ತೆಲುಗು ಟೈಟನ್ಸ್ vs ಪುಣೇರಿ ಪಲ್ಟನ್: ಡ್ರೀಂ ಟೀಂ ಪ್ರೆಡಿಕ್ಷನ್, ನಾಯಕ ಹಾಗೂ ಉಪನಾಯಕ ಆಯ್ಕೆ ಏನು?

ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್ ಭರ್ಜರಿಯಾಗಿ ಸಾಗುತ್ತಿದ್ದು, ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಮಂಗಳವಾರ (ಅ.18) ಬೆಂಗಾಲ್ ವಾರಿಯರ್ಸ್ ಮತ್ತು ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾದ್ರೆ, ತೆಲುಗು ಟೈಟನ್ಸ್ ತಂಡವು ಪುಣೇರಿ ಪಲ್ಟನ್ ಸವಾಲನ್ನು ಎದುರಿಸುತ್ತಿದೆ.
ಪಿಕೆಎಲ್ 9ನೇ ಸೀಸನ್‌ನ 27ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್‌ಗೆ ಪುಣೇರಿ ಪಲ್ಟನ್ ಪ್ರಮುಖ ಸವಾಲನ್ನ ಹಾಕಲಿದೆ. ಪಾಯಿಂಟ್ಸ್ ಟೇಬಲ್‌ನಲ್ಲಿ 10ನೇ ಸ್ಥಾನದಲ್ಲಿರುವ ತೆಲುಗು ಟೈಟನ್ಸ್‌ಗೆ 8ನೇ ಸ್ಥಾನ ಅಲಂಕರಿಸಿರುವ ಪುಣೇರಿ ಪಲ್ಟನ್ ಪ್ರಮುಖ ಸವಾಲೊಡ್ಡಲಿದೆ. ಎರಡು ತಂಡಗಳು ಪಂದ್ಯವನ್ನ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಬಡ್ತಿ ಪಡೆಯಲು ಎದುರು ನೋಡುತ್ತಿವೆ.
ಪುಣೇರಿ ಪಲ್ಟನ್ ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಪ್ರಭಾವಶಾಲಿ ಪ್ರದರ್ಶನ ನೀಡುವ ಮೂಲಕ ಅಬ್ಬರಿಸಿತು. ಹೀಗಾಗಿ ತೆಲುಗು ಟೈಟನ್ಸ್ ವಿರುದ್ಧ ತನ್ನ ಗೆಲುವಿನ ಓಟವನ್ನ ಮುಂದುವರಿಸಲು ಪಲ್ಟನ್ಸ್ ಎದುರು ನೋಡುತ್ತಿದ್ದಾರೆ.

ತೆಲುಗು ಟೈಟನ್ಸ್‌ಗೆ ಡಿಫೆಂಡರ್‌ಗಳದ್ದೇ ತಲೆನೋವು
ಪುಣೇರಿ ಪಲ್ಟನ್ ಪರ ಅಸ್ಲಾಂ ಇನಾಮ್ದಾರ್ ಮತ್ತು ಮೋಹಿತ್ ಗೋಯತ್ ಉತ್ತಮ ಫಾರ್ಮ್‌ನಲ್ಲಿದ್ದು, ತೆಲುಗು ಟೈಟನ್ಸ್ ವಿರುದ್ಧ ಪ್ರಮುಖ ಪಾತ್ರವಹಿಸಲಿದ್ದಾರೆ. ಮತ್ತೊಂದೆಡೆ ತನ್ನ ಬಲವನ್ನ ಸಂಪೂರ್ಣವಾಗಿ ಬಳಸಿಕೊಳ್ಳದ ತೆಲುಗು ಟೈಟನ್ಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿದೆ. ಡಿಫೆಂಡರ್ಸ್ ಸುರ್ಜೀತ್ ಸಿಂಗ್ ಮತ್ತು ಪರ್ವೇಶ್ ಬೈನ್ಸಾವಲ್ ಕಳಪೆ ಫಾರ್ಮ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ. ಹೀಗಾಗಿ ತೆಲುಗು ಟೈಟನ್ಸ್ ಈ ಪಂದ್ಯ ಗೆಲ್ಲಲು ಈ ಇಬ್ಬರು ಆಟಗಾರರು ಮಿಂಚಬೇಕಿದೆ.
ತೆಲುಗು ಟೈಟನ್ಸ್ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8.30ಕ್ಕೆ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವನ್ನ ಡಿಸ್ನಿ + ಹಾಟ್‌ಸ್ಟಾರ್ ಮತ್ತು ವೆಬ್‌ಸೈಟ್ ಮೂಲಕ ವೀಕ್ಷಿಸಬಹುದಾಗಿದೆ.

ತೆಲುಗು ಟೈಟನ್ಸ್ vs ಪುಣೇರಿ ಪಲ್ಟನ್ ಡ್ರೀಂ ಇಲೆವೆನ್ ಪ್ರೆಡಿಕ್ಷನ್
ನಾಯಕ: ಫಜೇಲ್ ಅತ್ರಾಚಲಿ
ಉಪನಾಯಕ: ಮೋಹಿತ್ ಗೋಯತ್
ಡಿಫೆಂಡರ್ಸ್: ಪರ್ವೇಶ್ ಬೈನ್ಸಾವಲ್, ಫಜೇಲ್ ಅತ್ರಾಚಲಿ, ಸಂಕೇತ್ ಸಾವತ್
ಆಲ್‌ರೌಂಡರ್: ಮೋನು ಗೋಯತ್
ರೈಡರ್ಸ್: ಮೋಹಿತ್ ಗೋಯತ್, ಅಸ್ಲಾಂ ಇನಾಮ್ದಾರ್, ಸಿದ್ದಾರ್ಥ್ ದೇಸಾಯಿ

ತೆಲುಗು ಟೈಟನ್ಸ್ ಮತ್ತು ಪುಣೇರಿ ಪಲ್ಟನ್ ಸಂಭಾವ್ಯ ತಂಡ
ತೆಲುಗು ಟೈಟಾನ್ಸ್ ಸಂಭಾವ್ಯ ಆರಂಭಿಕ 7: ಪರ್ವೇಶ್ ಭೈನ್ಸ್ವಾಲ್, ಅಭಿಷೇಕ್ ಸಿಂಗ್, ಮೋನು ಗೋಯತ್, ವಿಶಾಲ್ ಭಾರದ್ವಾಜ್, ರವೀಂದರ್ ಪಹಲ್, ಸುರ್ಜೀತ್ ಸಿಂಗ್, ಸಿದ್ಧಾರ್ಥ್ ದೇಸಾಯಿ
ಪುಣೇರಿ ಪಲ್ಟನ್ ಸಂಭಾವ್ಯ ಆರಂಭಿಕ 7: ಫಜೇಲ್ ಅತ್ರಾಚಲಿ, ಸಂಕೇತ್ ಸಾವಂತ್, ಗೌರವ್ ಖಾತ್ರಿ, ಮೊಹಮ್ಮದ್ ನಬಿ ಬಕ್ಷ್, ಅಸ್ಲಂ ಇನಾಮದಾರ್, ಮೋಹಿತ್ ಗೋಯತ್, ಆಕಾಶ್ ಶಿಂಧೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications