ಪ್ರೊ ಕಬಡ್ಡಿ ಲೀಗ್ 2018: ಆರನೇ ಆವೃತ್ತಿಯ ಆಕರ್ಷಣೀಯ ಆಟಗಾರರು

ಚೆನ್ನೈ, ಅಕ್ಟೋಬರ್ 6: ಐಪಿಎಲ್ ಪರಿಕಲ್ಪನೆಯಡಿಯಲ್ಲಿ ಬೆಳೆದ ಪ್ರೊ ಕಬಡ್ಡಿ ಲೀಗ್ ಪಂದ್ಯಾಟ ಜನಪ್ರಿಯಗೊಂಡಿದ್ದಾಗಿದೆ. ಐದು ಸೀಸನ್ ಮುಗಿದು ಆರನೇ ಸೀಸನ್ ಈ ಬಾರಿ ಅಕ್ಟೋಬರ್ 7ರ ಭಾನುವಾರದಿಂದ ಚೆನ್ನೈಯಲ್ಲಿ ಆರಂಭಗೊಳ್ಳಲಿದೆ.
ಅಕ್ಟೋಬರ್ 6ರಿಂದ ಆರಂಭವಾಗುವ ಈ ದೇಸಿ ಕ್ರೀಡಾಹಬ್ಬ ಸುಮಾರು 3 ತಿಂಗಳ ಕಾಲ ಕ್ರೀಡಾ ಪ್ರೇಮಿಗಳನ್ನು ರಂಜಿಸಲಿದೆ. ಜನವರಿ 6ರಂದು ಪಂದ್ಯಾಟ ಕೊನೆಗೊಳ್ಳಲಿದೆ. ಈ ಬಾರಿಯ ಟೂರ್ನಿಯಲ್ಲಿ ಎಲ್ಲಾ ತಂಡಗಳಲ್ಲೂ ಘಟಾನುಘಟಿ ಆಟಗಾರರಿದ್ದಾರೆ. ಅದರಲ್ಲೂ ರೋಚಕ ಕ್ಷಣಗಳಿಗೆ ಕಾರಣರಾಗಬಲ್ಲ ಆಟಗಾರರು ತಂಡಗಳಲ್ಲಿ ಹಂಚಿ ಹೋಗಿರುವುದು ಸುಳ್ಳಲ್ಲ.
ಗ್ರೂಪ್ ಬಿಯಿಂದ ತಮಿಳ್ ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ (ರಾತ್ರಿ 8ಕ್ಕೆ) ತಂಡಗಳು ಮುಖಾಮುಖಿಯಾದರೆ, ಗ್ರೂಪ್ ಎಯಿಂದ ಮೊದಲ ಪಂದ್ಯದಲ್ಲಿ ಪೂಣೇರಿ ಪಾಲ್ಟಾನ್ಸ್ ಮತ್ತು ಯು ಮುಂಬಾ (ರಾತ್ರಿ 9ಕ್ಕೆ) ತಂಡಗಳು ಎದುರುಬದುರಾಗುತ್ತಿವೆ.

ಪರ್ದೀಪ್ ನರ್ವಾಲ್
ಕಬಡ್ಡಿ ಅಂಕಣದಲ್ಲಿ ಸೆಳೆಯಬಲ್ಲ ಆಟಗಾರರಲ್ಲಿ ಪರ್ದೀಪ್ ನರ್ವಾಲ್ ಮೊದಲಿಗರು. ಸೀಸನ್ 4 ಮತ್ತು 5ರಲ್ಲೂ ಮೌಲ್ಯಯುತ ಆಟಗಾರರಾಗಿ ಪರ್ದೀಪ್ ಗುರುತಿಸಿಕೊಂಡಿದ್ದಾರೆ. ಪ್ರದೀಪ್, ಪಾಟ್ನಾ ಪೈರೇಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡದ ಪರ ಪರ್ದೀಪ್ ಗಮನಾರ್ಹ ಆಟವಾಡಿದ್ದರು.

ರೋಹಿತ್ ಕುಮಾರ್
ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್ ಕುಮಾರ್ ಕೂಡ ಕ್ರೀಡಾ ಪ್ರೇಮಿಗಳನ್ನು ತನ್ನತ್ತ ಸೆಳೆಯಬಲ್ಲ ಆಟಗಾರ. ಪ್ರತೀ ಪಂದ್ಯದಲ್ಲೂ ರೈಡಿಂಗ್ ಮೂಲಕ ಸೆಳೆಯುವ ರೋಹಿತ್ ಬೆಂಗಳೂರಿನ ಬಲವಾಗಿ ನಿಲ್ಲಲಿದ್ದಾರೆ.

ರಾಹುಲ್ ಚೌಧರಿ
ಭಾರತೀಯ ಕಬಡ್ಡಿ ತಂಡದ ಆಟಗಾರ ರಾಹುಲ್ ಚೌಧರಿ ಕೂಡ ಪಿಕೆಎಲ್ ಇತಿಹಾಸದಲ್ಲಿ ಯಶಸ್ವಿ ರೈಡರ್ ಆಗಿ ಗುರುತಿಸಿಕೊಂಡಿದ್ದಾರೆ. ರಾಹುಲ್ ಅವರು ತೆಲುಗು ಟೈಟಾನ್ಸ್ ನಲ್ಲಿನ ಪ್ರಮುಖ ಆಟಗಾರರು.

ಸುರೇಂದರ್ ನಾಡ
ಹಿಂಗಾಲು ಹಿಡಿದು ಜಗ್ಗುವುದರಲ್ಲಿ ಸುರೇಂದರ್ ನಾಡ ಅವರದ್ದು ಎತ್ತಿದ ಕೈ. ರೈಡರ್ ಕೊಂಚ ಕಾಲು ಚಾಚಿದರೂ ಸಾಕು ಅಂಕ ನಷ್ಟವಾದಂತೆಯೆ. ಸುರೇಂದರ್ ನಾಡ ಹರ್ಯಾಣ ಸ್ಟೀಲರ್ಸ್ ತಂಡದ ನಾಯಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications