ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಯುಪಿ ಯೋಧಾ, ಯು ಮುಂಬಾ, ಹರಿಯಾಣ ಸ್ಟೀಲರ್ಸ್‌ಗೆ ಗೆಲುವು

Pro kabaddi

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 95,96,97ನೇ ಪಂದ್ಯದಲ್ಲಿ ಸಾಲಾಗಿ ಯು ಮುಂಬಾ, ಯುಪಿ ಯೋಧಾ ಮತ್ತು ಹರಿಯಾಣ ಸ್ಟೀಲರ್ಸ್‌ಗೆ ಗೆಲುವು ಸಾಧಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು ತಮಿಳು ತಲೈವಾಸ್ ವಿರುದ್ಧ 35-33 ಪಾಯಿಂಟ್ಸ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಯು ಮುಂಬಾ ಪರ ಅಭಿಷೇಕ್ 10 ಪಾಯಿಂಟ್ಸ್, ಅಜಿತ್ ಕುಮಾರ್ 7 ಪಾಯಿಂಟ್ಸ್ ಮೂಲಕ ಯಶಸ್ವಿ ರೈಡರ್ ಎನಿಸಿದ್ರೆ, ತಮಿಳ್ ತಲೈವಾಸ್ ಮಜಿಂತ್ ಮತ್ತು ಅಜಿಂಕ್ಯಾ ಪವರ್ ತಲಾ 7 ಪಾಯಿಂಟ್ಸ್ ಕಲೆಹಾಕಿದ್ರು. ರೈಡಿಂಗ್‌ನಲ್ಲಿ ಮಿಂಚಿದ ಯು ಮುಂಬಾ ಎರಡು ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆದ್ದಿತು.

ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ತಂಡವು ತೆಲುಗು ಟೈಟನ್ಸ್ ವಿರುದ್ಧ 39-35 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆದ್ದಿತು. ಯುಪಿ ಪರ ಸುರೇಂದ್ರ ಕುಮಾರ್ 12, ಶ್ರೀಕಾಂತ್ ಜಾಧವ್ 9 ಪಾಯಿಂಟ್ಸ ಕಲೆಹಾಕಿದ್ರೆ, ತೆಲುಗು ಪರ ರಜನೀಶ್ ದಲಾಲ್ 13 ಪಾಯಿಮಟ್ಸ್ ಕಲೆಹಾಕಿದ್ದಾರೆ.

ಇಂದು ನಡೆದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 35-28 ಪಾಯಿಂಟ್ಸ್ ಅಂತರದಲ್ಲಿ ಪಂದ್ಯ ಗೆಲುವು ಸಾಧಿಸಿದೆ. ಹರಿಯಾಣ ಸ್ಟೀಲರ್ಸ್ ಪರ ವಿಕಾಸ್ ಖಂಡೊಲಾ 10 ಪಾಯಿಂಟ್ಸ್ ಕಲೆಹಾಕಿದ್ರೆ, ಜೈಪುರ್ ಪಿಂಕ್ ಪ್ಯಾಂಥರ್ಸ್ ಪರ ದೀಪಕ್ ನಿವಾಸ್ ಹೂಡಾ 8 ಪಾಯಿಂಟ್ಸ್ ಕಲೆಹಾಕಿದ್ರು.

ಈ ಮೂರು ಪಂದ್ಯಗಳ ಫಲಿತಾಂಶದ ಬಳಿಕವೂ ಪಾಯಿಂಟ್ಸ್ ಟೇಬಲ್‌ನಲ್ಲಿ 57 ಪಾಯಿಂಟ್ಸ್ ಕಲೆಹಾಕಿರುವ ದಬಾಂಗ್ ಡೆಲ್ಲಿ ಟೇಬಲ್ ಟಾಪರ್ ಆಗಿ ಮುಂದುವರಿದಿದೆ. 55 ಪಾಯಿಂಟ್ಸ ಪಡೆದ ಪಾಟ್ನಾ ಪೈರೇಟ್ಸ್ ಎರಡನೇ ಸ್ಥಾನ, 54 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಮೂರನೇ ಸ್ಥಾನದಲ್ಲಿದೆ.

Story first published: Saturday, February 5, 2022, 23:59 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X