ಪ್ರೊ ಕಬಡ್ಡಿ: ಪರ್ದೀಪ್ ದಾಖಲೆ, ತಲೈವಾಸ್ ವಿರುದ್ಧ ಪೈರೇಟ್ಸ್‌ಗೆ ಜಯ

ಕೋಲ್ಕತ್ತ, ಸೆಪ್ಟೆಂಬರ್ 10: ಮುಂಚೂಣಿ ರೈಡರ್ ಪರ್ದೀಪ್ ನರ್ವಾಲ್ ಅವರ ಆಕರ್ಷಕ ಆಟದಿಂದಾಗಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್ 51-25ರ ಭಾರೀ ಅಂತರದ ಗೆಲುವು ದಾಖಲಿಸಿದೆ. ಪರ್ದೀಪ್ 1000 ರೈಡಿಂಗ್ ಪಾಯಿಂಟ್ ಮೈಲಿಗಲ್ಲು ಸಾಧಿಸಿದ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಕೋಲ್ಕತ್ತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಇಂಡೋರ್ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 9) ನಡೆದ ಪ್ರೊ ಕಬಡ್ಡಿ ಲೀಗ್ 83ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪರ್ದೀಪ್ ನರ್ವಾಲ್ 23 ರೈಡ್ ಮತ್ತು 3 ಬೋನಸ್ ಸೇರಿ ಒಟ್ಟು 26 ಅಂಕಗಳನ್ನು ಸೇರಿಸಿ ಪಂದ್ಯದ ಹೀರೋ ಆಗಿ ಮಿಂಚಿದರು.
ಇನ್ನು ಪಾಟ್ನಾದಿಂದ ಜೈದೀಪ್ 7, ಹಾದಿ ಒಶ್ತಾರಕ್ 4, ನೀರಜ್ ಕುಮಾರ್ 3 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ತಮಿಳ್ ತಲೈವಾಸ್‌ಗೆ ವಿ ಅಜಿತ್ ಕುಮಾರ್ 10, ರಾಹುಲ್ ಚೌಧರಿ 5, ವಿನೀತ್ ಶರ್ಮಾ ಮತ್ತು ಸಾಗರ್ ತಲಾ 3 ಅಂಕಗಳ ಕೊಡುಗೆ ಲಭಿಸಿತು.
ಈ ಪಂದ್ಯದ ಮುಕ್ತಾಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಕೆಸಿ (59 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (48), ಬೆಂಗಳೂರು ಬುಲ್ಸ್ (48), ಹರ್ಯಾಣ ಸ್ಟೀಲರ್ಸ್ (46), ಯೂಪಿ ಯೋಧ (42) ಅಗ್ರ 5 ಸ್ಥಾನಗಳಲ್ಲಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications