ಪ್ರೊ ಕಬಡ್ಡಿ ಲೀಗ್: ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ ಲೀಗ್‌ನಲ್ಲಿ ಜನವರಿ 6ರಂದು ಎರಡು ಪಂದ್ಯಗಳು ನಡೆದಿದ್ದು ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರೆ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಿಂಕ್ ಪ್ಯಾಂಥರ್ ಮಧ್ಯೆ ನಡೆದಿದೆ. ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಟೈ ಫಲಿತಾಂಶವನ್ನು ಪಡೆದುಕೊಂಡಿದ್ದರೆ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಬೆಂಗಳೂರು ಬುಲ್ಸ್vs ಪಿಂಕ್ ಪ್ಯಾಂಥರ್: ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧಧ ಪಂದ್ಯದಲ್ಲಿ ಭರ್ಜರಿಯಾಗಿ ಆರಂಭವನ್ನು ಪಡೆದ ಬೆಂಗಳೂರು ಬುಲ್ಸ್ ನಿರಂತರವಾಗಿ ಮುನ್ನಡೆಯನ್ನು ಸಾಧಿಸುತ್ತಲೇ ಸಾಗಿತ್ತು. ಈ ಮೂಲಕ 38-31 ಅಂತರದಿಂದ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಅಂತಿಮ ಹಂತದಲ್ಲಿ ಕೆಲ ಅನಗತ್ಯ ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿತಾದರೂ ತಮಡಕ್ಕೆ ಹೆಚ್ಚಿನ ಹಾನಿ ಉಂಟಾಗಲಿಲ್ಲ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ ಸತತ ಆರನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಮುನ್ನುಗ್ಗಿದೆ.
ಇನ್ನು ಈ ಪಂದ್ಯದಲ್ಲಿ ಬೆಂಗಳೂರು ತಂಡದ ಪರವಾಗಿ ಪವರ್ ಶೆರಾವತ್ ಭರ್ಜರಿ 18 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಬೆಂಗಳೂರು ಬುಲ್ಸ್ ತಂಡ ರೈಡಿಂಗ್ ಹಾಗೂ ರಕ್ಷಣಾ ವಿಭಾಗ ಎರಡರಲ್ಲಿಯೂ ಪಿಂಕ್ ಪ್ಯಾಂಥರ್ಸ್ ತಂಡಕ್ಕಿಂತ ಮೇಲುಗೈ ಸಾಧಿಸಿದೆ. 21 ಅಂಕಗಳು ರೈಡಿಂಗ್ ಮೂಲಕ ಪಡೆದುಕೊಂಡಿದ್ದರೆ 12 ಅಂಕಗಳು ಟ್ಯಾಕಲ್ ಮೂಲಕ ತಂಡಕ್ಕೆ ಸೇರ್ಪಡೆಯಾಗಿತ್ತು.
ಬೆಂಗಳೂರು ಬುಲ್ಸ್ ಪ್ಲೇಯಿಂಗ್ 7: ಪವನ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್, ಮಯೂರ್ ಕದಮ್, ಮಹೇಂದರ್ ಸಿಂಗ್, ಸೌರಭ್ ನಂದಲ್, ಅಮನ್
ಜೈಪುರ ಪಿಂಕ್ ಪ್ಯಾಂಥರ್ಸ್ ಪ್ಲೇಯಿಂಗ್ 7: ದೀಪಕ್ ನಿವಾಸ್ ಹೂಡಾ, ಅರ್ಜುನ್ ದೇಶ್ವಾಲ್, ಎಳವರಸನ್, ದೀಪಕ್ ಸಿಂಗ್, ನವೀನ್, ಸಾಹುಲ್ ಕುಮಾರ್, ಧರ್ಮಾರ್ಜ್ ಚೇರಲತನ್
ಪಾಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್: ಇನ್ನು ಇಂದಿನ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ 30 ಅಂಕ ಗಳಿಸಿದ್ದ ಕಾರಣ ಪಂದ್ಯ ಟೈ ಫಲಿತಾಂಶವನ್ನು ಕಂಡಿದೆ.
ಪಾಟ್ನಾ ಪೈರೇಟ್ಸ್ ಪ್ಲೇಯಿಂಗ್ 7: ಮೋನು ಗೋಯತ್, ಮೊಹಮ್ಮದ್ರೇಜಾ ಚಿಯಾನೆ, ನೀರಜ್ ಕುಮಾರ್, ಸಜಿನ್ ಸಿ, ಸಚಿನ್, ಪ್ರಶಾಂತ್ ಕುಮಾರ್ ರೈ, ಸುನಿಲ್
ತಮಿಳ್ ತಲೈವಾಸ್ ಪ್ಲೇಯಿಂಗ್ 7: ಸುರ್ಜೀತ್ ಸಿಂಗ್, ಆಶಿಶ್, ಭವಾನಿ ರಜಪೂತ್, ಅತುಲ್ ಎಂಎಸ್, ಹಿಮಾಂಶು ಸಿಂಗ್, ಸಾಗರ್, ಸಾಗರ್ ಕೃಷ್ಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications