ಬೆಂಗಳೂರು ಬುಲ್ಸ್ ಫೈನಲ್ ಕನಸು ಭಗ್ನ: ಸೆಮಿಫೈನಲ್‌ನಲ್ಲಿ ಡೆಲ್ಲಿಗೆ ಗೆಲುವು

ಪ್ರೊ ಕಬಡ್ಡಿ ಲೀಗ್ 8ನೇ ಸೀಸನ್‌ನಲ್ಲಿ ಬೆಂಗಳೂರು ಬುಲ್ಸ್ ಫೈನಲ್‌ಗೇರುವ ಕನಸು ಭಗ್ನಗೊಂಡಿದೆ. 2ನೇ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ದಬಾಂಗ್ ಡೆಲ್ಲಿ ವಿರುದ್ಧ 35-40 ಪಾಯಿಂಟ್ಸ್‌ಗಳೊಂದಿಗೆ ಮುಗ್ಗರಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಅವಧಿಯ ಆಟದಲ್ಲಿ ಕೇವಲ 4 ಅಂಕ ಸಂಪಾದನೆ ಮಾಡಿದರು. ಆದರೆ, ಈ ಅವಧಿಯಲ್ಲಿ ಅವರು ಕಾಲಿನ ಪಾದಕ್ಕೆ ಗಾಯ ಮಾಡಿಕೊಂಡಿದ್ದು ಡೆಲ್ಲಿ ತಂಡದ ಆತಂಕಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಬೆಂಗಳೂರು ಬುಲ್ಸ್ 17-16ರೊಂದಿಗೆ ಒಂದು ಅಂಕದ ಮುನ್ನಡೆ ಕಂಡುಕೊಳ್ಳುವಲ್ಲಿ ಯಶಸ್ಸು ಕಂಡಿತ್ತು.
ಮೊದಲ ಅವಧಿಯಲ್ಲಿ ರೈಡ್ ಪಾಯಿಂಟ್ ಮೂಲಕವೇ ಬೆಂಗಳೂರು ಬುಲ್ಸ್ 11 ಅಂಕ ಸಂಪಾದನೆ ಮಾಡಿದರೆ, ದಬಾಂಗ್ ತಂಡ ರೇಡ್ ಮೂಲಕ 7 ಅಂಕ ಸಂಪಾದನೆ ಮಾಡಿತ್ತು. ಅಲ್ಲದೆ, ಬೆಂಗಳೂರು ತಂಡವನ್ನು ಒಮ್ಮೆ ಆಲೌಟ್ ಮಾಡುವಲ್ಲೂ ದಬಾಂಗ್ ದೆಹಲಿ ತಂಡ ಯಶಸ್ವಿಯಾಗಿತ್ತು.
ಇನ್ನು ಎರಡನೇ ಅವಧಿಯಲ್ಲಿ ತಿರುಗೇಟು ನೀಡಿದ ದಬಾಂಗ್ ಡೆಲ್ಲಿ 24-18 ಪಾಯಿಂಟ್ಸ್‌ಗಳಿಂದ ಮುನ್ನಡೆ ಸಾಧಿಸಿ ಬುಲ್ಸ್ ತಂಡವನ್ನ ಸೆಮೀಸ್‌ನಲ್ಲಿ ಮಣಿಸಿದೆ.
ಬೆಂಗಳೂರು ಬುಲ್ಸ್ ಪರ ಪವನ್ ಶೆರಾವತ್ 18 ಪಾಯಿಂಟ್ಸ್‌ಗಳಿಸಿದ್ರೂ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಡಿಫೆಂಡರ್ ಮಣಿಂದರ್ ಸಿಂಗ್ 3, ಭರತ್ 4 ಪಾಯಿಂಟ್ಸ್ ಮೂಲಕ ಮಿಂಚಿದರು. ಮತ್ತೊಂದೆಡೆ ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ 14 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರೆ, ಆಲ್‌ರೌಂಡರ್ ವಿಜಯ್ 4 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಈ ಗೆಲುವಿನ ಮೂಲಕ ಡೆಲ್ಲಿ ಫೈನಲ್ ಹಂತಕ್ಕೆ ಏರಿದ್ರೆ, ಬುಲ್ಸ್ ಕಪ್ ಗೆಲ್ಲುವ ಕನಸು ನುಚ್ಚು ನೂರಾಗಿದೆ.
ಪವನ್ ಏಕಾಂಗಿ ಹೋರಾಟ ವ್ಯರ್ಥ
ದೆಹಲಿ ವಿರುದ್ಧ ಬೆಂಗಳೂರು ಬುಲ್ಸ್ ತಂಡದ ನಾಯಕ ಹಾಗೂ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ ಏಕಾಂಗಿ ಹೋರಾಟ ನಡೆಸಿದರು. ಪಂದ್ಯದಲ್ಲಿಯೇ ಗರಿಷ್ಠ 18 ಅಂಕಗಳನ್ನು ಗಳಿಸಿದರು. ಅಲ್ಲದೆ ಬೆಂಗಳೂರು ತಂಡದ ಯಾವೊಬ್ಬ ಆಟಗಾರರು ಸಹ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಂಚಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications