ಏಷ್ಯನ್ ಗೇಮ್ಸ್ 1990: ಚೀನಾದ ಬೀಜಿಂಗ್‌ನಲ್ಲಿ ನಡೆಯಿತು 11ನೇ ಏಷ್ಯಾಡ್: ಪ್ರಮುಖ ಮಾಹಿತಿ
1990ರಲ್ಲಿ 11ನೇ ಏಷ್ಯನ್ ಗೇಮ್ಸ್ ಟೂರ್ನಿ ಚೀನಾದ ಬೀಜಿಂಗ್ ನಗರದಲ್ಲಿ ಆಯೋಜನೆಯಾಯಿತು. ಇದು ಚೀನಾ ಆಯೋಜನೆ ಮಾಡಿದ ಮೊದಲ ಏಷ್ಯನ್ ಗೇಮ್ಸ್ ಕ್ರೀಡಾಕೂಟ. 1990ರ ಸಪ್ಟೆಂಬರ್ 22ರಂದು ಆರಂಭವಾಗಿ ಅಕ್ಟೋಬರ್ 7ರಂದು ಸಮಾರೋಪಗೊಂಡಿತು. ಈ ಮೂಲಕ ಕ್ರೀಡಾಕ್ಷೇತ್ರದಲ್ಲಿ ಕೆಲ ಮಹತ್ವದ ಕ್ರೀಡಾಕೂಟಗಳನ್ನು ಆಯೋಜಿಸಲು ಪೂರ್ವಸಿದ್ಧತೆಯ ರೀತಿಯಲ್ಲಿ ಬಳಸಿಕೊಂಡಿತು.
ಈ ಆವೃತ್ತಿಯಲ್ಲಿ ಬರೊಬ್ಬರಿ 36 ರಾಷ್ಟ್ರಗಳ 6122 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು 27 ಕ್ರೀಡೆಗಳಿಗೆ ಸ್ಪರ್ಧೆಗಳು ನಡೆದವು. ಈ ಆವೃತ್ತಿಯಲ್ಲಿ ಕ್ಯಾನೋಯಿಂಗ್, ಕಬಡ್ಡಿ, ಸೆಪಕ್ ಟಕ್ರು, ಸಾಫ್ಟ್ ಬಾಲ್ ಹಾಗೂ ವುಶು ಕ್ರೀಡೆಗಳು ಹೊಸದಾಗಿ ಸೇರ್ಪಡೆಯಾಗಿತ್ತು.

ಇನ್ನು ಈ ಏಷ್ಯನ್ ಗೇಮ್ಸ್‌ನಲ್ಲಿ ಏಳು ವಿಶ್ವ ದಾಖಲೆಗಳು ನಿರ್ಮಾಣವಾಗಿದ್ದವು. ಇದರಲ್ಲಿ ಆರು ಬಿಲ್ಲುಗಾರಿಕೆಯಲ್ಲಿ ಮತ್ತು ಒಂದು ಸೈಕ್ಲಿಂಗ್‌ನಲ್ಲಿ ದಾಖಲೆ ಸೃಷ್ಟಿಯಾಗಿತ್ತು. ಅಲ್ಲದೆ 89 ಏಷ್ಯನ್ ದಾಖಲೆಗಳು ಕೂಡ ಮುರಿಯಲಾಯಿತು. ಜೊತೆಗೆ ಒಂದು ವಿಶ್ವ ದಾಖಲೆ ಮತ್ತು 11 ಏಷ್ಯನ್ ದಾಖಲೆಗಳನ್ನು ಈ ಕ್ರೀಡಾಕೂಟದಲ್ಲಿ ಸರಿಗಟ್ಟಲಾಯಿತು. 1990ರ ಬೀಜಿಂಗ್ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಚೀನಾದ ಅಧ್ಯಕ್ಷ ಯಾಂಗ್ ಶಾಂಗ್‌ಕುನ್ ಅವರು ವರ್ಕರ್ಸ್ ಸ್ಟೇಡಿಯಂನಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.
ಈ ಕ್ರೀಡಾಕೂಡದಲ್ಲಿ ಆತಿಥೇಯ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. 183 ಚಿನ್ನದ ಪದಕ ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ಸಾರ್ವಭೌಮತೆ ಸಾಧಿಸಿತ್ತು. 107 ಬೆಳ್ಳಿ ಮತ್ತು 51 ಕಂಚಿನೊಂದಿಗೆ ಬರೊಬ್ಬರಿ 341 ಪದಕಗಳು ಚೀನಾ ಪಾಲಾಗಿತ್ತು. ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು 54 ಚಿನ್ನದ ಪದಕ 54 ಬೆಳ್ಳಿ ಪದಕ ಹಾಗೂ 73 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಜಪಾನ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿತ್ತು.
ಇನ್ನು ಭಾರತ ಈ ಕ್ರೀಡಾಕೂಟದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಕೇವಲ ಒಂದು ಚಿನ್ನದ ಪದಕ ಗೆದ್ದ ಭಾರತ 8 ಬೆಳ್ಳಿ ಪದಕ ಹಾಗೂ 14 ಕಂಚಿನ ಪದಕ ಗೆದ್ದು ಒಟ್ಟು 23 ಪದಕಗಳನ್ನು ಗಳಿಸಿತ್ತು. ಅಲ್ಲದೆ ಪದಕ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications