Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಗುಜರಾತ್‌ ಜಯಂಟ್ಸ್‌ಗೆ ಸಾಟಿಯಾಗದ ದಬಾಂಗ್‌ ಡೆಲ್ಲಿ

Pro Kabaddi 2019: Gujarat Fortune Giants

ಮುಂಬೈ, ಆಗಸ್ಟ್‌ 01: ಸಂಘಟಿತ ಪ್ರದರ್ಶನದಿಂದ ಮೇಲುಗೈ ಪಡೆದ ಕಳೆದ ಬಾರಿಯ ರನ್ನರ್ಸ್‌ಅಪ್‌ ತಂಡ ಗುಜರಾತ್‌ ಫಾರ್ಚೂನ್‌ ಜಯಂಟ್ಸ್‌, ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ 2019ರ ಹೈ ವೋಲ್ಟೇಜ್‌ ಲೀಗ್‌ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್‌ ಡೆಲ್ಲಿ ವಿರುದ್ಧ ಗೆದ್ದು, ಟೂರ್ನಿಯಲ್ಲಿ ಹ್ಯಾಟ್ರಿಕ್‌ ಜಯದ ಸವಿಯುಂಡಿದೆ.

ಇಲ್ಲಿನ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಫಾರ್ಚೂನ್‌ ಜಯಂಟ್ಸ್‌ 31-26 ಅಂಕಗಳಿಂದ ದಬಾಂಗ್‌ ಡೆಲ್ಲಿ ತಂಡದ ಸವಾಲನ್ನು ಮೆಟ್ಟಿನಿಂತಿತು. ಇದು ಪ್ರಸಕ್ತ ಲೀಗ್‌ನಲ್ಲಿ ಡೆಲ್ಲಿ ತಂಡ ಅನುಭವಿಸಿದ ಮೊದಲ ಸೋಲಾಗಿದೆ.

ಗುಜರಾತ್‌ ತಂಡದ ಪರ ಮಿಂಚಿನ ರೇಡ್‌ಗಳೊಂದಿಗೆ ಗಮನ ಸೆಳೆದ ಯುವ ರೇಡರ್‌ಗಳಾದ ಜಿ.ಬಿ ಮೋರೆ ಮತ್ತು ರೋಹಿತ್‌ ಗುಲಿಯಾ ತಲಾ 8 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಮತ್ತೊಂಡೆ ಡಿಫೆನ್ಸ್‌ನಲ್ಲಿ ಭದ್ರ ಕೋಟೆಯಂತೆ ನಿಂತು ಜಯಂಟ್ಸ್‌ಗೆ ರಕ್ಷಣೆ ಒದಗಿಸಿದ ಡಿಫೆಂಡರ್‌ಗಳು ಎದುರಾಳಿ ತಂಡದ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

ಮತ್ತೊಂದೆಡೆ ಡೆಲ್ಲಿ ತಂಡದ ಪರ ಆಕ್ರಮಣಕಾರಿ ಆಟವಾಡಿದ ರೇಡರ್‌ ನವೀನ್‌ ಕುಮಾರ್‌ 20 ಬಾರಿ ದಾಳಿಗಿಳಿದು 10 ಅಂಕಗಳನ್ನು ಗಳಿಸಿದರಾದರೂ ತಂಡಕ್ಕೆ ಸೋಲನ್ನು ತಪ್ಪಿಸಲಾಗಲಿಲ್ಲ. ಡಿಫೆನ್ಸ್‌ನಲ್ಲಿ ತಂಡದ ಸ್ಟಾರ್‌ ಡಿಫೆಂಡರ್‌ ರವೀಂದರ್‌ ಪಹಲ್‌ ಕೇವಲ 2 ಅಂಕಗಳನ್ನು ಗಳಿಸುವುದಕ್ಕಷ್ಟೇ ಸೀಮಿತರಾಗಿದ್ದು ತಂಡದ ಸೋಲಿನಲ್ಲಿ ಮುಖ್ಯ ಪಾತ್ರ ವಹಿಸಿತು. ಇದರೊಂದಿಗೆ ಹ್ಯಾಟ್ರಿಕ್‌ ಜಯದೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿದ್ದ ಮೆರಾಜ್‌ ಶೇಖ್‌ ಸಾರಥ್ಯದ ದಬಾಂಗ್‌ ಡೆಲ್ಲಿ ತಂಡ ಮೊದಲ ಸೋಲಿನ ಆಘಾತಕೊಳಗಾಗಿದೆ.

ಶುಕ್ರವಾರ ಒಟ್ಟು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ಮತ್ತು ಯು.ಪಿ ಯೋಧಾ ಹಾಗೂ ಎರಡನೇ ಪಂದ್ಯದಲ್ಲಿ ಆತಿಥೇಯ ಯು ಮುಂಬಾ ಮತ್ತು ಗುಜರಾತ್‌ ಫಾರ್ಚೂನ್‌ ಜಯಂಟ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

Story first published: Thursday, August 1, 2019, 21:57 [IST]
Other articles published on Aug 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+