Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಕೆಎಲ್ ಹರಾಜು: ದಾಖಲೆ ಬೆಲೆಗೆ ಯುಪಿ ಯೋಧ ಸೇರಿದ ಪರ್ದೀಪ್ ನರ್ವಾಲ್

Pro Kabaddi League 2021 Auction: Pardeep Narwal Joins UP Yodha for record price of 1.65 Crore

ಮುಂಬೈ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್)ನಲ್ಲಿ ಬೆಸ್ಟ್ ರೈಡರ್ ಎಂದು ಕರೆಸಿಕೊಂಡಿದ್ದ ಪರ್ದೀಪ್ ನರ್ವಾಲ್ ದಾಖಲೆ ಬೆಲೆಗೆ ಯುಪಿ ಯೋಧ ಪಾಲಾಗಿದ್ದಾರೆ. ಮುಂಬೈಯಲ್ಲಿ ನಡೆದ ಹರಾಜಿನಲ್ಲಿ ಪರ್ದೀಪ್ ಅವರನ್ನು ಯುಪಿ ಯೋಧ ತಂಡ ಬರೋಬ್ಬರಿ 1.65 ಕೋಟಿ ರೂ.ಗೆ ಖರೀದಿಸಿದೆ.

ಸೋಮವಾರ (ಆಗಸ್ಟ್ 30) ನಡೆದ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪರ್ದೀಪ್ ನರ್ವಾಲ್ ಗಾಗಿ ಹಲವಾರು ಫ್ರಾಂಸಿಗಳು ಪೈಪೋಟಿ ನಡೆಸಿದವು. ಜೈಪುರ್ ಪಿಂಗ್ ಪ್ಯಾಂಥರ್ಸ್, ತೆಲುಗು ಟೈಟಾನ್ಸ್, ಯುಪಿ ಯೋಧ ಸೇರಿದಂತೆ ಹಲವಾರು ಫ್ರಾಂಚೈಸಿಗಳು ಬೆಸ್ಟ್ ರೈಡರ್ ಪರ್ದೀಪ್‌ಗಾಗಿ ಸೆಣಸಾಡಿದವು. ಅಂತಿಮವಾಗಿ ಯುಪಿ ತಂಡ 1.65 ಕೋಟಿ ರೂ.ಗೆ ಪರ್ದೀಪ್ ಅನ್ನು ಖರೀದಿಸಿತು.

ಪರ್ದೀಪ್ ನರ್ವಾಲ್ ಸೇಲ್ ಆಗಿರುವ 1.65 ಕೋಟಿ ರೂ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ದಾಖಲೆಯ ಮೊತ್ತವಾಗಿ ಗುರುತಿಸಿಕೊಂಡಿದೆ. ಇದು ಬಿಟ್ಟರೆ ಈ ಬಾರಿಯ ಹರಾಜಿನಲ್ಲಿ ಅತೀ ಹೆಚ್ಚಿನ ಬೆಲೆಗೆ ಹರಾಜಾದವರೆಂದರೆ ಸಿದ್ಧಾರ್ಥ್ ದೇಸಾಯ್.

ದೇಸಾಯ್ ಅವರನ್ನು ತೆಲುಗು ಟೈಟಾನ್ಸ್ ತಂಡ 1.30 ಕೋಟಿ ರೂ.ಗೆ ತನ್ನಲ್ಲೇ ಉಳಿಸಿಕೊಂಡಿದೆ. ಅದು ಬಿಟ್ಟರೆ ಮನ್ಜೀತ್‌ 92 ಲಕ್ಷ ರೂ.ಗೆ ತಮಿಳು ತಲೈವಾಸ್ ಸೇರಿಕೊಂಡಿದ್ದಾರೆ. ಇನ್ನು ಸಚಿನ್ 84 ಲಕ್ಷ ರೂ.ಗೆ ಪಾಟ್ನಾ ಪೈರೇಟ್ಸ್‌ ಪಾಲಾಗಿದ್ದಾರೆ.

ಉಳಿದಂತೆ ಹರಾಜಿನಲ್ಲಿ ಬೇರೆ ಬೇರೆ ತಂಡ ಸೇರಿದ ಆಟಗಾರರ ಪಟ್ಟಿ ಕೆಳಗಿದೆ
* ದೀಪಕ್ ನಿವಾಸ್ ಹೂಡ, 30 ಲಕ್ಷ ರೂ. ಮೂಲಬೆಲೆ, 55 ಲಕ್ಷ ರೂ.ಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಪಾಲಾಗಿದ್ದಾರೆ.
* ರೋಹಿತ್ ಗುಲಿಯಾ, ಹಿಂದಿನ ತಂಡ ಗುಜರಾತ್‌ ಜೇಂಟ್ಸ್, ಮೂಲ ಬೆಲೆ 30 ಲಕ್ಷ ರೂ., 83 ಲಕ್ಷ ರೂ.ಗೆ ಹರ್ಯಾಣ ಸ್ಟೀಲರ್ಸ್‌ ಪಾಲಾಗಿದ್ದಾರೆ.
* ರವೀಂದರ್ ಪಹಾಲ್, ಮೂಲ ಬೆಲೆ 30 ಲಕ್ಷ ರೂ., 74 ಲಕ್ಷ ರೂ.ಗೆ ಗುಜರಾತ್ ಜೇಂಟ್ಸ್ ಸೇರಿಕೊಂಡಿದ್ದಾರೆ.
* ವಿಶಾಲ್ ಭಾರದ್ವಾಜ್, ಮೂಲ ಬೆಲೆ 30 ಲಕ್ಷ ರೂ., 60 ಲಕ್ಷಕ್ಕೆ ಪುಣೆರಿ ಪಲ್ಟಾನ್ ಪಾಲಾಗಿದ್ದಾರೆ.
* ಬಲದೇವ್ ಸಿಂಗ್, ಮೂಲ ಬೆಲೆ 30 ಲಕ್ಷ ರೂ., 60 ಲಕ್ಷಕ್ಕೆ ಪುಣೆರಿ ಪಲ್ಟಾನ್ ಪಾಲಾಗಿದ್ದಾರೆ.
* ಸುರೇಂದರ್ ಸಿಂಗ್, ಮೂಲ ಬೆಲೆ 30 ಲಕ್ಷ ರೂ., 55 ಲಕ್ಷ ರೂ. ತೆಲುಗು ಟೈಟಾನ್ಸ್ ಸೇರಿದ್ದಾರೆ.
* ಸಂದೀಪ್ ಕುಮಾರ್ ದುಲ್, ಮೂಲ ಬೆಲೆ 30 ಲಕ್ಷ ರೂ., 45 ಲಕ್ಷ ರೂ.ಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆ ಮಾರಾಟವಾಗಿದ್ದಾರೆ.
* ಪಿಒ ಸುರ್ಜೀತ್ ಸಿಂಗ್, ಹಿಂದಿನ ತಂಡ ಪುಣೆರಿ ಪಲ್ಟಾನ್ಸ್, ಮೂಲ ಬೆಲೆ 30 ಲಕ್ಷ ರೂ., 75 ಲಕ್ಷ ರೂ.ಗೆ ತಮಿಳು ತಲೈವಾಸ್ ಪಾಲಾಗಿದ್ದಾರೆ.
* ಮಹೇಂದರ್ ಸಿಂಗ್, ಹಿಂದಿನ ತಂಡ ಬೆಂಗಳೂರು ಬುಲ್ಸ್, ಮೂಲ ಬೆಲೆ 30 ಲಕ್ಷ ರೂ., 50 ಲಕ್ಷ ರೂ.ಗೆ ಪಾಟ್ನಾ ಪೈರೇಟ್ಸ್ ಸೇರಿಕೊಂಡಿದ್ದಾರೆ.
* ರಾಹುಲ್ ಚೌಧರಿ, ಮೂಲ ಬೆಲೆ 30 ಲಕ್ಷ ರೂ., 40 ಲಕ್ಷ ರೂ.ಗೆ ಪುಣೆರಿ ಪಲ್ಟಾನ್ ಗೆ ಮಾರಾಟವಾಗಿದ್ದಾರೆ.
* ಪರ್ದೀಪ್ ನರ್ವಾಲ್, ಹಿಂದಿನ ತಂಡ ಪಾಟ್ನಾ ಪೈರೇಟ್ಸ್, ಮೂಲ ಬೆಲೆ 30 ಲಕ್ಷ ರೂ., 1.65 ಕೋಟಿ ರೂ.ಗೆ ಯುಪಿ ಯೋಧಾ ಸೇರಿಕೊಂಡಿದ್ದಾರೆ.
* ಮನ್‌ಜೀತ್ ಸಿಂಗ್, ಹಿಂದಿನ ತಂಡ ಪುಣೆರಿ ಪಲ್ಟಾನ್ಸ್, ಮೂಲ ಬೆಲೆ 30 ಲಕ್ಷ ರೂ., 92 ಲಕ್ಷಕ್ಕೆ ತಮಿಳು ತಲೈವಾಸ್ ಪಾಲಾಗಿದ್ದಾರೆ.
* ಶ್ರೀಕಾಂತ್ ಜಾಧವ್, ಮೂಲ ಬೆಲೆ 30 ಲಕ್ಷ ರೂ, 72 ಲಕ್ಷ ರೂ.ಗೆ ಯುಪಿ ಯೋಧ ಸೇರಿಕೊಂಡಿದ್ದಾರೆ.
* ರೋಹಿತ್ ಕುಮಾರ್, ಹಿಂದಿನ ತಂಡ ಬೆಂಗಳೂರು ಬುಲ್ಸ್, ಮೂಲ ಬೆಲೆ 30 ಲಕ್ಷ ರೂ., ತೆಲುಗು ಟೈಟಾನ್ಸ್ 36 ಲಕ್ಷ ರೂ.ಗೆ ಖರೀದಿಸಿದೆ.
* ಚಂದ್ರನ್ ರಂಜಿತ್, ಮೂಲ ಬೆಲೆ 30 ಲಕ್ಷ ರೂ., 80 ಲಕ್ಷ ರೂ.ಗೆ ಬೆಂಗಳೂರು ಬುಲ್ಸ್ ಸೇರಿಸಿಕೊಂಡಿದ್ದಾರೆ.
* ವಿಕಾಸ್ ಜಗ್ಲನ್, ಮೂಲ ಬೆಲೆ 20 ಲಕ್ಷ ರೂ., ಹರ್ಯಾಣ ಸ್ಟೀಲರ್ಸ್ 20 ರೂ.ಗೆ ಖರೀದಿಸಿದೆ.
* ಸಂದೀಪ್ ನರ್ವಾಲ್, ಮೂಲ ಬೆಲೆ 20 ಲಕ್ಷ ರೂ., 60 ಲಕ್ಷ ರೂ.ಗೆ ದಬಾಂಗ್ ಡೆಲ್ಲಿ ಪಾಲಾಗಿದ್ದಾರೆ.

Story first published: Tuesday, August 31, 2021, 10:00 [IST]
Other articles published on Aug 31, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+