ಪ್ರೊ ಕಬಡ್ಡಿ: ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್: ಯು ಮುಂಬಾಗೆ ಭರ್ಜರಿ ಗೆಲುವು

ಪ್ರೊ ಕಬಡ್ಡಿ ಲೀಗ್‌ನ 8ನೇ ಆವೃತ್ತಿಗೆ ಚಾಲನೆ ದೊರೆತಿದ್ದು ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಯು ಮುಂಬಾ ತಂಡ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಯು ಮುಂಬಾ ತಂಡ ಶುಭಾರಂಭ ಮಾಡಿದರೆ ಬೆಂಗಳೂರು ಬುಲ್ಸ್ ತಂಡ ಮೊದಲ ಪಂದ್ಯದಲ್ಲಿಯೇ ನಿರಾಸೆ ಅನುಭವಿಸಿದೆ.
ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ 46-30 ಅಂಕಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಯು ಮುಂಬಾ ಈ ಪಂದ್ಯದಲ್ಲಿ ತನ್ನ ರಕ್ಷಣಾ ವಿಭಾಗದ ಸಾಮರ್ಥ್ಯವನ್ನು ಅದ್ಭುತವಾಗಿ ಬಳಸಿಕೊಂಡಿದೆ. ಈ ವಿಭಾಗದಲ್ಲಿಯೇ ಬೆಂಗಳೂರು ಬುಲ್ಸ್ ತಂಡಕ್ಕಿಂತ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಎದುರಾಳಿ ಬೆಂಗಳೂರು ಬುಲ್ಸ್ ತಂಡದ ರೈಡರ್‌ಗಳನ್ನು ಔಟ್ ಮಾಡುವ ಮೂಲಕ 13 ಅಂಕಗಳನ್ನು ಗಳಿಸಿದೆ. ಆದರೆ ಬೆಂಗಳೂರು ಟ್ಯಾಕಲ್ ಮೂಲಕ ಗಳಿಸಿದ್ದು ಕೇವಲ 3 ಅಂಕಗಳನ್ನು ಮಾತ್ರ. ಇನ್ನು ರೈಡ್ ಪಾಯಿಂಗ್‌ಗಳ ಮೂಲಕ ಬೆಂಗಳೂರು 27 ಅಂಕ ಗಳಿಸಿದ್ದರೆ ಮುಂಬಾ 26 ಅಂಕ ಗಳಿಸಿತ್ತು.
ಇನ್ನು ಯು ಮುಂಬಾ ತಂಡದ ಪರವಾಗಿ ಅಭಿಶೇಕ್ ಸಿಂಗ್ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಅಭಿಶೇಕ್ ಸಿಂಗ್ ಒಟ್ಟು 19 ಅಂಕಗಳನ್ನು ಮುಂಬಾ ಪರವಾಗಿ ಗಳಿಸಿ ತಂಡಕ್ಕೆ ಭಾರೀ ಮುನ್ನಡೆಯನ್ನು ನೀಡಿದರು. ಇನ್ನು ಟ್ಯಾಕಲ್ ಮೂಲಕ ಹರೇಂದ್ರ ಕುಮಾರ್ ನಾಲ್ಕು ಅಂಕಗಳನ್ನು ಮುಂಬೈ ಖಾತೆಗೆ ನೀಡಿದರೆ ಆಶಿಶ್ ಕುಮಾರ್ ಮೂರು ಅಂಕಗಳನ್ನು ಗಳಿಸಿದ್ದರು.
ಇನ್ನು ಬೆಂಗಳೂರು ಬುಲ್ಸ್ ತಂಡದ ಪರವಾಗಿ ಚಂದ್ರನ್ ರಂಜಿತ್ 13 ಅಂಕಗಳನ್ನು ಗಳಿಸಿದರೆ ಪವನ್ ಕುಮಾರ್ 12 ಅಂಕಗಳನ್ನು ಗಳಿಸಿದರು. ಬೆಂಗಳೂರು ಬುಲ್ಸ್ ಟ್ಯಾಕಲ್ ಮೂಲಕ ಕೇವಲ 3 ಅಂಕಗಳನ್ನು ಮಾತ್ರ ಗಳಿಸಿದ್ದು ಮಯೂರ್ ಕದಮ್ ಹಾಗೂ ಮೋರೆ ಜಿಬಿ ಈ ಮೂರು ಅಂಕಗಳನ್ನು ಬುಲ್ಸ್ ಖಾತೆಗೆ ಸೇರಿಸಿದ್ದಾರೆ.
ಇನ್ನು ಹಾಲಿ ಚಾಂಪಿಯನ್ ತಂಡವಾಗಿರುವ ಬೆಂಗಳೂರು ಬುಲ್ಸ್ ಈ ಬಾರಿಯ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಶುಭಾರಂಭವನ್ನು ಮಾಡಲಿದೆ ಎಂಬ ವಿಶ್ವಾಸ ತಂಡದ ಅಭಿಮಾನಿಗಳಲ್ಲಿತ್ತು. ಆದರೆ ಮೊದಲ ಪಂದ್ಯದಲ್ಲಿ ತಂಡ ನೀಡಿದ ಪ್ರದರ್ಶನ ನಿರಾಸೆ ಮೂಡಿಸಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ತಂಡ ಮತ್ತೆ ಲಯಕ್ಕೆ ಮರಳುವ ವಿಶ್ವಾಸ ಅಭಿಮಾನಿಗಳಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications