ಪ್ರೊ ಕಬಡ್ಡಿ 2021: ಪುಣೇರಿ ಪಲ್ಟನ್ ವಿರುದ್ಧ ಪಾಟ್ನ ಪೈರೇಟ್ಸ್‌ಗೆ ಗೆಲುವು

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 17ನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನ ಪೈರೇಟ್ಸ್ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಇದು ಅವರ ಎರಡನೇ ಜಯವಾಗಿದೆ. ಪುಣೇರಿ ಪಲ್ಟಾನ್ ವಿರುದ್ಧ 38-26 ಅಂಕಗಳ ಮೂಲಕ 12 ಅಂಕಗಳ ಅಂತರದಿಂದ ಅದ್ಭುತ ಜಯ ದಾಖಲಿಸಿತು. ಪಾಟ್ನಾ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆದ್ದಿತು, ಆದರೆ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಒಂದು ಅಂಕದಿಂದ ಸೋತಿತು. ಕಠಿಣ ಪರಿಶ್ರಮದಿಂದ ಪಾಟ್ನಾ ಇಂದಿನ ಪಂದ್ಯವನ್ನು ಗೆದ್ದುಕೊಂಡಿದೆ.
ಪಾಟ್ನಾ ಪೈರೇಟ್ಸ್ ರೈಡ್ ಮತ್ತು ಕ್ಯಾಚ್ ಟ್ಯಾಕಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಪಾಟ್ನಾದ ಸಚಿನ್ ಮತ್ತು ಪ್ರಶಾಂತ್ ಕುಮಾರ್ ರೈ ಪ್ರಬಲ ಆಟ ಪ್ರದರ್ಶಿಸಿದರು. ಪುಣೇರಿ ಪಲ್ಟನ್ ಅನುಭವಿ ರಾಹುಲ್ ಚೌಧರಿ ಅವರನ್ನು ಕಣಕ್ಕಿಳಿಸಿತು. ಪುಣೇರಿ ಪಲ್ಟಾನ್ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಪುಣೇರಿ ಪಲ್ಟಾನ್ (41-30) ದಬಾಂಗ್ ಡೆಲ್ಲಿ ವಿರುದ್ಧ ಸೋತಿದ್ದು ಮತ್ತು ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಪಾಯಿಂಟ್‌ನಿಂದ ಗೆದ್ದರು (34-33).
ಇನ್ನು ಪ್ರೊ-ಕಬಡ್ಡಿ ಲೀಗ್‌ನ 18ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 2 ಅಂಕಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಹರಿಯಾಣ 39-37 ಅಂತರದಿಂದ ಜಯ ಸಾಧಿಸಿತು. ಇದು ಪ್ರಸಕ್ತ ಋತುವಿನಲ್ಲಿ ಹರಿಯಾಣದ ಮೊದಲ ಗೆಲುವಾಗಿದ್ದು, ಅದೇ ಸಮಯದಲ್ಲಿ, ತೆಲುಗು ಟೈಟಾನ್ಸ್ ಇದುವರೆಗೆ 3 ಪಂದ್ಯಗಳಲ್ಲಿ ಒಂದು ಗೆಲುವು ಪಡೆದಿಲ್ಲ.
ಹರಿಯಾಣ ಸ್ಟೀಲರ್ಸ್ ಪರ ಮೀತು ಮಹೇಂದರ್ 12 ರೈಡಿಂಗ್ ಪಾಯಿಂಟ್ಸ ಮೂಲಕ ಮಿಂಚಿದ್ರೆ, ರೋಹಿತ್ ಗುಲಿಯಾ 8 ಪಾಯಿಂಟ್ಸ್‌ನೊಂದಿಗೆ ತಂಡಕ್ಕೆ ಸಾಥ್ ನೀಡಿದ್ರು. ಇನ್ನು ತೆಲುಗು ಟೈಟನ್ಸ್ ಪರ ಸಿದ್ದಾರ್ಥ್ ದೇಸಾಯಿ, ಅಂಕಿತ್ ಬೆನಿವಾಲ್ ತಲಾ 9 ಪಾಯಿಂಟ್ಸ್ ಪಡೆದಿದ್ದಾರೆ.
ಎರಡೂ ತಂಡಗಳು:
ಪಾಟ್ನಾ ಪೈರೇಟ್ಸ್ ರೈಡರ್ಸ್:
ಗುಮಾನ್ ಸಿಂಗ್, ಮೋಹಿತ್, ಮೋನು, ಮೋನು ಗೋಯತ್, ಪ್ರಶಾಂತ್ ಕುಮಾರ್, ರಾಜವೀರ್ ಸಿಂಗ್, ಸಚಿನ್ ತನ್ವರ್, ಸೆಲ್ವಮಣಿ
ಆಲ್ ರೌಂಡರ್ಸ್: ಸಜಿನ್, ಡೇನಿಯಲ್, ಸಾಹಿಲ್ ಮಾನ್, ಶಾದ್ಲೋಯ್
ಡಿಫೆಂಡರ್ಸ್: ನೀರಜ್ ಕುಮಾರ್, ಸಂದೀಪ್, ಶುಭಂ ಶಿಂಧೆ, ಸೌರವ್ ಗುಲಿಯಾ, ಸುನಿಲ್
ಪುಣೇರಿ ಪಲ್ಟಾನ್ ರೈಡರ್ಸ್:
ಪವನ್ ಕುಮಾರ್, ಪಂಕಜ್ ಮೋಹಿತೆ, ಮೋಹಿತ್ ಗೋಯತ್, ರಾಹುಲ್ ಚೌಧರಿ, ನಿತಿನ್ ತೋಮರ್, ವಿಶ್ವಾಸ್
ಆಲ್ ರೌಂಡರ್ಸ್: ಗೋವಿಂದ್ ಗುರ್ಜರ್, ವಿಕ್ಟರ್, ಸುಭಾಷ್
ಡಿಫೆಂಡರ್ಸ್: ಬಾಳಾಸಾಹೇಬ್ ಶಾಜಿ ಜಾಧವ್, ಹಾಡಿ ತಾಜಿಕ್, ಸಂಕೇತ್ ಸಾವಂತ್, ವಿಶಾಲ್ ಭಾರದ್ವಾಜ್, ಸೋಂಬ್ ಭಾರದ್ವಾಜ್, ಸೋಂಬ್ ಬಾಲ್, ಕರಂವೀರ್, ಅಭಿನೇಶ್ ನದರ್ಜನ್, ಸೌರವ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications