2002ರಲ್ಲಿ 14ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಟೂರ್ನಿ ದಕ್ಷಿಣ ಕೊರಿಯಾದ ಬೂಸಾನ್‌ನಲ್ಲಿ ಆಯೋಜನೆಯಾಯಿತು. ಸೆಪ್ಟೆಂಬರ್ 29ರಂದು ಉದ್ಘಾಟನೆಯಾದ ಈ ಕ್ರೀಡಾಕೂಟ ಅಕ್ಟೋಬರ್ 14ರಂದು ಸಮಾರೋಪ ಕಂಡಿತು. ಈ ಆವೃತ್ತಿಯಲ್ಲಿ ಕುಡ ಟೂರ್ನಿಯ ಉದ್ಭಾಟನೆಗೂ ಎರಡು ದಿನಗಳ ಮುನ್ನ ಫುಟ್ಬಾಲ್ ಪಂದ್ಯಾವಳಿ ಆರಂಭವಾಗಿತ್ತು.
ಬೂಸಾನ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿದ ದಕ್ಷಿಣ ಕೊರಿಯಾದ ಎರಡನೇ ನಗರ ಎನಿಸಿಕೊಂಡಿತು. ಇದಕ್ಕೂ ಮುನ್ನ 1986ರಲ್ಲಿ ಸಿಯೋಲ್ ನಗರದಲ್ಲಿ ಕೂಡ ಏಷ್ಯನ್ ಗೇಮ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಮೂಲಕ ಕ್ಷಿಣ ಕೊರಿಯಾ ಎರಡನೇ ಭಾರಿಗೆ ಕ್ರೀಡಾಕೂಟವ ನ್ನು ಆಯೋಜನೆ ಮಾಡಿತ್ತು.

ಇನ್ನು ಈ ಆವೃತ್ತಿಯಲ್ಲಿ 44 ರಾಷ್ಟ್ರಗಳ 6,572 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. 38 ಕ್ರೀಡೆಗಳಿಗೆ ಸ್ಪರ್ಧೆಗಳು ನಡೆದಿದ್ದವು. ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾದ ಎಲ್ಲಾ 44 ರಾಷ್ಟ್ರಗಳು ಕೂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗಿಯಾಗಿದ್ದು ಇದೇ ಮೊದಲಾಗಿತ್ತು.
ಈ ಕ್ರೀಡಾಕೂಡದಲ್ಲಿ ಕೂಡ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಭರ್ತಿ 150 ಚಿನ್ನದ ಪದಕ ಪಡೆಯುವ ಮೂಲಕ ಕ್ರೀಡಾಕೂಟದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. 84 ಬೆಳ್ಳಿ ಮತ್ತು 74 ಕಂಚಿನೊಂದಿಗೆ ಬರೊಬ್ಬರಿ 308 ಪದಕಗಳು ಚೀನಾ ಪಾಲಾಗಿತ್ತು. ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು 96 ಚಿನ್ನದ ಪದಕ 80 ಬೆಳ್ಳಿ ಪದಕ ಹಾಗೂ 84 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಜಪಾನ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನು ಭಾರತ ಈ ಕ್ರೀಡಾಕೂಟದಲ್ಲಿ ಒಟ್ಟು 11 ಚಿನ್ನ ಪದಕಗಳನ್ನು ಪಡೆದುಕೊಂಡಿದ್ದು 12 ಬೆಳ್ಳಿ ಪದಕ ಹಾಗೂ 13 ಕಂಚಿನ ಪದಕ ಗೆದ್ದು ಒಟ್ಟು 36 ಪದಕಗಳನ್ನು ಗಳಿಸಿತ್ತು. ಈ ಆವೃತ್ತಿಯ ಏಷ್ಯಾಡ್‌ನಲ್ಲಿ ಭಾರತ 7ನೇ ಸ್ಥಾನವನ್ನು ಪಡೆದುಕೊಂಡಿತ್ತು.