ ಔಟ್ ಆಗಬೇಕಾದ ಪರಿಸ್ಥಿತಿ ಬಂತು ಹಾಗೂ ಆ ಸಮಯಕ್ಕೆ ಯುಪಿ ಯೋಧ 3 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿತು. ಹೀಗೆ ಮೊದಲ ಸುತ್ತಿನ ಅಂತ್ಯದಲ್ಲಿ ಹಿನ್ನಡೆ ಅನುಭವಿಸಿದ್ದ ಯುಪಿ ಯೋಧಾ ಮುನ್ನಡೆ ಕಾಯ್ದುಕೊಂಡು ಅದೇ ರೀತಿ ಉತ್ತಮ ಪ್ರದರ್ಶನವನ್ನು ನೀಡಿತು. ಜೊತೆಗೆ ಪಾಟ್ನಾ ಪೈರೇಟ್ಸ್ ತಂಡದ ಕೆಲವು ತಪ್ಪುಗಳಿಂದ ಯುಪಿ ಯೋಧಾ ತನ್ನ ಮುನ್ನಡೆಯನ್ನು ಮುಂದುವರಿಸಿತು. ಅಂತಿಮ ಹಂತದಲ್ಲಿ ಮಾಡು ಇಲ್ಲವೇ ಮಡಿ ರೈಡ್ ಮಾಡಿದ ಯುಪಿ ಯೋಧಾ ತಂಡದ ಸುರೇಂದರ್ ಗಿಲ್ ತಮ್ಮ ಚಾಣಾಕ್ಷತನದಿಂದ ಬೋನಸ್ ಪಾಯಿಂಟ್ ಬಾಚಿದರು. ಈ ಅಂತಿಮ ರೈಡ್ ಮೂಲಕ ಯುಪಿ ಯೋಧಾ ಪಾಟ್ನಾ ಪೈರೇಟ್ಸ್ ವಿರುದ್ಧ 36-35 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಪಾಟ್ನಾ ಪೈರೇಟ್ಸ್ ತಂಡ ಮಾಜಿ ರೈಡರ್ ಪ್ರದೀಪ್ ನರ್ವಾಲ್ ಯುಪಿ ಯೋಧಾ ತಂಡದ ಪರ 12 ಅಂಕಗಳನ್ನು ಗಳಿಸಿದರು ಮತ್ತು ಇದು ಪಂದ್ಯದ ಅತ್ಯಂತ ಹೆಚ್ಚು ಅಂಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications