For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಬೆಂಗಳೂರು ಬುಲ್ಸ್ vs ಯು ಮುಂಬಾ ಮುಖಾಮುಖಿಯಲ್ಲಿ ಬಲಿಷ್ಠ ತಂಡ ಯಾವುದು?

PKL 8: Bengaluru Bulls vs U Mumba preview, head to head and probable playing 7

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 25ರ ಮಂಗಳವಾರದವರೆಗೂ ಒಟ್ಟು 77 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ಬೆಂಗಳೂರು ಬುಲ್ಸ್ ಅಗ್ರಸ್ಥಾನದಲ್ಲಿದ್ದರೆ, ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನ ಮತ್ತು ಹರಿಯಾಣ ಸ್ಟೀಲರ್ಸ್ ತೃತೀಯ ಸ್ಥಾನದಲ್ಲಿವೆ.

ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 77 ಪಂದ್ಯಗಳು ಈಗಾಗಲೇ ಮುಗಿದಿದ್ದು ಇಂದು ( ಜನವರಿ 25 ) ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯ ಪ್ರಕಾರ ಇಂದು 2 ಪಂದ್ಯಗಳು ನಡೆಯಬೇಕಿತ್ತು ಆದರೆ ಕೆಲ ಆಟಗಾರರಿಗೆ ಕೊರೋನಾವೈರಸ್ ತಗುಲಿರುವ ಕಾರಣದಿಂದಾಗಿ ಹನ್ನೆರಡು ತಂಡಗಳ ಪೈಕಿ 2 ತಂಡಗಳಿಗೆ ತಂಡ ರಚಿಸಿ ಕಣಕ್ಕಿಳಿಸುವಷ್ಟು ಆಟಗಾರರು ಇಲ್ಲದೇ ಇರುವ ಕಾರಣ ಭಾಗವಹಿಸುವಿಕೆಯಿಂದ ಹಿಂದೆ ಸರಿದಿವೆ. ಹೀಗೆ ಕೊರೋನಾ ಸೋಂಕಿಗೆ ಒಳಗಾಗಿರುವ ಆಟಗಾರರು ಯಾವ 2 ತಂಡಗಳಿಗೆ ಸೇರಿದವರು ಎಂಬ ಮಾಹಿತಿಯನ್ನು ಮಾತ್ರ ಬಿಟ್ಟುಕೊಡದ ಪ್ರೋ ಕಬಡ್ಡಿ ಲೀಗ್ ಆಯೋಜಕರು ಲಭ್ಯವಿರುವ ತಂಡಗಳನ್ನು ಬಳಸಿಕೊಂಡು ಟೂರ್ನಿಯನ್ನು ಮುಂದುವರೆಸಲು ತೀರ್ಮಾನಿಸಿದ್ದಾರೆ.

ಬೆಂಗಳೂರು ಬುಲ್ಸ್ vs ಯು ಮುಂಬಾ ಪಂದ್ಯದ ಮಾಹಿತಿ ಮತ್ತು ಮುಖಾಮುಖಿ ಅಂಶಗಳ ಫಲಿತಾಂಶ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 14 ಪಂದ್ಯಗಳನ್ನಾಡಿರುವ ಬೆಂಗಳೂರು ಬುಲ್ಸ್ ತಂಡ 8 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತಿದ್ದು, ಉಳಿದೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 46 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ 12 ಪಂದ್ಯಗಳನ್ನಾಡಿ 4 ಪಂದ್ಯಗಳಲ್ಲಿ ಜಯಗಳಿಸಿ, 3 ಪಂದ್ಯಗಳಲ್ಲಿ ಸೋತು, 5 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 36 ಅಂಕಗಳನ್ನು ಪಡೆದುಕೊಂಡಿರುವ ಯು ಮುಂಬಾ ತಂಡ ಏಳನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಇಂದಿನ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 78ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ. ಇನ್ನು ಪ್ರೋ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇತ್ತಂಡಗಳ ನಡುವೆ ಒಟ್ಟು 15 ಮುಖಾಮುಖಿ ಪಂದ್ಯಗಳು ನಡೆದಿದ್ದು, ಯು ಮುಂಬಾ 10 ಪಂದ್ಯಗಳಲ್ಲಿ ಜಯ ಗಳಿಸಿ ಮೇಲುಗೈ ಸಾಧಿಸಿದ್ದರೆ, ಬೆಂಗಳೂರು ಬುಲ್ಸ್ 5 ಪಂದ್ಯಗಳಲ್ಲಿ ಗೆದ್ದಿದೆ.

ಬೆಂಗಳೂರು ಬುಲ್ಸ್ ಸಂಭಾವ್ಯ ಆಡುವ ಬಳಗ: ಪವನ್ ಸೆಹ್ರಾವತ್ (ನಾಯಕ), ಚಂದ್ರನ್ ರಂಜಿತ್, ಭರತ್, ಮಹೇಂದರ್ ಸಿಂಗ್, ಮೋಹಿತ್ ಸೆಹ್ರಾವತ್, ಅಮನ್, ಸೌರಭ್ ನಂದಲ್

ಯು ಮುಂಬಾ ಸಂಭಾವ್ಯ ಆಡುವ ಬಳಗ: ಅಭಿಷೇಕ್ ಸಿಂಗ್, ವಿ ಅಜಿತ್, ಮೊಹ್ಸೆನ್ ಮಗ್ಸೌದ್ಲೌ, ಹರೇಂದ್ರ ಕುಮಾರ್, ರಾಹುಲ್ ಸೇತ್ಪಾಲ್, ರಿಂಕು, ಫಾಜೆಲ್ ಅತ್ರಾಚಲಿ (ನಾಯಕ)

ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Wednesday, January 26, 2022, 15:00 [IST]
Other articles published on Jan 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+