Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಇಂದು ಬೆಂಗಳೂರು ಬುಲ್ಸ್‌ಗೆ ಪುಣೇರಿ ಪಲ್ಟನ್ ಸವಾಲು

Pro kabaddi season 8

ಪ್ರೊ ಕಬಡ್ಡಿ ಲೀಗ್ 8ನೇ ಸೀಸನ್‌ ಲೀಗ್ ಪಂದ್ಯಗಳು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಇಂದು ಬೆಂಗಳೂರು ಬುಲ್ಸ್‌ ತಂಡಕ್ಕೆ ಪುಣೇರಿ ಪಲ್ಟನ್ ಸವಾಲೆಸೆಯಲಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ 2ನೇ ಸ್ಥಾನದಲ್ಲಿರುವ ಬುಲ್ಸ್‌ಗೆ, ಸೋಲುಗಳಿಂದ ಕಂಗೆಟ್ಟು 11ನೇ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ತೊಡೆ ತಟ್ಟಲಿದೆ.

ಇಂದು ನಡೆಯಲಿರುವ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯ ಬುಲ್ಸ್ ಮತ್ತು ಪಲ್ಟನ್ ನಡುವೆ ನಡೆದ್ರೆ, ಎರಡನೇ ಪಂದ್ಯದಲ್ಲಿ ಯು ಮುಂಬಾಗೆ ತೆಲುಗು ಟೈಟನ್ಸ್ ಸವಾಲಾಕಲಿದೆ. ಇಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ತಮಿಳು ತಲೈವಾಸ್ ಚಾಲೆಂಜ್ ಮಾಡಲಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಈ ಎಲ್ಲಾ ಪಂದ್ಯಗಳು ನಡೆಯಲಿವೆ.

ಕಳೆದ ಡಿಸೆಂಬರ್ 22ರಂದು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಸೀಸನ್ ಆರಂಭವನ್ನು ಪಡೆದುಕೊಂಡಿದೆ. ಜನವರಿ 21ರ ಶುಕ್ರವಾರದವರೆಗೆ ಒಟ್ಟು 69 ಪಂದ್ಯಗಳು ನಡೆದಿದ್ದು, ಅಂಕಪಟ್ಟಿಯಲ್ಲಿ ಹೆಚ್ಚು ಅಂಕವನ್ನು ಪಡೆದುಕೊಳ್ಳುವುದರ ಮೂಲಕ ದಬಾಂಗ್ ಡೆಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಬುಲ್ಸ್ ದ್ವಿತೀಯ ಸ್ಥಾನ ಮತ್ತು ಪಾಟ್ನಾ ಪೈರೇಟ್ಸ್ ತೃತೀಯ ಸ್ಥಾನದಲ್ಲಿವೆ.

ಇಂದು ನಡೆಯುವ ಮೊದಲ ಪಂದ್ಯದಲ್ಲಿ ಬುಲ್ಸ್‌ಗೆ ಸವಾಲೆಸೆಯುವ ಪುಣೇರಿ ಪಲ್ಟನ್ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು ಮತ್ತು 7 ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. -27 ಪಾಯಿಂಟ್ಸ್ ಗಿಟ್ಟಿಸಿರುವ ಪುಣೇರಿ ಪಲ್ಟನ್ ಪಾಯಿಂಟ್ಸ್ ಪಟ್ಟಿಯಲ್ಲಿ ತಳಭಾಗದಲ್ಲಿದೆ. ಆದ್ರೆ ಅದೇ ಬೆಂಗಳೂರು ಬುಲ್ಸ್ ಟೀಂ ಆಡಿದ 12 ಪಂದ್ಯಗಳಲ್ಲಿ 7 ಪಂದ್ಯ ಗೆಲುವು ಮತ್ತು 4 ಪಂದ್ಯಗಳಲ್ಲಿ ಸೋಲಿನ ಜೊತೆಗೆ 1 ಪಂದ್ಯ ಟೈ ಆಗಿ ಒಟ್ಟು 50 ಪಾಯಿಂಟ್ಸ್ ಕಲೆಹಾಕಿದೆ.

ಮೊದಲ ಪಂದ್ಯ
ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಸಂಭಾವ್ಯ 7 ಆಟಗಾರರು:

ಬೆಂಗಳೂರು ಬುಲ್ಸ್: ಪವನ್ ಕುಮಾರ್ ಸೆಹ್ರಾವತ್, ಚಂದ್ರನ್ ರಂಜಿತ್, ಮೋಹಿತ್ ಸೆಹ್ರಾವತ್, ಮಹೇಂದರ್ ಸಿಂಗ್, ಅಂಕಿತ್ ಮಲಿಕ್, ಅಮಿತ್ ಶೆರಾನ್, ಸೌರಭ್ ನಂದಲ್

ಪುಣೇರಿ ಪಲ್ಟನ್: ಮೋಹಿತ್ ಗೋಯತ್, ನಿತಿನ್ ತೋಮರ್, ಅಸ್ಲಂ ಇನಾಮದಾರ್, ಸಂಕೇತ್ ಸಾವಂತ್, ಅಭಿನೇಶ್ ನಾಡರಾಜನ್, ವಿಶಾಲ್ ಭಾರದ್ವಾಜ್, ಬಲದೇವ್ ಸಿಂಗ್

ಎರಡನೇ ಪಂದ್ಯ
ಯು ಮುಂಬಾ ಮತ್ತು ತೆಲುಗು ಟೈಟನ್ಸ್‌ ಸಂಭಾವ್ಯ 7 ಆಟಗಾರರು:
ಯು ಮುಂಬಾ: ಫಝೆಲ್ ಅತ್ರಾಚಲಿ, ಹರೇಂದ್ರ ಕುಮಾರ್, ರಿಂಕು, ಮೊಹ್ಸೆನ್ ಮಗ್ಸೌದ್ಲೌ, ವಿ ಅಜಿತ್ ಕುಮಾರ್, ಅಭಿಷೇಕ್ ಸಿಂಗ್, ರಾಹುಲ್ ಸೇಠಪಾಲ್

ತೆಲುಗು ಟೈಟಾನ್ಸ್: ಸಂದೀಪ್ ಕಾಂಡೋಲಾ, ಸುರೀಂದರ್ ಸಿಂಗ್, ಪ್ರಿನ್ಸ್ ಡಿ, ಆಕಾಶ್ ಚೌಧರಿ, ರಜನೀಶ್, ಆದರ್ಶ್ ಟಿ/ರಾಕೇಶ್ ಗೌಡ, ಅಂಕಿತ್ ಬೇನಿವಾಲ್/ ಸಿದ್ಧಾರ್ಥ್ ದೇಸಾಯಿ

ಮೂರನೇ ಪಂದ್ಯ
ತಮಿಳ್ ತಲೈವಾಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ PKL 8 ನ ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ ಎರಡೂ ತಂಡಗಳು ಬಹುತೇಕ ಸಮಬಲದಲ್ಲಿವೆ. ಆದಾಗ್ಯೂ, ಪ್ರಸ್ತುತ ಫಾರ್ಮ್ ತಮಿಳು ತಲೈವಾಸ್‌ಗಿಂತ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಅನುಕೂಲಕರವಾಗಿದೆ. ಇದಲ್ಲದೇ ಈ ಋತುವಿನಲ್ಲಿ ಉಭಯ ತಂಡಗಳ ನಡುವಿನ ಒಂದು ಪಂದ್ಯ ಟೈ ಆಗಿತ್ತು. ಅರ್ಜುನ್ ದೇಶ್ವಾಲ್, ದೀಪಕ್ ಹೂಡಾ, ಸಾಹುಲ್ ಕುಮಾರ್ ಮತ್ತು ಸಂದೀಪ್ ಧುಲ್ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಪ್ರಮುಖ ಆಟಗಾರರಾಗಿದ್ದು, ಮಂಜೀತ್, ಸುರ್ಜಿತ್ ಸಿಂಗ್ ಮತ್ತು ಸಾಗರ್ ತಮಿಳು ತಲೈವಾಸ್‌ಗೆ ಪ್ರಮುಖ ಆಟಗಾರರಾಗಿದ್ದಾರೆ.

Story first published: Saturday, January 22, 2022, 17:21 [IST]
Other articles published on Jan 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+