Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಜಯ

Bengaluru bulls

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 124ನೇ ಪಂದ್ಯದಲ್ಲಿ ಯುಪಿ ಯೋಧಾ ತಂಡವು ಯು ಮುಂಬಾ ವಿರುದ್ಧ ಗೆಲುವು ಸಾಧಿಸಿದ್ರೆ, ಬೆಂಗಳೂರು ಬುಲ್ಸ್‌ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸಿತು. ಅದೇ ರೀತಿಯಲ್ಲಿ ದಬಾಂಗ್ ಡೆಲ್ಲಿ, ಪಾಯಿಂಟ್ಸ್ ಟೇಬಲ್‌ನ ಅಗ್ರ ತಂಡ ಪಾಟ್ನಾ ಪೈರೇಟ್‌ ವಿರುದ್ಧ ರೋಚಕ ಗೆಲುವು ಸಾಧಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದ ಮೊದಲಾರ್ಧದಲ್ಲಿ ಯುಪಿ ಯೋಧಾ 18 ಪಾಯಿಂಟ್ಸ್ ಕಲೆಹಾಕಿದ್ರೆ, ಯು ಮುಂಬಾ ಕೇವಲ 12 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಯುಪಿ ಯೋಧಾ ಆರ್ಭಟ ಮುಂದುವರಿದು 17 ಪಾಯಿಂಟ್ಸ್ ತನ್ನದಾಗಿಸಿಕೊಂಡಿತು. ಆದ್ರೆ ಯು ಮುಂಬಾ ಹೋರಾಟ ಪ್ರದರ್ಶಿಸಿದ್ರು ಸಹ 16 ಪಾಯಿಂಟ್ಸ್ ಮೂಲಕ ಹಿನ್ನಡೆ ಕಂಡಿತು. ಯುಪಿ ಯೋಧಾ ತಂಡವು ಯು ಮುಂಬಾ ವಿರುದ್ಧ 35-28 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು ಸಾಧಿಸಿತು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ , ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಬುಲ್ಸ್ 20-14ರ ಲೀಡ್‌ ಪಡೆಯಿತು. ದ್ವಿತಿಯಾರ್ಧದಲ್ಲಿ ಮತ್ತೆ ಮೇಲುಗೈ ಸಾಧಿಸಿದ ಬೆಂಗಳೂರು ಟೀಂ 26 ಪಾಯಿಂಟ್ಸ್ ಗಳಿಸಿದರೆ, ಹರಿಯಾಣ ಸ್ಟೀಲರ್ಸ್ 10 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಬೆಂಗಳೂರು ಬುಲ್ಸ್‌ 46-24 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಬೆಂಗಳೂರು ಪರ ನಾಯಕ ಪವನ್ ಶೆರಾವತ್ 20 ಪಾಯಿಂಟ್ಸ್ ಕಬಳಿಸಿದ್ರೆ, ಭರತ್ 8 ಪಾಯಿಂಟ್ಸ್ ಪಡೆದ್ರು. ಹರಿಯಾಣ ಪರ ವಿಕಾಸ್ 4, ಆಶಿಶ್ 4 ಪಾಯಿಂಟ್ಸ್‌ ಅಷ್ಟೇ ಕಲೆಹಾಕಿದ್ರು.



ದಿನದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ದಬಾಂಗ್ ಡೆಲ್ಲಿ, ಪಾಯಿಂಟ್ಸ್ ಟೇಬಲ್‌ನ ಅಗ್ರ ತಂಡ ಪಾಟ್ನಾ ಪೈರೇಟ್‌ ವಿರುದ್ಧ ಮೇಲುಗೈ ಸಾಧಿಸಿತು. 26-23 ಪಾಯಿಂಟ್ಸ್ ಅಂತರದಲ್ಲಿ ಡೆಲ್ಲಿ ಮಿಂಚಿನ ಆಟವಾಡಿತು.

ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 21 ಪಂದ್ಯಗಳಲ್ಲಿ 15 ಜಯಗಳಿಂದ ಒಟ್ಟು 81 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 70 ಪಾಯಿಂಟ್ಸ್‌ ಪಡೆದಿದ್ದು,. ಯುಪಿ ಯೋಧಾ 68 ಪಾಯಿಂಟ್ಸ್‌ ಮೂಲಕ ಮೂರನೇ ಸ್ಥಾನ ಪಡೆದಿದೆ. ಬೆಂಗಳೂರು ಬುಲ್ಸ್‌ 66 ಪಾಯಿಂಟ್ಸ್ ಮೂಲಕ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

Story first published: Friday, February 18, 2022, 16:01 [IST]
Other articles published on Feb 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+