ಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 12: ಪ್ರೊ ಕಬಡ್ಡಿ ಲೀಗ್ (ಕೆಪಿಎಲ್) 2019ರ ಸೀಸನ್ ಮುಕ್ತಾಯ ಹಂತದಲ್ಲಿದ್ದು, ಕೇವಲ 5 ಪಂದ್ಯಗಳು ಬಾಕಿ ಉಳಿದಿವೆ. ಅಂದರೆ ಇನ್ನುಳಿದ ಎಲ್ಲಾ ಪಂದ್ಯಗಳ ಫಲಿತಾಂಶಗಳು ತಂಡಗಳ ಪ್ರಶಸ್ತಿ ಸುತ್ತಿನೆಡೆಗಿನ ಓಟಕ್ಕೆ ದಾರಿಯಾಗಲಿದೆ. ಅಕ್ಟೋಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.
ಸದ್ಯದ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (85), ಬೆಂಗಾಲ್ ವಾರಿಯರ್ಸ್ (83), ಯು ಮುಂಬಾ (72), ಹರ್ಯಾಣ ಸ್ಟೀಲರ್ಸ್ (72), ಯುಪಿ ಯೋಧ (69), ಬೆಂಗಳೂರು ಬುಲ್ಸ್ (64) ಮೊದಲ 6 ಸ್ಥಾನಗಳಲ್ಲಿವೆ. ಇವೆಲ್ಲವೂ ಪ್ಲೇ ಆಫ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿರುವ ತಂಡಗಳು. ಪ್ಲೇ ಆಫ್ ಎಲ್ಲಾ ಪಂದ್ಯಗಳು ಅಹ್ಮದಾಬಾದ್‌ನಲ್ಲಿ ನಡೆಯಲಿವೆ.
ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಚಾರ್ಟ್, ಕೆಪಿಎಲ್ ಸಂಪೂರ್ಣ ಮಾಹಿತಿ ಇಲ್ಲಿದೆ
ಟೂರ್ನಿಯ ಎಲಿಮಿನೇಟರ್ ಪಂದ್ಯಗಳು ಅಕ್ಟೋಬರ್ 14ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಯುಪಿ ಯೋಧ ಮತ್ತು ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಕಾದಾಡಲಿವೆ. ದ್ವಿತೀಯ ಎಲಿಮಿನೇಟರ್ ಪಂದ್ಯದಲ್ಲಿ ಯು ಮುಂಬಾ ಮತ್ತು ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ.
ಎಲಿಮಿನೇಟರ್ ನಲ್ಲಿ ಗೆಲ್ಲುವ ತಂಡಗಳು ಅಕ್ಟೋಬರ್ 16ರಂದು ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ವಿರುದ್ಧ ಸೆಣಸಾಡಲಿವೆ. ಎರಡು ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡಗಳು ಅಕ್ಟೋಬರ್ 19ರಂದು ಫೈನಲ್‌ನಲ್ಲಿ ಸ್ಪರ್ಧಿಸಲಿದೆ. ಟೂರ್ನಿ ಆರಂಭದಲ್ಲಿ ಗೆಲುವಿನ ಹಾದಿಯಲ್ಲಿದ್ದ ಬೆಂಗಳೂರು ಬುಲ್ಸ್ ಈಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications