
ಬೆಂಗಾಲ್ ವಾರಿಯರ್ಸ್ vs ಹರ್ಯಾಣ ಸ್ಟೀಲರ್ಸ್: ಪ್ರೊ ಕಬಡ್ಡಿ ಲೀಗ್‌ನಲ್ಲಿ ಜನವರಿ 7ರಂದು ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಹರ್ಯಾಣ ಸ್ಟೀಲರ್ಸ್ ರೋಚಕ ಗೆಲುವು ಸಾಧಿಸಿದೆ. ಮೀತು ಮಹೇಂದರ್ ನೀಡಿದ ಅದ್ಭುತ ಪ್ರದರ್ಶನದಿಂದ ಹಾಲಿ ಚಾಂಪಿಯನ್ನರ ವಿರುದ್ಧ ಹರ್ಯಾಣ ಸ್ಟೀಲರ್ಸ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಹರ್ಯಾಣ ಸ್ಟೀಲರ್ಸ್ ಪರವಾಗಿ ನಾಯಕ ವಿಕಾಶ್ ಖಂಡೋಲ ಕೂಡ 9 ಅಂಕಗಳನ್ನು ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಇನ್ನು ಸ್ಟೀಲರ್ಸ್ ತಂಡದ ಡಿಫೆಂಡಿಂಗ್ ವಿಭಾಗ ಕೂಡ ಅದ್ಭುತವಾಗಿ ಪ್ರದರ್ಶನ ನೀಡಿತು. ಜೈದೀಪ್, ಮೋಹಿತ್ ಹಾಗೂ ಸುರೇಂದರ್ ಪ್ರದರ್ಶನ ಗಮನಸೆಳೆದಿದೆ.
ಹರಿಯಾಣ ಸ್ಟೀಲರ್ಸ್ ಆರಂಭಿಕ ಪ್ಲೇಯಿಂಗ್ 7: ವಿಕಾಶ್ ಕಾಂಡೋಲಾ, ಮೀಟು ಶರ್ಮಾ, ರೋಹಿತ್ ಗುಲಿಯಾ, ಸುರೇಂದರ್ ನಾಡಾ, ಜೈದೀಪ್ ದಹಿಯಾ, ಮೋಹಿತ್ ನಂದಲ್, ರವಿ ಕುಮಾರ್
ಬೆಂಗಾಲ್ ವಾರಿಯರ್ಸ್ ಆರಂಭಿಕ ಪ್ಲೇಯಿಂಗ್ 7: ಮಣಿಂದರ್ ಸಿಂಗ್, ದರ್ಶನ್ ಜೆ, ಅಮಿತ್ ನಿರ್ವಾಲ್, ಸುಕೇಶ್ ಹೆಗ್ಡೆ, ಮೊಹಮ್ಮದ್ ನಬಿಬಕ್ಷ್, ಅಬೋಜರ್ ಮಿಘಾನಿ, ಸಚಿನ್ ವಿಟ್ಟಲ
ಜೈಪುರ್ ಪಿಂಕ್ ಪ್ಯಾಂಥರ್ಸ್ vs ಪುಣೆರಿ ಪಲ್ತಾನ್ಸ್: ಇನ್ನು ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಪುಣೆರಿ ಪಲ್ತಾನ್ಸ್ ತಂಡಗಳು ಮುಖಾಮುಖಿಯಾಗಿದೆ.
ಜೈಪುರ ಪಿಂಕ್ ಪ್ಯಾಂಥರ್ಸ್ ಆರಂಭಿಕ ಪ್ಲೇಯಿಂಗ್ 7: ಅರ್ಜುನ್ ದೇಶ್ವಾಲ್, ಸಂದೀಪ್ ಧುಲ್, ನವೀನ್, ವಿಶಾಲ್, ಸಾಹುಲ್ ಕುಮಾರ್, ಅಮಿತ್ ನಗರ್, ಅಮಿತ್
ಪುಣೇರಿ ಪಲ್ಟನ್ ಆರಂಭಿಕ ಪ್ಲೇಯಿಂಗ್ 7: ಅಸ್ಲಾಂ ಇನಾಮದಾರ್, ಅಭಿನೇಶ್ ನಟರಾಜನ್, ಸಂಕೇತ್ ಸಾವಂತ್, ಪಂಕಜ್ ಮೋಹಿತೆ, ಮೋಹಿತ್ ಗೋಯತ್, ಬಲದೇವ್ ಸಿಂಗ್, ವಿಶಾಲ್ ಭಾರದ್ವಾಜ್