For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಟೂರ್ನಿ ಶೀಘ್ರದಲ್ಲೇ ಆರಂಭ

Pro Kabaddi season seven to begin on July 20

ಮುಂಬೈ, ಮೇ 28: ದೇಶದಲ್ಲಿ ಕಬಡ್ಡಿ ಕ್ರೀಡೆಯ ಮಿಂಚಿನ ಸಂಚಲನವನ್ನುಂಟು ಮಾಡಿದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮತ್ತೊಂದು ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ.

ಜಾಗತಿಕ ಮಟ್ಟದ ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್‌, ಫುಟ್ಬಾಲ್‌ ಹಾಗೂ ಬ್ಯಾಡ್ಮಿಂಟನ್‌ಗೆ ಟೆಲಿವಿಷನ್‌ ವೀಕ್ಷಕರ ದೃಷ್ಟಿಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ಕಬಡ್ಡಿ ಲೀಗ್‌ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಂದು ಆರಂಭವಾಗಲಿದೆ ಎಂದು ಟೂರ್ನಿ ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಭಾರತದಲ್ಲಿ ಟೆಲಿವಿಷನ್‌ ವೀಕ್ಷಕರ ಸಂಖ್ಯೆಯಲ್ಲಿ ಕ್ರಿಕೆಟ್‌ ನಂತರದ ಸ್ಥಾನದಲ್ಲಿ ಕಬಡ್ಡಿ ಗುರುತಿಸಿಕೊಂಡಿದ್ದು, ಕಬಡ್ಡಿ ಕ್ರೀಡೆಯ ಜನಪ್ರಿಯತೆ ಹೆಚ್ಚಾಗುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!

"ಟೆಲಿವಿಷನ್‌ ವೀಕ್ಷಕರಿಗೆ ಮತ್ತಷ್ಟು ಅನುಕೂಲ ಆಗುವ ದೃಷ್ಟಿಯಿಂದ ಪ್ರೋ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯನ್ನು ಆಯೋಜಿಸಲಾಗುತ್ತಿದ್ದು, ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭವಾಗಲಿವೆ,'' ಎಂದು ಟೂರ್ನಿ ಆಯೋಜಿಸುತ್ತಿರುವ ಮಶಾಲ್‌ ಸ್ಪೋರ್ಟ್ಸ್‌ ಸಂಸ್ಥೆಯ ಸಿಇಒ ಅನುಪಮ್‌ ಗೋಸ್ವಾಮಿ ಹೇಳಿದ್ದಾರೆ.

ಜುಲೈ 20ರಂದು ಆರಂಭವಾಗಲಿರುವ ಟೂರ್ನಿಯು ಅಕ್ಟೋಬರ್‌ ವರೆಗು ಸಾಗಲಿದ್ದು, ಕಬಡ್ಡಿ ಪ್ರಿಯರಿಗೆ ರೋಚಕ ಪಂದ್ಯಗಳ ರಸದೌತಣ ಬಡಿಸಲು ಸಜ್ಜಾಗುತ್ತಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಗುಜರಾತ್‌ ಫಾಚರ್ಚೂನ್‌ ಜಯಂಟ್ಸ್‌ ತಂಡವನ್ನು ಬಗ್ಗುಬಡಿದು ಚೊಚ್ಚಲ ಪ್ರಶಸ್ತಿ ಗೆದ್ದು ಮಿಂಚಿತ್ತು.

Story first published: Tuesday, May 28, 2019, 19:45 [IST]
Other articles published on May 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+