ಪ್ರೊ ಕಬಡ್ಡಿ ಲೀಗ್: ಹರಿಯಾಣ ಸ್ಟೀಲರ್ಸ್ ವಿರುದ್ಧ ಪುಣೇರಿ ಪಲ್ಟನ್‌ಗೆ ಜಯ

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 108ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಇಂದು ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯುಪಿ ಯೋಧಾ ಅಬ್ಬರಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ಸ್ ಬರೋಬ್ಬರಿ 26 ಪಾಯಿಂಟ್ಸ್ ಕಲೆಹಾಕಿದ್ರೆ, ಹರಿಯಾಣ ಸ್ಟೀಲರ್ಸ್ ಕೇವಲ 7 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಸ್ವಲ್ಪ ಹೋರಾಟ ಪ್ರದರ್ಶಿಸಿದ ಹರಿಯಾಣ ಸ್ಟೀಲರ್ಸ್ 20 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರೆ, ಪುಣೇರಿ ಪಲ್ಟನ್ 19 ಪಾಯಿಂಟ್ಸ್ ಗೆದ್ದು ಬೀಗಿತು. ಅಂತಿಮವಾಗಿ ಪುಣೇರಿ ಪಲ್ಟನ್ 45-27 ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು.

ಪುಣೇರಿ ಪಲ್ಟನ್‌ ಪರ ಉತ್ತಮ ರೈಡಿಂಗ್ ಮಾಡಿದ ಮೋಹಿತ್ ಗೋಯತ್ 12 ಪಾಯಿಂಟ್ಸ್‌ಗಳಿಸಿದ್ರು. ಅಸ್ಲಾಂ ಇನಾಮ್‌ದಾರ್ 8 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಇನ್ನು ಹರಿಯಾಣ ಸ್ಟೀಲರ್ಸ್ ಪರ ಆಶಿಶ್ 8 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದ್ರು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಯುಪಿ ಯೋಧಾ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಉಭಯ ತಂಡಗಳು 19-18 ಪಾಯಿಂಟ್ಸ್ ಮೂಲಕ ಸಮಬಲ ಸಾಧಿಸಿದವು. ದ್ವಿತಿಯಾರ್ಧದಲ್ಲಿ ಮೇಲುಗೈ ಸಾಧಿಸಿದ ಯುಪಿ ಯೋಧಾ 23 ಪಾಯಿಂಟ್ಸ್ ಗಳಿಸಿದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 15 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಯುಪಿ ಯೋಧಾ 41-34 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 18 ಪಂದ್ಯಗಳಲ್ಲಿ 13 ಜಯಗಳಿಂದ ಒಟ್ಟು 70 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 60 ಪಾಯಿಂಟ್ಸ್‌ನಿಂದ ಜಿಗಿತ ಕಂಡಿದ್ದು. ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

For Quick Alerts
ALLOW NOTIFICATIONS
For Daily Alerts
Story first published: Friday, February 11, 2022, 23:59 [IST]
Other articles published on Feb 11, 2022

Latest Videos

    + More
    POLLS
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Yes No
    Settings X