Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಯುಪಿ ಯೋಧಾ, ಗುಜರಾತ್ ಜಾಯಿಂಟ್ಸ್‌ಗೆ ಗೆಲುವು

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 104ನೇ ಪಂದ್ಯದಲ್ಲಿ ಯುಪಿ ಯೋಧಾ ತಮಿಳ್ ತಲೈವಾಸ್ ವಿರುದ್ಧ ಗೆಲುವು ಸಾಧಿಸಿದ್ರೆ, 105ನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್ ತೆಲುಗು ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಪಂದ್ಯದ ಮೊದಲಾರ್ಧದಲ್ಲಿ ತಮಿಳ್ ತಲೈವಾಸ್ 22 ಪಾಯಿಂಟ್ಸ್ ಕಲೆಹಾಕಿದ್ರೆ, ಯುಪಿ ಯೋಧಾ 20 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ತಮಿಳ್ ತಲೈವಾಸ್ ಹಿಂದಿಕ್ಕಿದ ಯುಪಿ ಯೋಧಾ 21 ಪಾಯಿಂಟ್ಸ್ ಕಲೆಹಾಕಿದ್ರೆ, ತಲೈವಾಸ್ 17 ಪಾಯಿಂಟ್ಸ್‌ ಮುಟ್ಟಿತು. ಕೊನೆಯಲ್ಲಿ ಪಂದ್ಯವನ್ನ ಯುಪಿ ಯೋಧಾ 41-39 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿತು.

ಪಂದ್ಯ ಸೋತರು ಸಹ ತಮಿಳ್ ತಲೈವಾಸ್ ಉತ್ತಮ ರೈಡಿಂಗ್ ಪಾಯಿಂಟ್ಸ್‌ಗಳಿಸಿತು. ತಲೈವಾಸ್ 29 ರೈಡಿಂಗ್ ಪಾಯಿಂಟ್ಸ್‌ ಗಿಟ್ಟಿಸಿದ್ರೆ, ಯುಪಿ ಯೋಧಾ 25 ಪಾಯಿಂಟ್ಸ್ ಕಲೆಹಾಕಿತು. ಕ್ಷೇತ್ರ ರಕ್ಷಣೆಯಲ್ಲಿ ಉಭಯ ತಂಡಗಳು 9 ಪಾಯಿಂಟ್ಸ್ ಕಲೆಹಾಕಿದ್ರೆ, ಎದುರಾಳಿಯನ್ನ ಆಲೌಟ್ ಮಾಡಿ ಯುಪಿ ಯೋಧಾ 4 ಪಾಯಿಂಟ್ಸ್ ಮೂಲಕ ಮುನ್ನಡೆ ಸಾಧಿಸಿತು.

ತಮಿಳ್ ತಲೈವಾಸ್ ಪರ ಮಂಜಿತ್ 12 ಪಾಯಿಂಟ್ಸ್, ಹಿಮಾಂಶು 8, ಅಜಿಂಕ್ಯ ಪವಾರ್ 7 ಪಾಯಿಂಟ್ಸ್ ಕಲೆಹಾಕಿದ್ರೆ, ಯುಪಿ ಯೋಧಾ ಪರ ಸುರೇಂದರ್ ಗಿಲ್ 13, ಪರ್ದೀಪ್ ನರ್ವಾಲ್ 10 ಪಾಯಿಂಟ್ಸ್ ಕಲೆಹಾಕಿ ಗೆಲುವಿನ ರುವಾರಿಗಳಾದ್ರು.

ಆಶಿಶ್ 16 ಪಾಯಿಂಟ್ಸ್‌, ವಿಕಾಸ್ ಖಂಡೋಲಾ 8 ಪಾಯಿಂಟ್ಸ್, ವಿನಯ್ 3 ಪಾಯಿಂಟ್ಸ್ ಕಲೆಹಾಕಿದ್ದಾರೆ. ತಮಿಳ್ ತಲೈವಾಸ್ ಪರ ಮಂಜಿತ್ 10 ಪಾಯಿಂಟ್ಸ್, ಅಜಿಂಕ್ಯ ಪವಾರ್ 8 ಪಾಯಿಂಟ್ಸ್ ತನ್ನದಾಗಿಸಿಕೊಂಡರು. ಅಂತಿಮವಾಗಿ ಯುಪಿ ಯೋಧಾ 41-39 ಪಾಯಿಂಟ್ಸ್ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.

ಇಂದು ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಜಾಯಿಂಟ್ಸ್ ತೆಲುಗು ಟೈಟನ್ಸ್ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಉಭಯ ತಂಡಗಳು 14-14 ಪಾಯಿಂಟ್ಸ್ ಮೂಲಕ ಸಮಬಲ ಸಾಧಿಸಿದವು. ದ್ವಿತಿಯಾರ್ಧದಲ್ಲಿ ಮೇಲುಗೈ ಸಾಧಿಸಿದ ಗುಜರಾತ್ 20 ಪಾಯಿಂಟ್ಸ್ ಗಳಿಸಿದರೆ, ತೆಲುಗು ಟೈಟನ್ಸ್ 18 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಗುಜರಾತ್ ಜಾಯಿಂಟ್ಸ್ 34-32 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು.

ಗುಜರಾತ್ ಜಾಯಿಂಟ್ಸ್ ಪರ ರೈಡಿಂಗ್‌ನಲ್ಲಿ ಮಿಂಚಿದ ರಾಕೇಶ್ 8 ಪಾಯಿಂಟ್ಸ್ ಕಬಳಿಸಿದ್ರೆ, ಮಹೇಂದ್ರ ಗಣೇಶ್ ರಜಪೂತ್ 5 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ತೆಲುಗು ಟೈಟನ್ಸ್ ಪರ ರಜಿನೀಶ್ ದಲಾಲ್ 10 ಪಾಯಿಂಟ್ಸ್ ಮೂಲಕ ಅಬ್ಬರಿಸಿದ್ರು.

ಈ ಪಂದ್ಯದ ಗೆಲುವಿನ ಬಳಿಕ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 17 ಪಂದ್ಯಗಳಲ್ಲಿ 12 ಜಯಗಳಿಂದ ಒಟ್ಟು 65 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಸ್ಥಾನ ಪಡೆದಿದೆ. ದಬಾಂಗ್ ಡೆಲ್ಲಿ 57 ಪಾಯಿಂಟ್ಸ್‌ನಿಂದ ಮೂರನೇ ಸ್ಥಾನ ತಲುಪಿದೆ.

Story first published: Thursday, February 10, 2022, 0:03 [IST]
Other articles published on Feb 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+