Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಸಿಡಿದು ನಿಂತ ಪವನ್, ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

Pro Kabaddi 2019: Bengaluru Beats Telugu 40-39

ಬೆಂಗಳೂರು, ಸೆಪ್ಟೆಂಬರ್ 6: ಪ್ರೊ ಕಬಡ್ಡಿ ಲೀಗ್ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಮತ್ತೆ ಜಯದ ಹಾದಿ ಹಿಡಿದಿದೆ. ಶುಕ್ರವಾರ (ಸೆಪ್ಟೆಂಬರ್ 6) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ 77ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬುಲ್ಸ್ 40-39ರ ರೋಚಕ ಗೆಲುವನ್ನಾಚರಿಸಿದೆ.

ಪಂದ್ಯದ ಮೊದಲಿನಿಂದಲೂ ಮುನ್ನಡೆ ಸಾಧಿಸಿದ ಬೆಂಗಳೂರು ಬುಲ್ಸ್‌ಗೆ ಪವನ್ ಕುಮಾರ್ ಶೆಹ್ರಾವತ್, ನಾಯಕ ರೋಹಿತ್‌ ಕುಮಾರ್ ಬಲ ತುಂಬಿದರು. ಆಟದ ಅಂತ್ಯಕ್ಕೆ ತೆಲುಗು ಟೈಟಾನ್ಸ್ ಕೂಡ ಅಂಕ ಕದಿಯುತ್ತ ಸಾಗಿ ಪಂದ್ಯವನ್ನು ರೋಚಕ ಹಂತಕ್ಕೆ ತಂದಿತ್ತು. ಆದರೂ ಕೊನೇ ಕ್ಷಣದಲ್ಲಿ ಬೆಂಗಳೂರು ಮೇಲುಗೈ ಸಾಧಿಸಿತು.

ಬೆಂಗಳೂರು ಬುಲ್ಸ್‌ನಿಂದ ಪವನ್ 23 (18 ರೈಡ್, 1 ಟ್ಯಾಕ್ಲ್‌, 4 ಬೋನಸ್), ರೋಹಿತ್ 5, ಮಣೀಂದರ್ 3 ಅಂಕ ಸಂಪಾದಿಸಿದರೆ, ತೆಲುಗು ಟೈಟಾನ್ಸ್‌ನಿಂದ ಸಿದ್ಧಾರ್ಥ ದೇಸಾಯ್ 23 (19 ರೈಡ್, 1 ಟ್ಯಾಕ್ಲ್‌, 3 ಬೋನಸ್), ಅಬೋಝರ್ 4, ರಾಕೇಶ್ ಗೌಡ 4, ಫರ್ಹಾದ್ 2 ಅಂಕ ಸೇರಿಸಿ ಪೈಪೋಟಿಗೆ ಕಾರಣರಾದರು.

ಈ ಪಂದ್ಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (54 ಪಾಯಿಂಟ್ಸ್), ಬೆಂಗಳೂರು ಬುಲ್ಸ್‌ (43), ಹರ್ಯಾಣ ಸ್ಟೀಲರ್ಸ್ (41), ಬೆಂಗಾಲ್ ವಾರಿಯರ್ಸ್ (40), ಜೈಪರ್ ಪಿಂಕ್ ಪ್ಯಾಂಥರ್ಸ್ (38) ಮೊದಲ ಐದು ಸ್ಥಾನಗಳಲ್ಲಿದ್ದವು. ಗೇಮ್ ಚೇಂಜರ್ ಪ್ರಶಸ್ತಿ ಪವನ್‌ ಕುಮಾರ್‌ಗೆ ಲಭಿಸಿತು.

Story first published: Saturday, September 7, 2019, 10:50 [IST]
Other articles published on Sep 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+