ಪಿಕೆಎಲ್ 2018: ಯುಪಿ ಯೋಧಾಕ್ಕೆ ಕುಡ್ಲ ಮೂಲದ ರಿಷಾಂಕ್ ಕ್ಯಾಪ್ಟನ್

ಗ್ರೇಟರ್ ನೋಯ್ಡಾ, ಸೆಪ್ಟೆಂಬರ್ 28: ಜಿಎಂಆರ್ ಸಮೂಹ ಸಂಸ್ಥೆ ಒಡೆತನದ ಪ್ರಮುಖ ಕಬಡ್ಡಿ ಫ್ರಾಂಚೈಸಿ ಯುಪಿ ಯೋಧಾ ವಿವೋ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಗೆ ಸಜ್ಜಾಗುತ್ತಿದೆ. ಯುಪಿ ಯೋಧಾ ತಂಡಕ್ಕೆ ಮಂಗಳೂರು ಮೂಲದ ರಿಷಾಂಕ್ ದೇವಾಡಿಗ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.
ಭಾರತದ ಸ್ಟಾರ್ ರೈಡರ್ ರಿಷಾಂಕ್ ದೇವಾಡಿಗ ಅವರನ್ನು 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಯುಪಿ ಯೋಧಾ ತಂಡವನ್ನು ಮುನ್ನಡೆಸಲಿದ್ದಾರೆ. ಉತ್ತರ ಪ್ರದೇಶದ ಕ್ರೀಡಾ ಸಚಿವ ಚೇತನ್ ಚೌಹಣ್ ಅವರು ನಾಯಕನ ಹೆಸರನ್ನು ಸಮಾರಂಭವೊಂದರಲ್ಲಿ ಘೋಷಿಸರು. ಈ ಸಂದರ್ಭದಲ್ಲಿ ತಂಡದ ಇತರ ಆಟಗಾರರು ಉಪಸ್ಥಿತರಿದ್ದರು. ಮಾಜಿ ರಾಷ್ಟ್ರೀಯ ಆಟಗಾರ ಜಸ್ವೀರ್ ಸಿಂಗ್ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.
ಉಳಿದ ತಂಡಗಳು: ಡಿಫೆಂಡರ್ ಜೋಗಿಂದರ್ ನರ್ವಾಲ್ ಅವರು ದಬಂಗ್ ಡೆಲ್ಲಿ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಹಿರಿಯ ಆಟಗಾರ ಗಿರೀಶ್ ಎರ್ನಾಕ್ ಅವರು ಪುಣೇರಿ ಪಲ್ಟನ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಅಕ್ಟೋಬರ್ 7ರಂದು ಚೆನ್ನೈನಲ್ಲಿ 6ನೇ ಪಿಕೆಎಲ್ಗೆ ಚಾಲನೆ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications