PKL 2022: ದಬಾಂಗ್ ಡೆಲ್ಲಿಗೆ ಡಿಚ್ಚಿ ಹೊಡೆಯಲು ಸಜ್ಜಾದ ಗೂಳಿಗಳು

ಪ್ರೊ ಕಬಡ್ಡಿ ಲೀಗ್ ಸೀಸನ್ 9 ರ ಪುಣೆ ಲೆಗ್‌ನ ಎರಡನೇ ದಿನ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲಿದೆ. ಶನಿವಾರ ಪುಣೆಯ ಬಾಲೆವಾಡಿಯಲ್ಲಿರುವ ಶ್ರೀ ಶಿವಚತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಈ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಪ್ರೊ ಕಬಟ್ಟಿ ಲೀಗ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ-3 ರಲ್ಲಿ ಇರುವುದರಿಂದ ಇದು ಹೈ-ವೋಲ್ಟೇಜ್ ಪಂದ್ಯವಾಗುವ ಸಾಧ್ಯತೆ ಇದೆ.
ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ಪಂದ್ಯ 45 ರಲ್ಲಿ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ಕೆಸಿ ಜೊತೆ ಮುಖಾಮುಖಿಯಾಗಲಿದೆ. ದಬಾಂಗ್ ಡೆಲ್ಲಿ ಪಿಕೆಎಲ್ 9 ರ 12 ತಂಡಗಳ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಬುಲ್ಸ್ ಮೂರನೇ ಸ್ಥಾನದಲ್ಲಿದೆ.
ಬೆಂಗಳೂರು ಬುಲ್ಸ್ ತಮ್ಮ ಕೊನೆಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ರೋಚಕ ಟೈ ಸಾಧಿಸಿತ್ತು. ಭಾನುವಾರ, ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾಟ್ನಾ ಪೈರೇಟ್ಸ್ ಪಂದ್ಯದ ಬಹುಪಾಲು ಮೇಲುಗೈ ಸಾಧಿಸಿತು, ಆದರೆ, ಬೆಂಗಳೂರು ಬುಲ್ಸ್ ಕೊನೆಯವರೆಗೂ ತನ್ನ ಹೋರಾಟವನ್ನು ಬಿಡಲಿಲ್ಲ.

ಕೊನೆಯಲ್ಲಿ ತಿರುಗಿ ಬಿದ್ದ ಬುಲ್ಸ್
ಪಂದ್ಯದ ಕೊನೆಯ ನಿಮಿಷದಲ್ಲಿ ಪೈರೇಟ್ಸ್ ಮುನ್ನಡೆ ಕಾಯ್ದುಕೊಂಡಿತು, ಆದರೆ ಬೆಂಗಳೂರು ಬುಲ್ಸ್ ಕೊನೆಯ ಕ್ಷಣದಲ್ಲಿ ಪೈರೇಟ್ಸ್ ತಂಡವನ್ನು ಆಲ್ ಔಟ್ ಮಾಡಿತು. ರೋಹಿತ್ ಗುಲಿಯಾ ಅವರನ್ನು ಟ್ಯಾಕಲ್ ಮಾಡುವ ಮೂಲಕ ಅಂತಿಮವಾಗಿ 31-31ರಲ್ಲಿ ಪಂದ್ಯವನ್ನು ಟೈನಲ್ಲಿ ಕೊನೆಗೊಳಿಸಿತು.
ಬೆಂಗಳೂರು ಬುಲ್ಸ್ ಇದುವರೆಗೆ ನಾಲ್ಕು ಗೆಲುವು ಸಾಧಿಸಿದೆ, ಒಂದು ಟೈ ಮತ್ತು ಎರಡು ಸೋಲುಗಳನ್ನು ಅನುಭವಿಸಿದೆ. ಬುಲ್ಸ್ ಪರವಾಗಿ ಭರತ್ 72 ರೇಡ್ ಪಾಯಿಂಟ್ ಗಳಿಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ವಿಕಾಶ್ ಕಂಡೋಲಾ 52 ರೇಡ್ ಪಾಯಿಂಟ್‌ಗಳೊಂದಿಗೆ ಎದುರಾಳಿಗಳಿಗೆ ಮಾರಕವಾಗಿದ್ದಾರೆ. ರಕ್ಷಣಾ ವಿಭಾಗದಲ್ಲಿ ಸೌರಭ್ ನಂದಲ್ 21 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಅತ್ಯುತ್ತಮ ಟ್ಯಾಕರ್ ಆಗಿದ್ದಾರೆ. ಅಮನ್ ಮತ್ತು ನಾಯಕ ಮಹೇಂದರ್ ಸಿಂಗ್ ತಲಾ 14 ಟ್ಯಾಕಲ್ ಪಾಯಿಂಟ್ ಗಳಿಸಿದ್ದಾರೆ.
PKL 2022: ಪುಣೇರಿ ಪಲ್ಟನ್, ಹರಿಯಾಣ ಸ್ಟೀಲರ್ಸ್ ಸಮಬಲದ ಹೋರಾಟ, ರೋಚಕ ಪಂದ್ಯ ಟೈನಲ್ಲಿ ಅಂತ್ಯ

ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿಗೆ ಸೋಲು
ಇದೇ ವೇಳೆ ದಬಾಂಗ್ ಡೆಲ್ಲಿ ಕೆ.ಸಿ. ತಮ್ಮ ಕೊನೆಯ ಎರಡು ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಐದು ಗೆಲುವು ಮತ್ತು ಎರಡು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ತಂಡದ ನಾಯಕ ನವೀನ್ ಕುಮಾರ್ ಈ ಋತುವಿನಲ್ಲಿ ಸತತ ಏಳು ಸೂಪರ್ 10 ಗಳೊಂದಿಗೆ 91 ರೇಡ್ ಪಾಯಿಂಟ್‌ಗಳೊಂದಿಗೆ ಪ್ರಮುಖ ರೈಡರ್ ಆಗಿದ್ದಾರೆ. ಮಂಜೀತ್ ಮತ್ತು ಅಶು ಮಲಿಕ್ ಕ್ರಮವಾಗಿ 38 ಮತ್ತು 28 ಅಂಕಗಳನ್ನು ಗಳಿಸಿದ್ದಾರೆ.
ದಬಾಂಗ್ ಡೆಲ್ಲಿ ಕೆ.ಸಿ. ರಕ್ಷಣಾ ವಿಭಾಗದಲ್ಲಿ ಕ್ರಿಶನ್ 22 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ ಮತ್ತು 18 ಮತ್ತು 14 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ವಿಶಾಲ್ ಮತ್ತು ರವಿಕುಮಾರ್ ಅವರಿಗೆ ಸಾಥ್ ನೀಡಿದ್ದಾರೆ.

ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ ಆಟಗಾರರು
ಬೆಂಗಳೂರು ಬುಲ್ಸ್ ತಂಡ
ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್
ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್
ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್
ದಬಾಂಗ್ ದೆಹಲಿ ಕೆ.ಸಿ. ತಂಡ
ರೈಡರ್ಸ್: ನವೀನ್ ಕುಮಾರ್, ಸೂರಜ್ ಪನ್ವಾರ್, ಆಶಿಶ್ ನರ್ವಾಲ್, ಮಂಜೀತ್, ಅಶು ಮಲಿಕ್
ಡಿಫೆಂಡರ್ಸ್: ಸಂದೀಪ್ ಕುಮಾರ್ (ಧೂಲ್), ವಿಶಾಲ್, ಆಕಾಶ್, ಅಮಿತ್ ಹೂಡಾ, ಅನಿಲ್ ಕುಮಾರ್, ಎಂಡಿ ಲಿಟನ್ ಅಲಿ, ರವಿಕುಮಾರ್, ಕ್ರಿಶನ್, ದೀಪಕ್, ವಿಜಯ್, ವಿನಯ್ ಕುಮಾರ್, ಮೋನು
ಆಲ್‌ರೌಂಡರ್‌ಗಳು: ವಿಜಯ್, ರೆಜಾ ಕಟೌಲಿನೆಜಾದ್, ತೇಜಸ್ ಮಾರುತಿ ಪಾಟೀಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications