PKL 2022: ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಅಗ್ರಸ್ಥಾನ, ಬೆಂಗಳೂರು ಬುಲ್ಸ್ ಎಷ್ಟನೇ ಸ್ಥಾನ ತಿಳಿಯಿರಿ

2022ರ ಅಕ್ಟೋಬರ್ 16ರಂದು ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ 2022ರಲ್ಲಿ ಯುಪಿ ಯೋಧಾಸ್ 44-37 ಅಂಕಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ಗೆಲುವಿನ ಹಾದಿಗೆ ಮರಳಿತು. ಪುಣೇರಿ ಪಲ್ಟನ್ ಯು ಮುಂಬಾವನ್ನು 30-28 ಅಂಕಗಳಿಂದ ಸೋಲಿಸಿತು. ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ಭಾನುವಾರ, ಅಕ್ಟೋಬರ್ 16 ರಂದು ಎರಡೂ ಪಂದ್ಯಗಳು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು.
ಪ್ರೊ ಕಬಡ್ಡಿ ಲೀಗ್ (PKL) ಅಂಕಗಳನ್ನು ಸರಳ ಸ್ವರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪ್ರತಿ ಗೆಲುವಿಗೆ ತಂಡಕ್ಕೆ 5 ಅಂಕಗಳು ಸಿಗುತ್ತವೆ. ಟೈ ಮಾಡಿಕೊಂಡರೆ ಎರಡೂ ತಂಡಗಳಿಗೆ ತಲಾ 3 ಅಂಕಗಳನ್ನು ಹಂಚಲಾಗುತ್ತದೆ. 7 ಅಥವಾ ಅದಕ್ಕಿಂತ ಕಡಿಮೆ ಪಾಯಿಂಟ್‌ಗಳ ಅಂತರದಲ್ಲಿ ಸೋತರೆ ಆ ತಂಡಕ್ಕೆ 1 ಅಂಕ ನೀಡಲಾಗುತ್ತದೆ. 7 ಕ್ಕಿಂತ ಹೆಚ್ಚಿನ ಪಾಯಿಂಟ್ ಅಂತರದಲ್ಲಿ ಸೋತರೆ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ.
ಲೀಗ್ ಕೊನೆಯ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ 6 ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯುತ್ತವೆ. ಪ್ರೋ ಕಬಡ್ಡಿ ಲೀಗ್ 9ನೇ ಸೀಸನ್‌ನಲ್ಲಿ ಒಟ್ಟು 12 ತಂಡಗಳು ಸ್ಪರ್ಧಿಸುತ್ತಿವೆ. ದಬಾಂಗ್ ಡೆಲ್ಲಿ ಕಳೆದ ಬಾರಿ ಪ್ರೊ ಕಬಡ್ಡಿ ಲೀಗ್‌ನ ಚಾಂಪಿಯನ್ ಆಗಿತ್ತು.

ಅಜೇಯವಾಗಿರುವ ದಬಾಂಗ್ ಡೆಲ್ಲಿ
ಕಳೆದ ಬಾರಿ ಚಾಂಪಿಯನ್ ಆಗಿದ್ದ ದಬಾಂಗ್ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದುವರೆಗೂ ನಾಲ್ಕು ಪಂದ್ಯಗಳನ್ನಾಡಿರುವ ಡೆಲ್ಲಿ, ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ತೆಲುಗು ಟೈಟಾನ್ಸ್ ವಿರುದ್ಧ 46-26 ಪಾಯಿಂಟ್‌ಗಳಿಂದ ಜಯ ಸಾಧಿಸಿತು.
ಯುಪಿ ಯೋಧಾ, ಗುಜರಾತ್ ಜೈಂಟ್ಸ್, ಯು ಮುಂಬಾ ತಂಡಗಳ ವಿರುದ್ಧ ಜಯ ಸಾಧಿಸುವ ಮೂಲಕ ಸಹಜವಾಗಿ ತನ್ನ ಚಾಂಪಿಯನ್ ಆಟವನ್ನು ಮುಂದುವರೆಸಿದೆ.
ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ಮೊಹಮ್ಮದ್ ಶಮಿ: 1 ಓವರ್, 4ರನ್, 3 ವಿಕೆಟ್

ಎರಡನೇ ಸ್ಥಾನದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್
ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಮತ್ತು ಒಂದು ಸೋಲಿನ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್ 15 ರಂದು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಎರಡನೇ ಸ್ಥಾನಕ್ಕೆ ಜಿಗಿಯಿತು.
ಯುಪಿ ಯೋಧಾಸ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಸೋಲು ಕಂಡ ಜೈಪುರ ಪಿಂಕ್ ಪ್ಯಾಂಥರ್ಸ್ ನಂತರದ ಮೂರು ಪಂದ್ಯಗಳಲ್ಲೂ ಯಶಸ್ವಿಯಾಗಿ ಗೆಲುವು ಸಾಧಿಸಿದೆ.

6ನೇ ಸ್ಥಾನದಲ್ಲಿದೆ ಬೆಂಗಳೂರು ಬುಲ್ಸ್
ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಕಂಡಿರುವ ಬೆಂಗಾಲ್ ವಾರಿಯರ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ 4 ಪಂದ್ಯಗಳಲ್ಲಿ 2 ಜಯ ಸಾಧಿಸಿರುವ ಯುಪಿ ಯೋಧಾಸ್ ನಾಲ್ಕನೇ ಸ್ಥಾನದಲ್ಲಿದೆ. 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಯು ಮುಂಬಾ 5ನೇ ಸ್ಥಾನದಲ್ಲಿದೆ.
ಟೂರ್ನಿಯಲ್ಲಿ ಇದುವರೆಗೆ ಸಾಧಾರಣ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್ 4 ಪಂದ್ಯಗಳನ್ನಾಡಿದ್ದು, ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಉಳಿದಂತೆ ಹರ್ಯಾಣ ಸ್ಟೀಲರ್ಸ್ 7ನೇ ಸ್ಥಾನದಲ್ಲಿದೆ. ಪುಣೇರಿ ಪಲ್ತಾನ್ಸ್, ಗುಜರಾತ್ ಜೈಂಟ್ಸ್, ತೆಲುಗು ಟೈಟಾನ್ಸ್, ತಮಿಳ್ ತಲೈವಾಸ್, ಪಟ್ನಾ ಪೈರೇಟ್ಸ್ ತಂಡಗಳು ಕ್ರಮವಾಗಿ 8, 9, 10, 11 ಮತ್ತು 12ನೇ ಸ್ಥಾನದಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications