ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾಗೆ ಅದ್ಭುತ ಕಂಬ್ಯಾಕ್ ಮಾಡಿದ ಮೊಹಮ್ಮದ್ ಶಮಿ: 1 ಓವರ್‌, 4ರನ್, 3 ವಿಕೆಟ್

Mohammad shami

ಬ್ರಿಸ್ಬೇನ್‌ ದಿ ಗಬ್ಬಾ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಆಸ್ಟ್ರೇಲಿಯಾವನ್ನು ಅಂತಿಮ ಓವರ್‌ನಲ್ಲಿ ಸೋಲಿಸಿದೆ. ಅದ್ರಲ್ಲೂ ಟೀಂ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಕಾಂಗರೂಗಳಿಗೆ ಶಾಕ್ ನೀಡಿದ್ರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಆರಂಭಿಕರಾಗಿ ರಾಹುಲ್ ಅಬ್ಬರಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ.

ರಾಹುಲ್-ಸೂರ್ಯ ಆಟಕ್ಕೆ ತತ್ತರಿಸಿದ ಕಾಂಗರೂ ಬೌಲಿಂಗ್

ರಾಹುಲ್-ಸೂರ್ಯ ಆಟಕ್ಕೆ ತತ್ತರಿಸಿದ ಕಾಂಗರೂ ಬೌಲಿಂಗ್

ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಂ ಇಂಡಿಯಾಗೆ ಭರ್ಜರಿ ಆರಂಭ ನೀಡಿದ್ರು. 33 ಎಸೆತಗಳಲ್ಲಿ 57ರನ್ ಕಲೆಹಾಕಿದ ರಾಹುಲ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿದ್ದವು. ರೋಹಿತ್ ಶರ್ಮಾ ಮತ್ತು ಕೊಹ್ಲಿ ಮುಗ್ಗರಿಸಿದ ಬಳಿಕ ಮಿಂಚಿದ್ದು ಸೂರ್ಯಕುಮಾರ್ ಯಾದವ್.

ಭಾರತದ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಷ್ಟೇ ಕೆಟ್ಟದಾಗಿ ವಿಕೆಟ್ ಒಪ್ಪಿಸಿದ್ರು. 6 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ್ದ ಸೂರ್ಯ ಕೇನ್‌ ರಿಚರ್ಡ್ಸನ್‌ ಬೌಲಿಂಗ್‌ನಲ್ಲಿ ಕಾಟನ್ ಬೌಲ್ಡ್ ಆಗುವ ಮೂಲಕ ಔಟಾದ್ರು. ಕೊನೆಯಲ್ಲಿ ಡಿಕೆ 20ರನ್‌ಗಳ ಕೊಡುಗೆ ನೀಡಿದ್ರು. 186ರನ್ ಕಲೆಹಾಕಿದ ಭಾರತ 187ರನ್ ಟಾರ್ಗೆಟ್ ನೀಡಿತು.

ಪಾಕ್ ವಿರುದ್ಧ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಪ್ರಮುಖ ಸಲಹೆ ನೀಡಿದ ದ.ಆಫ್ರಿಕಾ ದಿಗ್ಗಜ

ಆ್ಯರೋನ್ ಫಿಂಚ್ ಅಬ್ಬರ, ಕಾಂಗರೂವನ್ನ ಮಣಿಸಿದ ಮೊಹಮ್ಮದ್ ಶಮಿ

ಆ್ಯರೋನ್ ಫಿಂಚ್ ಅಬ್ಬರ, ಕಾಂಗರೂವನ್ನ ಮಣಿಸಿದ ಮೊಹಮ್ಮದ್ ಶಮಿ

ಭಾರತದ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಲು ಸರಿಯಾದ ಹೆಜ್ಜೆಯಿಟ್ಟಿದ್ದ ಆಸ್ಟ್ರೇಲಿಯಾ ಪರ ನಾಯಕ ಆ್ಯರೋನ್ ಫಿಂಚ್ ಭರ್ಜರಿ ಆಟವಾಡಿದ್ರು. 54 ಎಸೆತಗಳಲ್ಲಿ 76ರನ್ ಸಿಡಿಸಿದ ಫಿಂಚ್ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಮಿಚೆಲ್ ಮಾರ್ಷ್‌ 35ರನ್, ಮ್ಯಾಕ್ಸ್‌ವೆಲ್ ಆಟ 23ಕ್ಕೆ ಕೊನೆಗೊಂಡಿತು. ಆದ್ರೆ ಕೊನೆಯ ಎರಡು ಓವರ್‌ನಲ್ಲಿ ಸೂಪರ್ ಕಂಬ್ಯಾಕ್ ಮಾಡಿದ ಭಾರತ ಆಸಿಸ್‌ನಿಂದ ಗೆಲುವನ್ನ ಕಸಿದುಕೊಂಡಿತು.

19 ಓವರ್‌ನಲ್ಲಿ ಮಿಂಚಿನ ದಾಳಿ ನಡೆಸಿದ ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದ್ದಲ್ಲದೆ ಕೇವಲ 3ರನ್ ಬಿಟ್ಟುಕೊಟ್ಟರು. ಪರಿಣಾಮ ಅಂತಿಮ ಓವರ್‌ನಲ್ಲಿ ಭಾರತ 11ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ಡೆತ್ ಓವರ್ ಸ್ಪೆಷಲಿಸ್ಟ್‌ ಆಗಿರುವ ಅರ್ಷ್‌ದೀಪ್ ಸಿಂಗ್ ಹಿಂದಿನ ಓವರ್‌ನಲ್ಲಿ ದುಬಾರಿಯಾಗಿದ್ದರ ಪರಿಣಾಮ ರೋಹಿತ್ ಶರ್ಮಾ ಅತ್ಯಂತ ಸ್ಮಾರ್ಟ್ ನಿರ್ಧಾರ ತೆಗೆದುಕೊಂಡರು. ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್‌ ಮಾಡದ ಮೊಹಮ್ಮದ್ ಶಮಿಗೆ ಅಂತಿಮ ಓವರ್ ಬೌಲ್ ಮಾಡುವಂತೆ ಚೆಂಡು ಕೈಗಿಟ್ಟರು.

ಕಳೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡಿದ್ದ ಶಮಿ!

ಕಳೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡಿದ್ದ ಶಮಿ!

ಮೊಹಮ್ಮದ್ ಶಮಿಗೆ ಅಂತಿಮ ಓವರ್ ನೀಡುತ್ತಿದ್ದಂತೆ ಅಭಿಮಾನಿಗಳು ಅಷ್ಟೇ ಅಲ್ಲದೆ ಕಾಮೆಂಟೇಟರ್ಸ್ ಕೂಡ ಆಶ್ಚರ್ಯಗೊಂಡ್ರು. ಇದಕ್ಕೆ ಕಾರಣ ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಟಿ20 ಪಂದ್ಯವನ್ನಾಡಿ ಬಹಳ ಸಮಯವೇ ಕಳೆದು ಹೋಗಿದೆ. ಭಾರತದ ಪರ ಶಮಿ 2021ರ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ರು. ಆನಂತರ ಚುಟುಕು ಫಾರ್ಮೆಟ್‌ನಲ್ಲಿ ಶಮಿಗೆ ಅವಕಾಶವನ್ನೇ ನೀಡಿರ್ಲಿಲ್ಲ. ಹೀಗಾಗಿ ಒಂದು ವರ್ಷದ ಬಳಿಕ, ಅದ್ರಲ್ಲೂ ನೇರವಾಗಿ 20ನೇ ಓವರ್‌ ಬೌಲಿಂಗ್ ಮಾಡಲು ನೀಡಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿತು.

ಅಭ್ಯಾಸ ಪಂದ್ಯ: ದಿನೇಶ್ ಕಾರ್ತಿಕ್ ಮಾಡಿದ ಎಡವಟ್ಟಿಗೆ ಕೆರಳಿದ ಅಭಿಮಾನಿಗಳು!

ಮ್ಯಾಜಿಕ್ ಸ್ಪೆಲ್ ಮಾಡಿದ ಶಮಿ, ಅದ್ಭುತ ಕಂಬ್ಯಾಕ್

ಮ್ಯಾಜಿಕ್ ಸ್ಪೆಲ್ ಮಾಡಿದ ಶಮಿ, ಅದ್ಭುತ ಕಂಬ್ಯಾಕ್

ಅಂತಿಮ ಓವರ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಮೊಹಮ್ಮದ್ ಶಮಿ ಕಾಂಗರೂಗಳನ್ನ ಕಟ್ಟಿಹಾಕಿದ್ರು. ಮೊದಲೆರಡು ಎಸೆತಗಳಲ್ಲಿ ತಲಾ 2 ರನ್ ಬಿಟ್ಟುಕೊಟ್ಟಿದ್ದ ಮೊಹಮ್ಮದ್ ಶಮಿ ಮೂರನೇ ಎಸೆತದಲ್ಲಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಪ್ಯಾಟ್ ಕಮಿನ್ಸ್ ವಿಕೆಟ್ ಕಬಳಿಸಿದ್ರು. ಇದರ ನಂತರದ ಎಸೆತದಲ್ಲೇ ಆಷ್ಟನ್ ಅಗರ್ ರನೌಟ್‌ಗೆ ಬಲಿಯಾಗಿದ್ದು ಆಸಿಸ್‌ಗೆ ದೊಡ್ಡ ಹೊಡೆತ ನೀಡಿತು.

ಕೊನೆಯ ಎರಡು ಎಸೆತಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 7ರನ್‌ಗಳು ಬೇಕಿತ್ತು. ಐದನೇ ಎಸೆತದಲ್ಲಿ ಯಾರ್ಕರ್ ಹಾಕುವ ಮೂಲಕ ಜೋಸ್ ಇಂಗ್ಲಿಸ್‌ ಅನ್ನು ಶಮಿ ಬೌಲ್ಡ್ ಮಾಡಿದ್ರು. ಅಂತಿಮ ಎಸೆತದಲ್ಲಿ ಒಂದು ಸಿಕ್ಸರ್ ಸಿಡಿಸಿದ್ರೆ ಸ್ಕೋರ್ ಸಮಗೊಳ್ಳುತ್ತಿತ್ತು. ಆದ್ರೆ ಯಾವುದೇ ಅವಕಾಶ ನೀಡದ ಭಾರತದ ಅನುಭವಿ ಪೇಸರ್ ಶಮಿ ಪರ್ಫೆಕ್ಟ್‌ ಯಾರ್ಕರ್ ಹಾಕುವ ಮೂಲಕ ಕೇನ್ ರಿಚರ್ಡ್ಸನ್‌ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಪಂದ್ಯ ಅಭ್ಯಾಸವೇ ಆಗಿದ್ದರೂ ಭಾರತ ಆಸಿಸ್ ವಿರುದ್ಧ ಕಂಬ್ಯಾಕ್ ಮಾಡಿ ಪಂದ್ಯ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಬೂಸ್ಟ್‌ ಮಾಡಿದೆ. ಇನ್ನು ಫಿಟ್ನೆಸ್ ಕುರಿತಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಶಮಿ ಅಂತಿಮ ಓವರ್ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಕಬಳಿಸಿದ್ದಲ್ಲದೆ ತಂಡಕ್ಕೆ ಗೆಲುವು ತಂದಿಟ್ಟು ತಾನೆಷ್ಟು ಬಲಿಷ್ಠ ಸ್ಪರ್ಧಿ ಎನ್ನುವುದನ್ನ ಎದುರಾಳಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ. 1 ಓವರ್‌ನಲ್ಲಿ 4 ಡಾಟ್ ಬಾಲ್, 4 ರನ್ ಹಾಗೂ 3 ವಿಕೆಟ್ ಪಡೆದ ಮೊಹಮ್ಮದ್ ಶಮಿ ಬೌಲಿಂಗ್ ಅನ್ನು ಕ್ರಿಕೆಟ್ ದಿಗ್ಗಜರ ಕೊಂಡಾಡಿದ್ದಾರೆ.

Story first published: Monday, October 17, 2022, 14:31 [IST]
Other articles published on Oct 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X