For Quick Alerts
ALLOW NOTIFICATIONS  
For Daily Alerts

2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಸುನಿಲ್ ದೇವ್ ನಿಧನ

ಭಾರತೀಯ ಕ್ರಿಕೆಟ್‌ಗೆ ದುಃಖಕರ ಸುದ್ದಿಯೊಂದು ಅಪ್ಪಳಿಸಿದ್ದು, 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಆಗಿದ್ದ ಸುನಿಲ್ ದೇವ್ ಅವರು ಗುರುವಾರ, ಆಗಸ್ಟ್ 3ರಂದು ನಿಧನರಾಗಿದ್ದಾರೆ.

ಸುನಿಲ್ ದೇವ್ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಮಾಜಿ ಕಾರ್ಯದರ್ಶಿಯಾಗಿದ್ದರು ಮತ್ತು ದೀರ್ಘಕಾಲದ ಅನಾರೋಗ್ಯದ ನಂತರ, 75 ವರ್ಷ ವಯಸ್ಸಾಗಿದ್ದ ಅವರು ನಿಧನರಾದರು.

ಸುನೀಲ್ ದೇವ್ ಅವರು ಮಕ್ಕಳು ಮತ್ತು ಹೆಂಡತಿಯನ್ನು ಅಗಲಿದ್ದಾರೆ. ಅವರು ಹಲವು ವರ್ಷಗಳ ಕಾಲ ಡಿಡಿಸಿಎನೊಂದಿಗೆ ಕೆಲಸ ಮಾಡಿದ್ದಾರೆ. ಸುನೀಲ್ ದೇವ್ ಆಡಳಿತ ಮಂಡಳಿಯೊಂದಿಗೆ ಕ್ರೀಡಾ ನಿರ್ವಾಹಕರಾಗಿದ್ದಾಗ ಮಂಡಳಿಯ ಉಪ ಸಮಿತಿಗಳ ಭಾಗವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಾಗಿಯೂ ಸೇವೆ ಸಲ್ಲಿಸಿದರು.

2007-t20-world-cup-winning

ಆದಾಗ್ಯೂ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊಟ್ಟಮೊದಲ ಟಿ20 ವಿಶ್ವಕಪ್‌ ಅವರ ವೃತ್ತಿಜೀವನದ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಸುನಿಲ್ ದೇವ್ ಅವರು 2007ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಡಳಿತ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದರು.

ಸುನಿಲ್ ದೇವ್ ಅವರು 1996ರಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಆಡಳಿತ ವ್ಯವಸ್ಥಾಪಕರಾಗಿದ್ದರು.

ಡಿಡಿಸಿಎನೊಂದಿಗಿನ ಅಧಿಕಾರಾವಧಿಯಲ್ಲಿ, ಸುನಿಲ್ ದೇವ್ ಅವರು ದೊಡ್ಡ ಅಧಿಕಾರದ ಸ್ಥಾನಗಳಿಗೆ ಏರಿದ್ದರು. ಹೇಗೆಂದರೆ, ಅವರ ಅನುಮೋದನೆಯಿಲ್ಲದೆ ರಣಜಿ ಟ್ರೋಫಿಯಿಂದ ತಂಡವನ್ನು ಬಿಡುಗಡೆ ಮಾಡುವ ಹಂತಕ್ಕೆ ಅಧಿಕಾರವಿತ್ತು.

ಬಿಸಿಸಿಐಗೆ ಪ್ರಮುಖ ವ್ಯಕ್ತಿಯಾಗಿ ಸ್ಥಾಪಿಸಿಕೊಂಡ ಸುನಿಲ್ ದೇವ್ ಅವರ ನಿಧನಕ್ಕೆ ಮಾಜಿ ಕ್ರಿಕೆಟಿಗರು, ಬಿಸಿಸಿಐ ಸಿಬ್ಬಂದಿ ಮತ್ತು ಅನೇಕ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Story first published: Thursday, August 3, 2023, 14:42 [IST]
Other articles published on Aug 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+