Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಮುಂದುವರೆದ ದಬಾಂಗ್ ಡೆಲ್ಲಿ ಅಬ್ಬರ, ಹರಿಯಾಣ ವಿರುದ್ಧ ಗುಜರಾತ್‌ಗೆ ಜಯ

Pro kabaddi

ಪ್ರೊ ಕಬಡ್ಡಿ ಲೀಗ್‌ನ 84ನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್‌ ವಿರುದ್ಧ ಹರಿಯಾಣ ಸ್ಟೀಲರ್ಸ್ ಗೆಲುವು ಸಾಧಿಸಿದ್ರೆ, ಪಿಕೆಎಲ್ 85ನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್ ಡೆಲ್ಲಿ ಟೀಂ ಅಬ್ಬರಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ 12 ಪಾಯಿಂಟ್ಸ್ ಕಲೆಹಾಕಿದ್ರೆ, ಗುಜರಾತ್ ಜಾಯಿಂಟ್ಸ್ 19 ಪಾಯಿಂಟ್ಸ್ ಪಡೆದ್ರು. ದ್ವಿತಿಯಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ 14, ಗುಜರಾತ್ ಜಾಯಿಂಟ್ಸ್ 13 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು.

ಹರಿಯಾಣ ಸ್ಟೀಲರ್ಸ್ 19 ರೈಡಿಂಗ್ ಪಾಯಿಂಟ್ಸ್ ಕಲೆಹಾಕಿದ್ರೆ, ಗುಜರಾತ್ ಜಾಯಿಂಟ್ಸ್‌ 20 ಪಾಯಿಂಟ್ಸ್‌ ಕಲೆಹಾಕಿತು. ಟ್ಯಾಕಲ್‌ನಲ್ಲೂ ಹರಿಯಾಣಗಿಂತ ಮುಂದಿದ್ದ ಗುಜರಾತ್ 9 ಪಾಯಿಂಟ್ಸ್ ತನ್ನದಾಗಿಸಿಕೊಂಡು ಒಟ್ಟಾರೆ 32-26 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು.

ಗುಜರಾತ್ ಜಾಯಿಂಟ್ಸ್ ಪರ ಅಜಯ್ ಕುಮಾರ್ 11, ಪರ್ದೀಪ್ ಕುಮಾರ್ 10 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಹರಿಯಾಣ ಸ್ಟೀಲರ್ಸ್ ತಂಡದಲ್ಲಿ ಮೀತು 8 ಪಾಯಿಂಟ್ಸ್ ಗೆದ್ದರು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್ ಡೆಲ್ಲಿ ಮುಖಾಮುಖಿಯಾಗಿತ್ತು. ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ ದಬಾಂಗ್ ಡೆಲ್ಲಿ 36-30 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು. ದಬಾಂಗ್ ಡೆಲ್ಲಿ 25 ರೈಡಿಂಗ್ ಪಾಯಿಂಟ್ಸ್ ಕಲೆಹಾಕಿದ್ರೆ, ಯು ಮುಂಬಾ 8 ಪಾಯಿಂಟ್ಸ್ ಪಡೆಯಿತು.

ದಬಾಂಗ್ ಡೆಲ್ಲಿ 12 ಪಾಯಿಂಟ್ಸ್ ಗೆದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಜಯ್ ಮಲ್ಲಿಕ್ 12, ಅಶು ಮಲ್ಲಿಕ್ 8 ಪಾಯಿಂಟ್ಸ್ ಪಡೆದರು. ಮುಂಬೈ ಪರ ಅಭಿಷೇಶ್ ಸಿಂಗ್ 8 ಪಾಯಿಂಟ್ಸ್ ಗೆದ್ದಿದ್ದಾರೆ.

ಈ ಗೆಲುವಿನ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 53 ಪಾಯಿಂಟ್ಸ್ ಕಲೆಹಾಕುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೇಬಲ್ ಟಾಪರ್ ಆಗಿ ಮುಂದುವರಿದಿದೆ. 46 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಎರಡನೇ ಸ್ಥಾನದಲ್ಲಿದೆ. ಪಾಟ್ನ ಪೈರೇಟ್ಸ್ ಮೂರನೇ ಸ್ಥಾನ ಮತ್ತು ಹರಿಯಾಣ ಸ್ಟೀಲರ್ಸ್ ನಾಲ್ಕನೇ ಸ್ಥಾನ ಪಡೆದಿದೆ.

Story first published: Monday, January 31, 2022, 22:51 [IST]
Other articles published on Jan 31, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+