Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಪುಣೇರಿ ಪಲ್ಟನ್ ವಿರುದ್ಧ ಪಾಟ್ನಾ ಪೈರೇಟ್ಸ್ ಅಬ್ಬರ

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 106ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಸಮಬಲದ ಹೋರಾಟದಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಪಾಟ್ನಾ ಪೈರೇಟ್ಸ್ ಗೆಲುವು ಸಾಧಿಸಿತು.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ದಬಾಂಗ್ ಡೆಲ್ಲಿ 19 ಪಾಯಿಂಟ್ಸ್ ಕಲೆಹಾಕಿದ್ರೆ, ಬೆಂಗಾಲ್ ವಾರಿಯರ್ಸ್ 18 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ದಬಾಂಗ್ ಡೆಲ್ಲಿಯನ್ನ ಹಿಂದಿಕ್ಕಿದ ಬೆಂಗಾಲ್ ವಾರಿಯರ್ಸ್ 21 ಪಾಯಿಂಟ್ಸ್ ಕಲೆಹಾಕಿದ್ರೆ, ದಬಾಂಗ್ ಡೆಲ್ಲಿ 20 ಪಾಯಿಂಟ್ಸ್‌ ಮುಟ್ಟಿತು. ಈ ಮೂಲಕ ರೋಚಕ ಪಂದ್ಯವು 39-39 ಪಾಯಿಂಟ್ಸ್‌ಗಳಿಂದ ಸಮಬಲಗೊಂಡಿತು.

ಪಂದ್ಯ ಗೆಲುವಿನ ಅಂತ್ಯ ಕಾಣದಿದ್ದರೂ ಸಹ ದಬಾಂಗ್ ಡೆಲ್ಲಿ ಪರ ಉತ್ತಮ ರೈಡಿಂಗ್ ಮಾಡಿದ ನವೀನ್ ಕುಮಾರ್ 13 ಪಾಯಿಂಟ್ಸ್‌ಗಳಿಸಿದ್ರು. ವಿಜಯ್ ಮಲ್ಲಿಕ್ 9 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಇನ್ನು ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 16 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಉಭಯ ತಂಡಗಳು 17-18 ಪಾಯಿಂಟ್ಸ್ ಮೂಲಕ ಸಮಬಲ ಸಾಧಿಸಿದವು. ದ್ವಿತಿಯಾರ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಪಾಟ್ನಾ ಪೈರೇಟ್ಸ್ 25 ಪಾಯಿಂಟ್ಸ್ ಗಳಿಸಿದರೆ, ಪುಣೇರಿ ಪಲ್ಟನ್ ಕೇವಲ 9 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಪಾಟ್ನಾ ಪೈರೇಟ್ಸ್ 43-26 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಪಾಟ್ನಾ ಪೈರೇಟ್ಸ್ ಪರ ರೈಡಿಂಗ್‌ನಲ್ಲಿ ಮಿಂಚಿದ ಗುಮನ್ ಸಿಂಗ್ 13 ಪಾಯಿಂಟ್ಸ್ ಕಬಳಿಸಿದ್ರೆ, ಪುಣೇರಿ ಪಲ್ಟನ್ ಕಡೆ ಇಸ್ಲಾಂ ಇನಾಂದಾರ್ 9 ಪಾಯಿಂಟ್ಸ್ ತಮ್ಮದಾಗಿಸಿಕೋಂಡ್ರು.

ಈ ಪಂದ್ಯದ ಗೆಲುವಿನ ಬಳಿಕ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 18 ಪಂದ್ಯಗಳಲ್ಲಿ 13 ಜಯಗಳಿಂದ ಒಟ್ಟು 70 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 60 ಪಾಯಿಂಟ್ಸ್‌ನಿಂದ ಜಿಗಿತ ಕಂಡಿದ್ದು. ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

Story first published: Thursday, February 10, 2022, 23:39 [IST]
Other articles published on Feb 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+