148 ಅಥ್ಲೀಟ್‌ಗಳು, ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಕೋವಿಡ್ ವ್ಯಾಕ್ಸಿನ್

ನವದೆಹಲಿ: ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿರುವ ಆಟಗಾರರನ್ನೂ ಸೇರಿಸಿ ಭಾರತೀಯ ಬಹುತೇಕ ಕ್ರೀಡಾಪಟುಗಳು ಕೋವಿಡ್-19 ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಈ ಮಾಹಿತಿ ನೀಡಿದೆ.
ವ್ಯಾಕ್ಸಿನ್ ತೆಗೆದುಕೊಂಡ 148 ಕ್ರೀಡಾಪಟುಗಳಲ್ಲಿ 17 ಮಂದಿ ತಮ್ಮ ದ್ವಿತೀಯ ಡೋಸ್ ತೆಗೆದುಕೊಂಡಿದ್ದಾರೆ. ಇನ್ನುಳಿದ 131 ಅಥ್ಲೀಟ್‌ಗಳು ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮಾಹಿತಿ ನೀಡಿದ್ದಾರೆ.
ಜುಲೈ 23ರಿಂದ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಪ್ರಮುಖ ಅಥ್ಲೀಟ್‌ಗಳೂ ಈ 148 ಅಥ್ಲೀಟ್‌ಗಳಲ್ಲಿ ಸೇರಿದ್ದಾರೆ. ಇದರ ಜೊತೆಗೆ ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 13 ಅಥ್ಲೀಟ್‌ಗಳೂ ಇದ್ದಾರೆ.
ಈ ಲೆಕ್ಕಾಚಾರದಲ್ಲಿ ಮೇ 20ರ ವೇಳೆಗೆ ವ್ಯಾಕ್ಸಿನ್ ಹಾಕಿಸಿಕೊಂಡ ಅಥ್ಲೀಟ್‌ಗಳ ಸಂಖ್ಯೆ 163 ಆಗುತ್ತದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳೂ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications