ಏಷ್ಯನ್ ಗೇಮ್ಸ್ 1998: 13ನೇ ಏಷ್ಯಾಡ್‌ಗೆ ಬ್ಯಾಂಕಾಕ್ ಆತಿಥ್ಯ: ಇತಿಹಾಸ ಹಾಗೂ ಪ್ರಮುಖ ಮಾಹಿತಿ
1998ರಲ್ಲಿ 13ನೇ ಏಷ್ಯನ್ ಗೇಮ್ಸ್ ಟೂರ್ನಿ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಆಯೋಜನೆಯಾಯಿತು. ಡಿಸೆಂಬರ್ 6ರಂದು ಉದ್ಘಾಟನೆಯಾದ ಈ ಕ್ರೀಡಾಕೂಟ 20ರಂದು ಸಮಾರೋಪ ಕಂಡಿತು. ಇನ್ನು ಈ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿ ನವೆಂಬರ್ 30, 1998ರಂದು ಆರಂಭವಾಗಿತ್ತು, ಅಂದರೆ ಟೂರ್ನಿಯ ಉದ್ಘಾಟನೆಯ ಒಂದು ವಾರ ಮುನ್ನ.
ಬ್ಯಾಂಕಾಕ್‌ನಲ್ಲಿ ಆಯೋಜನೆಯಾದ ನಾಲ್ಕನೇ ಏಷ್ಯನ್ ಗೇಮ್ಸ್ ಇದಾಗಿದ್ದು ಇದಕ್ಕೂ ಮುನ್ನ 1966, 1970 ಹಾಗೂ 1978ರಲ್ಲಿ ಕೂಡ ಬ್ಯಾಂಕಾಕ್ ಟೂರ್ನಿಯ ಆತಿಥ್ಯಯವನ್ನು ವಹಿಸಿಕೊಂಡಿತ್ತು. ರಾಜಮಂಗಲ ಸ್ಟೇಡಿಯಂನಲ್ಲಿ ಥಾಯ್ಲೆಂಡ್‌ನ ರಾಜ ಭೂಮಿಬೋಲ್ ಅದುಲ್ಯದೇಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೌಲ್ಡ್ರನ್ ಅನ್ನು ಥಾಯ್ ಮುಯೆ ಥಾಯ್ ಕಿಕ್ ಬಾಕ್ಸರ್ ಸೋಮ್ಲಕ್ ಕಾಮ್ಸಿಂಗ್ ಬೆಳಗಿಸಿದರು. ಥಾಯ್ ಮುಯೆ ಎರಡು ವರ್ಷಗಳ ಹಿಂದೆ 1996ರಲ್ಲಿ ಅಟ್ಲಾಂಟಾದದಲ್ಲಿ ನಡೆದ ಒಲಿಂಪಿಕ್ಸ್‌ನ ಫೆದರ್‌ವೇಟ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಇನ್ನು ಈ ಆವೃತ್ತಿಯಲ್ಲಿ 41 ರಾಷ್ಟ್ರಗಳ 6,554 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಒಟ್ಟು ಕ್ಯಾನೋಯಿಂಗ್, ಕಬಡಿ, ಸ್ಕ್ವಾಶ್ ಸೇರಿದಂರೆ 36 ಕ್ರೀಡೆಗಳಿಗೆ ಸ್ಪರ್ಧೆಗಳು ನಡೆದವು.
ಈ ಕ್ರೀಡಾಕೂಡದಲ್ಲಿ ಕೂಡ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. 129 ಚಿನ್ನದ ಪದಕ ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. 78 ಬೆಳ್ಳಿ ಮತ್ತು 67 ಕಂಚಿನೊಂದಿಗೆ ಬರೊಬ್ಬರಿ 274 ಪದಕಗಳು ಚೀನಾ ಪಾಲಾಗಿತ್ತು. ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು 65 ಚಿನ್ನದ ಪದಕ 46 ಬೆಳ್ಳಿ ಪದಕ ಹಾಗೂ 53 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಜಪಾನ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನು ಭಾರತ ಈ ಕ್ರೀಡಾಕೂಟದಲ್ಲಿ ಒಟ್ಟು 7 ಚಿನ್ನ ಪದಕಗಳನ್ನು ಪಡೆದುಕೊಂಡಿದ್ದು 11 ಬೆಳ್ಳಿ ಪದಕ ಹಾಗೂ 17 ಕಂಚಿನ ಪದಕ ಗೆದ್ದು ಒಟ್ಟು 35 ಪದಕಗಳನ್ನು ಗಳಿಸಿತ್ತು. ಈ ಆವೃತ್ತಿಯ ಏಷ್ಯಾಡ್‌ನಲ್ಲಿ ಭಾರತ 9ನೇ ಸ್ಥಾನವನ್ನು ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications