ಪಿಕೆಎಲ್ 8: ಬಲಿಷ್ಠ ಡೆಲ್ಲಿ ವಿರುದ್ಧ ಗೆದ್ದ ಹರಿಯಾಣ; ಬೆಂಗಾಲ್ ವಿರುದ್ಧ ಯುಪಿ ಯೋಧಾಗೆ ಗೆಲುವು

ಎಂಟನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಂದು ( ಜನವರಿ 21 ) ಎರಡು ಪಂದ್ಯಗಳು ನಡೆದಿದ್ದು, ಮೊದಲನೇ ಪಂದ್ಯದಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ ಹರಿಯಾಣ ಸ್ಟೀಲರ್ಸ್ ಜಯ ಸಾಧಿಸಿದ್ದು, ದ್ವಿತೀಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ತಂಡವನ್ನು ಯುಪಿ ಯೋಧಾ ಸೋಲಿಸಿದೆ.
ಮೊದಲು ದಬಾಂಗ್ ಡೆಲ್ಲಿ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ ಹರಿಯಾಣ ಸ್ಟೀಲರ್ಸ್ 36-33 ಅಂಕಗಳ ಅಂತರದಿಂದ ಜಯ ಸಾಧಿಸಿದ್ದು, ಬೆಂಗಾಲ್ ವಾರಿಯರ್ಸ್ ವಿರುದ್ಧ ಯುಪಿ ಯೋಧಾ 40 - 36 ಅಂಕಗಳಿಂದ ಜಯ ಸಾಧಿಸಿದೆ.
ದಬಾಂಗ್ ಡೆಲ್ಲಿ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಿಕಾಶ್ ಕಂಡೋಲಾ ಉತ್ತಮ ರೈಡಿಂಗ್ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ದಬಾಂಗ್ ಡೆಲ್ಲಿ ತಂಡವನ್ನು ಮೊದಲ 15 ನಿಮಿಷಕ್ಕೆ ಆಲ್ ಔಟ್ ಮಾಡಿತು. ಹರಿಯಾಣ ಸ್ಟೀಲರ್ಸ್ ತಂಡದ ವಿಜಯ್ ಹಾಗೂ ಆಶೀಶ್ ವಿಜಯ್ ಕಂಡೋಲಾಗೆ ಉತ್ತಮ ಆಟದಿಂದ ಸಹಾಯ ಮಾಡಿದರು. ಪಂದ್ಯದ ಮಧ್ಯಂತರಕ್ಕೂ ಮುನ್ನ ಯಶಸ್ವಿಯಾಗಿ ಟ್ಯಾಕಲ್ ಮಾಡುವಲ್ಲಿ ದಬಾಂಗ್ ಡೆಲ್ಲಿ ತಂಡದ ಡಿಫೆನ್ಸ್ ವಿಭಾಗ ಎಡವಿತು. ತಂಡದಲ್ಲಿ ನವೀನ್ ಕುಮಾರ್ ಇಲ್ಲದ ಕಾರಣ ದಬಾಂಗ್ ಡೆಲ್ಲಿ ತಂಡದ ಸಂಪೂರ್ಣ ಜವಾಬ್ದಾರಿ ವಿಜಯ್ ಹಾಗೂ ಸಂದೀಪ್ ನರ್ವಾಲ್ ಮೇಲಿತ್ತು. ಹೀಗೆ ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ ತಂಡದ ವಿರುದ್ಧ ಹಿಡಿತವನ್ನು ಸಾಧಿಸಿದ ಹರಿಯಾಣ ಸ್ಟೀಲರ್ಸ್ ಪಂದ್ಯದ ಮಧ್ಯಂತರದ ವೇಳೆಗೆ ದಬಾಂಗ್ ಡೆಲ್ಲಿ ವಿರುದ್ಧ 19 - 11 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.
ಇನ್ನುಳಿದ ದ್ವಿತೀಯಾರ್ಧದಲ್ಲಿ ಬಲ ಕಾರ್ನರ್ ಆಟಗಾರ ಕೃಷ್ಣನ್ 2 ಟ್ಯಾಕಲ್ ಅಂಕಗಳನ್ನು ಪಡೆಯುವುದರ ಮೂಲಕ ದಬಾಂಗ್ ಡೆಲ್ಲಿ ತಂಡ ಕಮ್ ಬ್ಯಾಕ್ ಮಾಡಿತು. ಇದರ ಬೆನ್ನಲ್ಲೇ ವೇಗವಾದ ರೈಡ್ ಮಾಡಿದ ಹರಿಯಾಣ ಸ್ಟೀಲರ್ಸ್ ತಂಡದ ವಿಕಾಸ್ ಖಂಡೋಲಾ ದಬಾಂಗ್ ಡೆಲ್ಲಿ ಮತ್ತೆ ಹಿಂದುಳಿಯುವಂತೆ ಮಾಡಿದರು. ಆದರೆ ಹರಿಯಾಣ ಸ್ಟೀಲರ್ಸ್ ತಂಡದ ದುರಾದೃಷ್ಟ ಡೆಲ್ಲಿ ರೈಡರ್‌ನ್ನು ತಂಡದ ಐವರು ಡಿಫೆಂಡರ್ಸ್ ಫಾಲೋ ಮಾಡಿ ಟಚ್ ಇಲ್ಲದಿದ್ದರೂ ಕೂಡ ಲಾಬಿ ಪ್ರವೇಶಿಸಿ 5 ಅಂಕಗಳನ್ನು ಹರಿಯಾಣ ಸ್ಟೀಲರ್ಸ್ ಕಳೆದುಕೊಂಡಿತು. ಹೀಗೆ ಆಟಗಾರರನ್ನು ಕಳೆದುಕೊಂಡ ಹರಿಯಾಣ ಸ್ಟೀಲರ್ಸ್ ತಂಡ ಆಲ್ ಔಟ್ ಆಗುವುದನ್ನು ತಂಡದ ಆಟಗಾರ ವಿಕಾಸ್ ಖಂಡೋಲಾ ತಡೆದರು. ಆದರೆ ಪಂದ್ಯ ಮುಗಿಯಲು 7 ನಿಮಿಷಗಳು ಬಾಕಿ ಇದ್ದಾಗ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲ್ ಔಟ್ ಮಾಡಿದ ದಬಾಂಗ್ ಡೆಲ್ಲಿ ಹರಿಯಾಣ ಸ್ಟೀಲರ್ಸ್ ಮುನ್ನಡೆಯ ಅಂಕಗಳನ್ನು 3ಕ್ಕೆ ಇಳಿಸಿದರು.
ಹೀಗೆ ಹರಿಯಾಣ ಸ್ಟೀಲರ್ಸ್ ಆಲ್ ಔಟ್ ಆದ ಬೆನ್ನಲ್ಲೇ ದಬಾಂಗ್ ಡೆಲ್ಲಿ ತಂಡದ ನೀರಜ್ ನರ್ವಲ್ 2 ಅಂಕಗಳ ರೈಡ್ ಮಾಡುವ ಮೂಲಕ ಇತ್ತಂಡಗಳು ಅಂಕಗಳಲ್ಲಿ ಸಮಬಲ ಸಾಧಿಸುವಂತೆ ಮಾಡಿದರು. ಆದರೆ ಅಂತಿಮ ಹಂತದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ಯುವ ಆಟಗಾರ ಜೈದೀಪ್ 2 ಅತ್ಯದ್ಭುತ ಟ್ಯಾಕಲ್ ಮಾಡುವುದರ ಮೂಲಕ ಹರಿಯಾಣ ತಂಡಕ್ಕೆ ಮುನ್ನಡೆ ತಂದುಕೊಟ್ಟರು ಹಾಗೂ ಈ ಅಂತರವನ್ನು ತಲುಪುವಲ್ಲಿ ಎಡವಿದ ದಬಾಂಗ್ ಡೆಲ್ಲಿ ಪಂದ್ಯದಲ್ಲಿ ಸೋಲನುಭವಿಸಿತು. ಇನ್ನು ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಗೆದ್ದಿರುವ ಹರಿಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದು, ಸೋತಿರುವ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications