For Quick Alerts
ALLOW NOTIFICATIONS  
For Daily Alerts

PKL 2022: ಹರ್ಯಾಣ ಸ್ಟೀಲರ್ಸ್‌ಗೆ ತೆಲುಗು ಟೈಟಾನ್ಸ್ ಸವಾಲು, ಸೋಲಿನ ಸರಪಳಿ ಕಳಚುವರ್‍ಯಾರು?

PKL 2022: Haryana Steelers vs Telugu Titans Match At Kanteerava Stadium, Match Prediction, Head To Head

ಪ್ರೊ ಕಬಡ್ಡಿ ಲೀಗ್ ಸೀಸನ್ 9ರ 39 ನೇ ಪಂದ್ಯದಲ್ಲಿ, ತೆಲುಗು ಟೈಟಾನ್ಸ್ ಹರಿಯಾಣ ಸ್ಟೀಲರ್ಸ್ ವಿರುದ್ಧ ಸೆಣೆಸಲಿದೆ. ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಬಯಸುತ್ತಿರುವ ಕಾರಣ ಇದು ಅತ್ಯುತ್ತಮ ಪಂದ್ಯವಾಗುವ ಸಾಧ್ಯತೆ ಇದೆ. 9 ನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಟೈಟಾನ್ಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮಂಗಳವಾರದ ಪಂದ್ಯ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾತ್ರಿ 8.30ಕ್ಕೆ ಆರಂಭವಾಗಲಿದೆ

ತೆಲುಗು ಟೈಟಾನ್ಸ್ ಒಂದು ಗೆಲುವು ಮತ್ತು ಐದು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ವಿನಯ್ ಟೈಟಾನ್ಸ್‌ಗಾಗಿ 30 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ ಮತ್ತು ತಂಡದ ಅಗ್ರ ಸ್ಕೋರರ್ ಆಗಿದ್ದಾರೆ. ಸಿದ್ಧಾರ್ಥ್ ದೇಸಾಯಿ ಮತ್ತು ಮೋನು ಗೋಯತ್ ಅವರಂತಹ ಅನುಭವಿ ಆಟಗಾರರು ಕ್ರಮವಾಗಿ 30 ಮತ್ತು 27 ರೇಡ್ ಪಾಯಿಂಟ್‌ ಪಡೆದಿದ್ದಾರೆ.

ತೆಲುಗು ಟೈಟಾನ್ಸ್‌ನ ರಕ್ಷಣಾ ವಿಭಾಗ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿಲ್ಲ, ಹರ್ಯಾಣ ವಿರುದ್ಧ ಸಂಯೋಜಿತ ಪ್ರಯತ್ನದೊಂದಿಗೆ ಬರಲು ಪ್ರಯತ್ನಿಸುತ್ತಿದೆ. ವಿಶಾಲ್ ಭಾರದ್ವಾಜ್ ಮತ್ತು ಸುರ್ಜೀತ್ ಸಿಂಗ್ 10 ಮತ್ತು ಒಂಬತ್ತು ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ತೆಲುಗು ಟೈಟಾನ್ಸ್‌ನ ಅಗ್ರ ಡಿಫೆಂಡರ್‌ಗಳಾಗಿದ್ದಾರೆ. ಪರ್ವೇಶ್ ಭೈನ್‌ವಾಲ್ ಅವರು ತೆಲುಗು ಟೈಟಾನ್ಸ್‌ನ ರಕ್ಷಣೆಗೆ ಹೆಚ್ಚಿನ ಬಲ ತುಂಬುತ್ತಾರೆ.

ತೆಲುಗು ಟೈಟಾನ್ಸ್ ತಮ್ಮ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 27-51 ರಿಂದ ಹೀನಾಯ ಸೋಲು ಕಂಡಿತು. ರೈಡರ್‌ಗಳಾದ ಅರ್ಜುನ್ ದೇಶ್‌ವಾಲ್, ರಾಹುಲ್ ಚೌಧರಿ ಮತ್ತು ಡಿಫೆಂಡರ್ ಸಾಹುಲ್ ಕುಮಾರ್ ಜೈಪುರ ಪಿಂಕ್ ಪ್ಯಾಂಥರ್ಸ್ ಪರವಾಗಿ ಮಿಂಚಿದ್ದರು.

PKL 2022: Haryana Steelers vs Telugu Titans Match At Kanteerava Stadium, Match Prediction, Head To Head

ಕೊನೆಯ ಪಂದ್ಯ ಸೋತಿರುವ ಹರ್ಯಾಣ

ಹರಿಯಾಣ ಸ್ಟೀಲರ್ಸ್ ಕೂಡ ತನ್ನ ಕೊನೆಯ ಪಂದ್ಯದಲ್ಲಿ ಸೋಲನ್ನಪ್ಪಿದೆ. ಸೀಸನ್‌ನ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ನಂತರ ನಾಲ್ಕು ಪಂದ್ಯಗಳಲ್ಲಿ ಸೋಲನ್ನಪ್ಪಿದ್ದಾರೆ. ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಲು ಬಯಸುತ್ತಾರೆ. ಅವರ ಪ್ರಮುಖ ರೈಡರ್ ಮೀಟೂ 45 ರೇಡ್ ಪಾಯಿಂಟ್‌ಗಳನ್ನು ಗಳಿಸಿ ಅಗ್ರ ಆಟಗಾರನಾಗಿದ್ದಾರೆ. ಮಂಜೀತ್ 44 ರೇಡ್ ಪಾಯಿಂಟ್‌ಗಳೊಂದಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ರಕ್ಷಣಾತ್ಮಕವಾಗಿ, ಮೋಹಿತ್ ಮತ್ತು ಜೈದೀಪ್ ದಹಿಯಾ ಕ್ರಮವಾಗಿ 14 ಮತ್ತು 15 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ತಂಡದ ಅತ್ಯುತ್ತಮ ಡಿಫೆಂಡರ್‌ಗಳಾಗಿದ್ದರೆ, ಆಲ್‌ರೌಂಡರ್ ನಿತಿನ್ ರಾವಲ್ ಎಂಟು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

PKL 2022: Haryana Steelers vs Telugu Titans Match At Kanteerava Stadium, Match Prediction, Head To Head

ತೆಲುಗು ಟೈಟಾನ್ಸ್ ತಂಡ

ರೈಡರ್ಸ್: ಅಭಿಷೇಕ್ ಸಿಂಗ್, ಮೋನು ಗೋಯತ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ರಜನೀಶ್, ಅಂಕಿತ್ ಬೇನಿವಾಲ್, ವಿನಯ್, ಅಮನ್ ಕಡಿಯನ್

ಡಿಫೆಂಡರ್ಸ್: ಸುರ್ಜೀತ್ ಸಿಂಗ್, ಪರ್ವೇಶ್ ಭೈನ್ಸ್ವಾಲ್, ವಿಶಾಲ್ ಭಾರದ್ವಾಜ್, ಆದರ್ಶ್ ಟಿ, ರವೀಂದರ್ ಪಹಲ್, ವಿಜಯ್ ಕುಮಾರ್, ನಿತಿನ್, ಮೋಹಿತ್, ಮೋಹಿತ್ ಪಹಲ್, ಮುಹಮ್ಮದ್ ಶಿಹಾಸ್ ಎಸ್.

ಆಲ್ ರೌಂಡರ್‌ಗಳು: ಮೊಹ್ಸೆನ್ ಮಗ್ಸೌದ್ಲೌ ಜಾಫರಿ, ಕೆ. ಹನುಮಂತು, ಹಮೀದ್ ಮಿರ್ಜಾಯಿ ನಾದರ್, ರವೀಂದರ್

ಹರಿಯಾಣ ಸ್ಟೀಲರ್ಸ್

ರೈಡರ್ಸ್: ಮಂಜೀತ್, ವಿನಯ್, ರಾಕೇಶ್ ನರ್ವಾಲ್, ಮೀಟು, ಸುಶೀಲ್, ಕೆ. ಪ್ರಪಂಜನ್, ಮೊಹಮ್ಮದ್ ಇಸ್ಮೈಲ್ ಮಗ್ಸೌದ್ಲೌ ಮಹಲ್ಲಿ, ಮನೀಶ್ ಗುಲಿಯಾ, ಲವ್‌ಪ್ರೀತ್ ಸಿಂಗ್

ಡಿಫೆಂಡರ್ಸ್: ಜೋಗಿಂದರ್ ಸಿಂಗ್ ನರ್ವಾಲ್, ಜೈದೀಪ್, ನವೀನ್, ಸನ್ನಿ, ಮೋನು, ಹರ್ಷ್, ಅಂಕಿತ್, ಅಮೀರ್ಹೋಸೇನ್ ಬಸ್ತಾಮಿ, ಮೋಹಿತ್

ಆಲ್ ರೌಂಡರ್: ನಿತಿನ್ ರಾವಲ್

Story first published: Monday, October 24, 2022, 23:28 [IST]
Other articles published on Oct 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+