Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PKL 2022: ಭರತ್ ಮಿಂಚಿನ ದಾಳಿ; ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

PKL 2022: Bengaluru Bulls Beat Patna Pirates By 57-44 Points

ಬುಧವಾರ, ಡಿಸೆಂಬರ್ 7ರಂದು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 9ರಲ್ಲಿ ಬೆಂಗಳೂರು ಬುಲ್ಸ್ ತಂಡವು ಪಾಟ್ನಾ ಪೈರೇಟ್ಸ್ ತಂಡವನ್ನು 57-44 ಅಂಕಗಳಿಂದ ಸೋಲಿಸಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟಾರ್ ರೈಡರ್ ಭರತ್ ಮತ್ತೊಮ್ಮೆ 20 ಅಂಕಗಳೊಂದಿಗೆ ಬೆಂಗಳೂರು ಬುಲ್ಸ್ ಪರ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು. ರೈಡಿಂಗ್ ವಿಭಾಗದಲ್ಲಿ ಸಜಿನ್ ನರ್ವಾಲ್ (7 ಅಂಕ) ಮತ್ತು ನೀರಜ್ ನರ್ವಾಲ್ (10 ಅಂಕ) ಕೂಡ ಗಳಿಸಿದರು. ಡಿಫೆಂಡರ್‌ಗಳಾಗಿ ಮಹೇಂದರ್ ಸಿಂಗ್ (4 ಅಂಕ), ಸೌರಭ್ ನಂದಲ್ (3 ಅಂಕ) ಮತ್ತು ಅಮನ್ (2 ಅಂಕ) ಅಂಕ ಗಳಿಸಿ ಮಿಂಚಿದರು.

ಇನ್ನು ಪಾಯಿಂಟ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ಪರ ರೋಹಿತ್ ಗುಲಿಯಾ (10 ಅಂಕ) ಅತ್ಯುತ್ತಮ ಪ್ರದರ್ಶನ ನೀಡಿದರು. ಆನಂದ್ ತೋಮರ್ (5 ಅಂಕ) ಮತ್ತು ಡೇನಿಯಲ್ ಒಡಿಹಂಬೊ (4 ಅಂಕ) ಗಳಿಸುವ ಮೂಲಕ ತಂಡದ ಪರ ಮಿಂಚಿದರು. ಆದರೆ ತಮ್ಮ ತಂಡ ಗೆಲುವು ಸಾಧಿಸಲು ಇದು ಸಹಾಯವಾಗಲಿಲ್ಲ.

ಪಟ್ಟುಬಿಡದೆ ದಾಳಿ ನಡೆಸಿದ ಭರತ್ ಆಲೌಟ್ ಮಾಡಿದರು

ಪಟ್ಟುಬಿಡದೆ ದಾಳಿ ನಡೆಸಿದ ಭರತ್ ಆಲೌಟ್ ಮಾಡಿದರು

7ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ 13-6ರಲ್ಲಿ ಮುನ್ನಡೆ ಸಾಧಿಸಿದಾಗ ಭರತ್ ಕೆಲವು ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಎದುರಾಳಿ ಪಾಟ್ನಾ ಪೈರೇಟ್ಸ್ ಆಲೌಟ್ ಅಂಚಿನಲ್ಲಿತ್ತು. ಆದರೆ ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ ತಮ್ಮ ತಂಡವನ್ನು ಮತ್ತೆ ಅಟದಲ್ಲಿರುವಂತೆ ಮಾಡಲು ಅದ್ಭುತ ದಾಳಿ ನಡೆಸಿದರು.

ಆದರೂ, ಪಟ್ಟುಬಿಡದೆ ದಾಳಿ ನಡೆಸಿದ ಭರತ್ ಶೀಘ್ರದಲ್ಲೇ ಸೂಪರ್-ರೈಡಿಂಗ್ ಮೂಲಕ ಪಾಟ್ನಾ ತಂಡವು ಆಲೌಟ್ ಅಗುವಂತೆ ಮಾಡಿದರು. ನಂತರ 13ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ 23-12ರಲ್ಲಿ ಬೃಹತ್ ಮುನ್ನಡೆ ಸಾಧಿಸಿದರು.

ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧದಲ್ಲಿ 31-16ರಲ್ಲಿ ಮುನ್ನಡೆ

ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧದಲ್ಲಿ 31-16ರಲ್ಲಿ ಮುನ್ನಡೆ

ಪಾಟ್ನಾ ತಂಡದ ಸಚಿನ್ ಅದ್ಭುತ ದಾಳಿ ಮೂಲಕ ಎರಡು ಪಾಯಿಂಟ್ ಗಳಿಸಿದರೂ ಬೆಂಗಳೂರು ತಂಡ 25-14ರಲ್ಲಿ ಆರಾಮದಾಯಕ ಮುನ್ನಡೆ ಸಾಧಿಸಿತು. ತದನಂತರವೂ ಬುಲ್ಸ್ ತಂಡದ ಪ್ರಾಬಲ್ಯವನ್ನು ಮುಂದುವರಿಸಿದ ಭರತ್ 17ನೇ ನಿಮಿಷದಲ್ಲಿ ಸುನಿಲ್ ಮತ್ತು ಸಚಿನ್ ಅವರನ್ನು ಔಟ್ ಮಾಡಿದರು. ಆಗ ಬೆಂಗಳೂರು ಬುಲ್ಸ್ ತಂಡವು ಮೊದಲಾರ್ಧವನ್ನು 31-16ರಲ್ಲಿ ಮುನ್ನಡೆ ಸಾಧಿಸಿತು.

ಭರತ್ ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಅತ್ಯುತ್ತಮ ದಾಳಿ ಮುಂದುವರೆಸಿದರು ಮತ್ತು ಪಾಟ್ನಾ ಪೈರೇಟ್ಸ್ ತಂಡವನ್ನು ಅಂಕಣದಲ್ಲಿ ಕೇವಲ ಒಬ್ಬ ಆಟಗಾರನಿಗೆ ಇಳಿಸಿದರು. ಕೆಲವೇ ಸಮಯದ ನಂತರ ಬೆಂಗಳೂರು ಬುಲ್ಸ್ ಮತ್ತೊಂದು ಆಲೌಟ್ ಮಾಡಿತು ಮತ್ತು 36-18 ಅಂಕಗಳ ಮೂಲಕ 18 ಪಾಯಿಂಟ್‌ಗಳ ಬೃಹತ್ ಮುನ್ನಡೆ ಗಳಿಸಿತು. ಬೆಂಗಳೂರು ಗೂಳಿಗಳು ಮುನ್ನುಗ್ಗುತ್ತಲೇ ಇದ್ದಾಗ, ಸಜಿನ್ ನರ್ವಾಲ್ ಅವರು ರೈಡಿಂಗ್ ವಿಭಾಗದಲ್ಲಿ ಭರತ್‌ಗೆ ಬೆಂಬಲ ನೀಡಿದರು.

ಬೆಂಗಳೂರು ಬುಲ್ಸ್ 46-31ರಲ್ಲಿ ದೊಡ್ಡ ಮುನ್ನಡೆ

ಬೆಂಗಳೂರು ಬುಲ್ಸ್ 46-31ರಲ್ಲಿ ದೊಡ್ಡ ಮುನ್ನಡೆ

33ನೇ ನಿಮಿಷದಲ್ಲಿ ಮಹೇಂದರ್ ಸಿಂಗ್ ಅದ್ಭುತ ಸೂಪರ್ ಟ್ಯಾಕಲ್ ಮೂಲಕ ಬೆಂಗಳೂರು ಬುಲ್ಸ್ 43-28ರಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿದರು. ಪಾಟ್ನಾ ಪೈರೇಟ್ಸ್ ತಂಡದ ಆನಂದ್ ತೋಮರ್ 36ನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿದರು. ಆದರೂ, ಬೆಂಗಳೂರು ಬುಲ್ಸ್ 46-31ರಲ್ಲಿ ದೊಡ್ಡ ಮುನ್ನಡೆ ಕಾಯ್ದುಕೊಂಡಿತು.

ಪಂದ್ಯದ ಕೊನೆಯ ನಿಮಿಷದಲ್ಲಿ ಪಾಟ್ನಾ ಪೈರೇಟ್ಸ್ ಮತ್ತೊಮ್ಮೆ ಅಲೌಟ್ ಆದರು. ಬೆಂಗಳೂರು ಬುಲ್ಸ್ ತಂಡದ ಸ್ಕೋರ್‌ಗಿಂತ ತುಂಬಾ ಹಿಂದುಳಿದಿದ್ದ ಪಾಟ್ನಾ ಪೈರೇಟ್ಸ್ ಸೋಲಿನ ರುಚಿ ಕಂಡಿತು. ಬೆಂಗಳೂರು ಬುಲ್ಸ್ ಆಟಗಾರರು ಅಂತಿಮವಾಗಿ ಸಮಗ್ರ ವಿಜಯವನ್ನು ತಮ್ಮದಾಗಿಸಿಕೊಂಡರು.

Story first published: Thursday, December 8, 2022, 2:40 [IST]
Other articles published on Dec 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+