ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಬೆಂಗಾಲ್ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಜೈಪುರ್ ಪಿಂಕ್ ಪಾಂಥರ್ಸ್

Pro Kabaddi: Jaipur Pink Panthers register big win against Bengal Warriors Highlights

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಗಳು ಇಂದು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದು ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸುವಲ್ಲಿ ಪಿಂಕ್ ಪ್ಯಾಂಥರ್ಸ್ ತಂಡ ಮಿಂಚಿದೆ.

ಮಣಿಂದರ್ ಸಿಂಗ್ ನೇತೃತ್ವದ ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯದಲ್ಲಿ ಸುನಿಲ್ ಕುಮಾರ್ ನೇತೃತ್ವದ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಪ್ರಬಲ ಪೈಪೋಟಿ ನೀಡುವಲ್ಲಿ ಸಂಪೂರ್ಣ ವಿಫಲವಾಯಿತು. ತಂಡದ ಪ್ರಮುಖ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ ಈ ಪಂದ್ಯವನ್ನು ಬೆಂಗಾಲ್ ವಾರಿಯರ್ಸ್ ಸೋಲು ಅನುಭವಿಸುವಂತಾಯಿತು.

ಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರಬಿಸಿಸಿಐ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಅಧಿಕೃತ ಆಯ್ಕೆ: AGMನಲ್ಲಿ ಮಹತ್ವದ ನಿರ್ಧಾರ

ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಪರವಾಗಿ ರೈಡರ್ ಅರ್ಜುನ್ ದೇಶ್ವಾಳ್ 10 ಅಂಕಗಳನ್ನು ಪಡೆದು ಮಿಂಚಿದ್ದಾರೆ. ಉಳಿದಂತೆ ವಿ ಅಜಿತ್ ಹಾಗೂ ಭವಾನಿ ರಜಪೂತ್ ಕೂಡ ರೈಡಿಂಗ್ ಮೂಲಕ 5 ಅಂಕಗಳನ್ನು ಸಂಪಾದಿಸಿದರು. ಇನ್ನು ಡಿಫೆಂಡರ್ ಅಂಕುಶ್ 5 ಅಂಕಗಳನ್ನು ಪಡೆದು ತಂಡಕ್ಕೆ ಮಹತ್ವದ ಕೊಡುಗೆ ನೀಡುವಲ್ಲಿ ಯಶಸ್ವಿಯಾದರು. ಇತ್ತ ಬೆಂಗಾಲ್ ವಾರಿಯರ್ಸ್ ತಮಡದ ಪರವಾಗಿ ಶ್ರೀಕಾಂತ್ ಜಾಧವ್ 6 ಅಂಕಗಳಿಸಿದರೆ ಉಳೀದ ಆಟಗಾರರಿಂದ ಅಂಥಾ ಪ್ರದರ್ಶನ ಬಾರದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.

ಈ ಟೂರ್ನಿಯ ಉದ್ಘಾಟನಾ ದಿನದಂದು ಯುಪಿ ಯೋಧಾಸ್ ವಿರುದ್ಧ 32-24 ಸೋಲಿನ ಬಳಿಕ ಪಿಂಕ್ ಪ್ಯಾಂಥರ್ಸ್ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿದೆ. ನಂತರದ ನಾಲ್ಕು ಪಂದ್ಯಗಳಲ್ಲಿ ಪಾಟ್ನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್, ಗುಜರಾತ್ ಜೈಂಟ್ಸ್ ತಂಡಗಳನ್ನು ಸೋಲಿಸಿದ ಬಳಿಕ ಇದೀಗ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧವೂ ಗೆಲುವು ಸಾಧಿಸಿ ಮಿಂಚಿದೆ.

T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾT20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಬೆಂಗಾಲ್ ವಾರಿಯರ್ಸ್ ಸ್ಕ್ವಾಡ್
ರೈಡರ್ಸ್: ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್, ಆಕಾಶ್ ಪಿಕಾಲ್ಮುಂಡೆ, ಅಸ್ಲಾಂ ಸಜಾ ಮೊಹಮ್ಮದ್ ತಂಬಿ, ಆರ್ ಗುಹಾನ್, ಸುಯೋಗ್ ಬಾಬನ್ ಗಾಯ್ಕರ್, ಪರಶಾಂತ್ ಕುಮಾರ್
ಡಿಫೆಂಡರ್ಸ್: ಗಿರೀಶ್ ಎರ್ನಾಕ್, ಅಮಿತ್ ಶೆರಾನ್, ಸುರೇಂದರ್ ನಾಡಾ, ಪರ್ವೀನ್ ಸತ್ಪಾಲ್, ಶುಭಂ ಶಿಂಧೆ, ಸೊಲೇಮಾನ್ ಪಹ್ಲೆವಾನಿ, ಶಕ್ತಿವೇಲ್ ಆರ್, ವೈಭವ್ ಭೌಸಾಹೇಬ್ ಗರ್ಜೆ.
ಆಲ್ ರೌಂಡರ್ಸ್: ದೀಪಕ್ ನಿವಾಸ್ ಹೂಡಾ, ಅಜಿಂಕ್ಯ ರೋಹಿದಾಸ್ ಕಪ್ರೆ, ಆಶಿಶ್ ಕುಮಾರ್ (ಸಾಂಗ್ವಾನ್), ರೋಹಿತ್, ಬಾಲಾಜಿ ಡಿ, ವಿನೋದ್ ಕುಮಾರ್, ಮನೋಜ್ ಗೌಡ ಕೆ.

ಜೈಪುರ್ ಪಿಂಕ್ ಪ್ಯಾಂಥರ್ಸ್ ಸ್ಕ್ವಾಡ್
ರೈಡರ್ಸ್: ಅರ್ಜುನ್ ದೇಶ್ವಾಲ್, ಅಜಿತ್ ವಿ ಕುಮಾರ್, ರಾಹುಲ್ ಚೌಧರಿ, ಭವಾನಿ ರಜಪೂತ್, ನಿತಿನ್ ಪನ್ವಾರ್, ನವನೀತ್, ದೇವಾಂಕ್
ಡಿಫೆಂಡರ್ಸ್: ಸುನಿಲ್ ಕುಮಾರ್, ವೂಸನ್ ಕೆಒ, ಸಾಹುಲ್ ಕುಮಾರ್, ರೆಜಾ ಮಿರ್ಬಗೇರಿ, ಅಭಿಷೇಕ್ ಕೆಎಸ್, ಆಶಿಶ್, ಅಂಕುಶ್, ದೀಪಕ್ ಸಿಂಗ್, ಲಕ್ಕಿ ಶರ್ಮಾ, ನಿತಿನ್ ಚಾಂಡೆಲ್, ಮಾರಿಮುತ್ತು ಕಾಮರಾಜ್
ಆಲ್ ರೌಂಡರ್ಸ್: ರಾಹುಲ್ ಗೋರಖ್ ಧನವಾಡೆ

Story first published: Wednesday, October 19, 2022, 10:24 [IST]
Other articles published on Oct 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X