
ಸೋನಿಪತ್, ಅಕ್ಟೋಬರ್ 12: ಹರ್ಯಾಣ ರಾಜ್ಯದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018ರ 12ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ದಬಾಂಗ್ ಡೆಲ್ಲಿ ತಂಡ 41-37ರ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಡೆಲ್ಲಿಗೆ ದಕ್ಕಿದ ಮೊದಲ ಗೆಲುವಿದು.
ಶುಕ್ರವಾರ (ಅಕ್ಟೋಬರ್ 12) ನಡೆದ ಪಂದ್ಯದಲ್ಲಿ ಕೊನೆಯ 5 ನಿಮಿಷದಲ್ಲಿ ಒಟ್ಟು 11 ಅಂಕಗಳನ್ನು ಕದ್ದ ಡೆಲ್ಲಿ ತಂಡ ಬಲಿಷ್ಠ ಪಲ್ಟಾನ್ ಗೆ ಸೋಲಿನ ಕಹಿಯುಣಿಸಿದೆ. ಈ ಗೆಲುವಿಗೂ ಮುನ್ನ ಡೆಲ್ಲಿ ಗುಜರಾತ್ ಫಾರ್ಚೂನ್ ಜಿಯಾಂಟ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತಿತ್ತು. ಪಲ್ಟಾನ್ ಪರ ನಿತಿನ್ ತೋಮರ್ ಕೊಸರಾಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.
ಪುಣೇರಿ ಪಲ್ಟಾನ್: ದೀಪಕ್ ಕುಮಾರ್ ದಾಹಿಯಾ, ರವಿ ಕುಮಾರ್, ವಿನೋದ್ ಕುಮಾರ್, ಜಿ ಬಿ. ಮೋರೆ, ನಿತಿನ್ ತೋಮರ್, ಸಂದೀಪ್ ನರ್ವಾಲ್, ಗಿರೀಶ್ ಮಾರುತಿ
ದಬಾಂಗ್ ಡೆಲ್ಲಿ: ರಣಜಿ ಚಂದ್ರನ್, ವಿಶಾಲ್ ಮಾನೆ, ವಿರಾಜ್ ವಿಷ್ಣು, ನವೀನ್ ಕುಮಾರ್, ಮರಾಜ್ ಶೆಖ್, ರವೀಂದರ್ ಪಹಾಲ್, ಜೋಗಿಂದರ್ ನರ್ವಾಲ್.