PKL 2022: ಯುಪಿ ಯೋಧಾಸ್‌ಗೆ ಗುಜರಾತ್ ಜೈಂಟ್ಸ್ ಸವಾಲು, ಪಂದ್ಯದ ಸಮಯ, ಬಲಾಬಲ ವಿವರ

ಬುಧವಾರ ನಡೆಯಲಿರುವ ಪ್ರೊ ಕಬಡ್ಡಿ ಲೀಗ್ ಸೀಸನ್ 9ರ ಸ್ಪರ್ಧೆಯಲ್ಲಿ ಗುಜರಾತ್ ಜೈಂಟ್ಸ್ ತಂಡವು ಯುಪಿ ಯೋಧಾಸ್ ತಂಡವನ್ನು ಎದುರಿಸಲಿದೆ. ಚಂದ್ರನ್ ರಂಜಿತ್ ನೇತೃತ್ವದ ಗುಜರಾತ್ ಜೈಂಟ್ಸ್ ಇಲ್ಲಿಯವರೆಗೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಬೆಂಗಳೂರು ಬುಲ್ಸ್ ವಿರುದ್ಧ ಅದ್ಭುತ ಗೆಲುವಿನ ನಂತರ ಯುಪಿ ಯೋಧಾಸ್ ಆತ್ಮವಿಶ್ವಾಸದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ.
ಗುಜರಾತ್ ಜೈಂಟ್ಸ್ ಈ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಇದುವರೆಗೆ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತಿದ್ದರು. ರೈಡರ್ ರಾಕೇಶ್ ಮಾತ್ರ ಗುಜರಾತ್ ತಂಡದಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ನಾಲ್ಕು ಪಂದ್ಯಗಳಲ್ಲಿ 34 ರೇಡ್ ಅಂಕಗಳನ್ನು ಗಳಿಸಿದ್ದಾರೆ.
ಜೈಪುರ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ ಎರಡು ರೇಡ್ ಪಾಯಿಂಟ್ ಗಳಿಸಿದರು, ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಗುಜರಾತ್ ಸೋಲನ್ನಪ್ಪಿತು. ಯುಪಿ ಯೋಧಾಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಲು ಎದುರುನೋಡುತ್ತಿದ್ದಾರೆ.

ಉತ್ತಮ ಆಟ ಆಡಿದರಷ್ಟೆ ಗೆಲ್ಲಲು ಸಾಧ್ಯ
ಗುಜರಾತ್ ತಂಡದ ಕ್ಯಾಪ್ಟನ್ ಚಂದ್ರನ್ ರಂಜಿತ್ ಮತ್ತು ಆಲ್ ರೌಂಡರ್ ಪಾರ್ತೀಕ್ ಧೈಯಾ ಇದುವರೆಗೆ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದರೆ ಮಾತ್ರವೇ ಗುಜರಾತ್‌ಗೆ ಗೆಲ್ಲುವ ಸಾಧ್ಯತೆ ಇರುತ್ತದೆ.
ಡಿಫೆಂಡರ್‌ಗಳಾದ ಸೌರವ್ ಗುಲಿಯಾ ಮತ್ತು ಆಲ್‌ರೌಂಡರ್‌ಗಳಾದ ಅರ್ಕಮ್ ಶೇಖ್ ಮತ್ತು ಶಂಕರ್ ಗಡಾಯಿ ಕೂಡ ರಕ್ಷಣೆಯಲ್ಲಿ ಉಪಯುಕ್ತ ಕೊಡುಗೆಗಳನ್ನು ನೀಡಿದ್ದಾರೆ. ಯುಪಿ ಯೋಧಾಸ್‌ನ ಪರ್ದೀಪ್ ನರ್ವಾಲ್ ಮತ್ತು ಸುರೇಂದರ್ ಗಿಲ್ ಅವರಂತಹ ರೈಡರ್‌ಗಳ ವಿರುದ್ಧ ಉತ್ತಮ ಆಟ ಪ್ರದರ್ಶಿಸಬೇಕಿದೆ.
MS ಧೋನಿಯ ಆ ಒಂದು ಸಲಹೆ ನನ್ನ ಆಟವನ್ನೇ ಬದಲಿಸಿಬಿಟ್ಟಿತು: ಹಾರ್ದಿಕ್ ಪಾಂಡ್ಯ

ಗೆಲುವಿನ ವಿಶ್ವಾಸದಲ್ಲಿರುವ ಯುಪಿ ಯೋಧಾಸ್
ಮತ್ತೊಂದೆಡೆ, ಯುಪಿ ಯೋಧಾಸ್‌ನ ಪರ್ದೀಪ್ ನರ್ವಾಲ್ ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 14 ರೇಡ್ ಪಾಯಿಂಟ್‌ಗಳನ್ನು ಪಡೆಯುವ ಋತುವಿನ ಮೊದಲ ಸೂಪರ್ 10 ಅನ್ನು ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.
ನರ್ವಾಲ್ ಮತ್ತು ಸುರೇಂದರ್ ಗಿಲ್ ಇಬ್ಬರೂ ಒಟ್ಟು 28 ರೇಡ್ ಪಾಯಿಂಟ್‌ಗಳನ್ನು ಪಡೆದು ಯೋಧಾಸ್ ಬೆಂಗಳೂರು ಬುಲ್ಸ್ ವಿರುದ್ಧ ದೊಡ್ಡ ಜಯ ಸಾಧಿಸಲು ಸಹಾಯ ಮಾಡಿದರು. ಇಬ್ಬರೂ ರೈಡರ್‌ಗಳು ಮತ್ತೊಮ್ಮೆ ಗುಜರಾತ್ ಜೈಂಟ್ಸ್ ವಿರುದ್ಧ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಅಶು ಸಿಂಗ್ 13 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಯೋಧಾಸ್‌ಗೆ ಅತ್ಯುತ್ತಮ ಡಿಫೆಂಡರ್ ಆಗಿದ್ದಾರೆ. ನಾಯಕ ನಿತೇಶ್ ಕುಮಾರ್ ಕೂಡ ಇದುವರೆಗೆ 10 ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ.

ಉಭಯ ತಂಡಗಳ ಆಟಗಾರರು
ಗುಜರಾತ್ ಜೈಂಟ್ಸ್
ರೈಡರ್ಸ್: ಚಂದ್ರನ್ ರಂಜಿತ್, ಪರ್ದೀಪ್ ಕುಮಾರ್, ರಾಕೇಶ್, ಡಾಂಗ್ ಜಿಯೋನ್ ಲೀ, ಮಹೇಂದ್ರ ಗಣೇಶ್ ರಜಪೂತ್, ಪೂರ್ಣ ಸಿಂಗ್, ಸವಿನ್, ಗೌರವ್ ಚಿಕಾರಾ, ಪಾರ್ತೀಕ್ ಧೈಯಾ, ಸೋಹಿತ್, ಸೋನು, ಸೋನು ಸಿಂಗ್
ಡಿಫೆಂಡರ್‌ಗಳು: ಬಲದೇವ್ ಸಿಂಗ್, ಕಪಿಲ್, ಮನುಜ್, ಉಜ್ವಲ್ ಸಿಂಗ್, ಸೌರವ್ ಗುಲಿಯಾ, ವಿನೋದ್ ಕುಮಾರ್, ಯಂಗ್‌ಚಾಂಗ್ ಕೊ, ರಿಂಕು ನರ್ವಾಲ್, ಸಂದೀಪ್ ಕಂಡೋಲಾ
ಆಲ್‌ರೌಂಡರ್‌ಗಳು: ಅರ್ಕಮ್ ಶೇಖ್, ಶಂಕರ್ ಭೀಮರಾಜ್ ಗಡಾಯಿ, ರೋಹನ್ ಸಿಂಗ್
ಯು.ಪಿ ಯೋಧಾಸ್
ರೈಡರ್ಸ್: ಪರ್ದೀಪ್ ನರ್ವಾಲ್, ನಿತಿನ್ ತೋಮರ್, ರಥನ್ ಕೆ, ಜೇಮ್ಸ್ ನಮಾಬಾ ಕಮ್ವೇಟಿ, ಗುಲ್ವೀರ್ ಸಿಂಗ್, ಸುರೇಂದರ್ ಗಿಲ್, ಅನಿಲ್ ಕುಮಾರ್, ದುರ್ಗೇಶ್ ಕುಮಾರ್, ಅಮನ್, ರೋಹಿತ್ ತೋಮರ್, ಮಹಿಪಾಲ್
ಡಿಫೆಂಡರ್ಸ್: ಅಬೋಜರ್ ಮೊಹಜರ್ ಮಿಘಾನಿ, ಬಾಬು ಮುರುಗಸನ್, ಜೈದೀಪ್, ಸುಮಿತ್, ನಿತೇಶ್ ಕುಮಾರ್, ಅಶು ಸಿಂಗ್, ಶುಭಂ ಕುಮಾರ್
ಆಲ್‌ರೌಂಡರ್‌ಗಳು: ಗುರುದೀಪ್, ನೆಹಾಲ್ ದೇಸಾಯಿ, ನಿತಿನ್ ಪನ್ವಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications