ಪ್ರೋ ಕಬಡ್ಡಿ ಲೀಗ್ 8: ತೆಲುಗು ಟೈಟಾನ್ಸ್ ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೇರುತ್ತಾ ಬೆಂಗಳೂರು ಬುಲ್ಸ್?

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಜನವರಿ 21ರ ಶನಿವಾರದವರೆಗೂ ಒಟ್ಟು 72 ಪಂದ್ಯಗಳು ನಡೆದಿದ್ದು, ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಬುಲ್ಸ್ ದ್ವಿತೀಯ ಸ್ಥಾನ ಮತ್ತು ಪಾಟ್ನಾ ಪೈರೇಟ್ಸ್ ತೃತೀಯ ಸ್ಥಾನದಲ್ಲಿವೆ.
ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 72 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ( ಜನವರಿ 23 ) ಒಟ್ಟು 2 ಪಂದ್ಯಗಳು ನಡೆಯಲಿವೆ. ಈ 2 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಯುಪಿ ಯೋಧಾ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಹೀಗೆ ಇಂದು ನಡೆಯಲಿರುವ ಈ 2 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..
ಪಂದ್ಯ 1: ಹರಿಯಾಣ ಸ್ಟೀಲರ್ಸ್ vs ಯುಪಿ ಯೋಧಾ
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿರುವ ಯುಪಿ ಯೋಧಾ 5 ಪಂದ್ಯಗಳಲ್ಲಿ ಜಯ ಸಾಧಿಸಿ, 4 ಪಂದ್ಯಗಳಲ್ಲಿ ಸೋತು ಉಳಿದ 3 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 38 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿರುವ ಹರಿಯಾಣ ಸ್ಟೀಲರ್ಸ್ 5 ಪಂದ್ಯಗಳಲ್ಲಿ ಜಯ ಸಾಧಿಸಿ, 5 ಪಂದ್ಯಗಳಲ್ಲಿ ಸೋತು ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 34 ಅಂಕಗಳನ್ನು ಪಡೆದುಕೊಂಡು ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು ಇತ್ತಂಡಗಳ ನಡುವೆ ನಡೆಯಲಿರುವ ಇಂದಿನ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 73ನೇ ಪಂದ್ಯವಾಗಿದ್ದು ಸಂಜೆ 7.30ಕ್ಕೆ ಆರಂಭವಾಗಲಿದೆ.
ಇತ್ತಂಡಗಳ ಮುಖಾಮುಖಿ ಅಂಕಿ ಅಂಶ:
ಒಟ್ಟು ಪಂದ್ಯ: 5 ಪಂದ್ಯಗಳು
ಯುಪಿ ಯೋಧಾ ಗೆದ್ದಿರುವುದು: 2 ಪಂದ್ಯಗಳು
ಹರಿಯಾಣ ಸ್ಟೀಲರ್ಸ್ ಗೆದ್ದಿರುವುದು: 2 ಪಂದ್ಯಗಳು
ಡ್ರಾ: 1 ಪಂದ್ಯ
ಹರಿಯಾಣ ಸ್ಟೀಲರ್ಸ್ ಸಂಭಾವ್ಯ ಆಡುವ ಬಳಗ: ವಿಕಾಸ್ ಕಂಡೋಲಾ (ನಾಯಕ), ರೋಹಿತ್ ಗುಲಿಯಾ, ಮೀಟು ಶರ್ಮಾ, ಜೈದೀಪ್ ಕುಲದೀಪ್, ರವಿ ಕುಮಾರ್, ಸುರೇಂದ್ರ ನಾದ ಮತ್ತು ಮೋಹಿತ್ ನಂದಲ್
ಯುಪಿ ಯೋಧಾ ಸಂಭಾವ್ಯ ಆಡುವ ಬಳಗ: ಪರ್ದೀಪ್ ನರ್ವಾಲ್, ಸುರೇಂದರ್ ಗಿಲ್, ಶ್ರೀಕಾಂತ್ ಜಾಧವ್, ನಿತೇಶ್ ಕುಮಾರ್ (ನಾಯಕ) ,ಶುಭಂ ಕುಮಾರ್, ಅಶು ಸಿಂಗ್ ಮತ್ತು ಸುಮಿತ್
ಪಂದ್ಯ 2: ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್
ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳನ್ನು ಆಡಿರುವ ಬೆಂಗಳೂರು ಬುಲ್ಸ್ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು ಉಳಿದೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 41 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯಗಳಿಸಿ, 9 ಪಂದ್ಯಗಳನ್ನು ಸೋತು ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ತೆಲುಗು ಟೈಟಾನ್ಸ್ 18 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ. ಈ ಪಂದ್ಯ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 74ನೇ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಆರಂಭಗೊಳ್ಳಲಿದೆ.
ಇತ್ತಂಡಗಳ ನಡುವಿನ ಮುಖಾಮುಖಿಯ ಫಲಿತಾಂಶ:
ಆಡಿರುವ ಒಟ್ಟು ಪಂದ್ಯಗಳು: 18
ಬೆಂಗಳೂರು ಬುಲ್ಸ್ ಗೆಲುವು: 11
ತೆಲುಗು ಟೈಟಾನ್ಸ್ ಗೆಲುವು: 3
ಡ್ರಾನಲ್ಲಿ ಅಂತ್ಯಗೊಂಡ ಪಂದ್ಯಗಳು: 4
ಬೆಂಗಳೂರು ಬುಲ್ಸ್ ಸಂಭಾವ್ಯ ಆಡುವ ಬಳಗ: ಪವನ್ ಸೆಹ್ರಾವತ್ (ನಾಯಕ), ಚಂದ್ರನ್ ರಂಜಿತ್, ಭರತ್, ಮಹೇಂದರ್ ಸಿಂಗ್, ಮೋಹಿತ್ ಸೆಹ್ರಾವತ್, ಅಮನ್ ಮತ್ತು ಸೌರಭ್ ನಂದಲ್
ತೆಲುಗು ಟೈಟಾನ್ಸ್ ಸಂಭಾವ್ಯ ಆಡುವ ಬಳಗ: ರಜನೀಶ್ ದಲಾಲ್, ಅಂಕಿತ್ ಬೇನಿವಾಲ್, ಆದರ್ಶ ಟಿ, ಪ್ರಿನ್ಸ್, ಸುರೀಂದರ್ ಸಿಂಗ್, ಸಂದೀಪ್ ಕಾಂಡೋಲಾ (ನಾಯಕ) ಮತ್ತು ಆಕಾಶ್ ಚೌಧರಿ
ನೇರಪ್ರಸಾರದ ಮಾಹಿತಿ: ಎಲ್ಲಾ ಪಂದ್ಯಗಳ ನೇರಪ್ರಸಾರದ ಮಾಹಿತಿ: ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications