For Quick Alerts
ALLOW NOTIFICATIONS  
For Daily Alerts

ಎರಡನೇ ಏಷ್ಯನ್ ಗೇಮ್ಸ್‌ಗೆ ಆತಿಥ್ಯವಹಿಸಿದ ಮನಿಲಾ: ಕುತೂಹಲಕಾರಿ ಮಾಹಿತಿ

ಎರಡನೇ ಏಷ್ಯನ್ ಗೇಮ್ಸ್ ಆಯೋಜನೆಯಾಗಿದ್ದು 1954ರಲ್ಲಿ. ಫಿಲಿಫೈನ್ಸ್‌ನ ಮನಿಲಾ ಈ ಕ್ರೀಡಾಕೂಟದ ಆತಿಥ್ಯದ ಜವಾಬ್ಧಾರಿ ವಹಿಸಿಕೊಂಡಿತ್ತು. 1954ರ ಮೇ 1ರಂದು ಆರಂಭವಾದ ಈ ಕ್ರೀಡಾಕೂಟ 9ರಂದು ತೆರೆಕಂಡಿತ್ತು. ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) 19 ದೇಶಗಳ ಒಟ್ಟು 970 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಎಂಟು ಕ್ರೀಡೆಗಳ 76 ಸ್ಪರ್ಧೆಗಳಲ್ಲಿ ಈ ಕ್ರೀಡಾಪಟುಗಳು ಪದಕಕ್ಕಾಗಿ ಸೆಣೆಸಾಟ ನಡೆಸಿದ್ದರು.

ಎರಡನೇ ಏಷ್ಯನ್ ಗೇಮ್ಸನ್ನು ಔಪಚಾರಿಕವಾಗಿ ಫಿಲಿಫೈನ್ಸ್‌ನ ಅಧ್ಯಕ್ಷ ರಮೋನ್ ಮಾಗ್ಸಾಸಾಯ್ ಚಾಲನೆ ನೀಡಿದ್ದರು. ಸುಮಾರು 20,000 ಪ್ರೇಕ್ಷಕರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಉದ್ಘಾಟನಾ ಸಮಾರಂಭ ನಡೆದಿತ್ತು. ಆದರೆ ಈ ಬಾರಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒಲಿಂಪಿಕ್ಸ್ ಕ್ರೀಡಾಕೂಟದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮನವಿ ಮಾಡಿದ್ದ ಕಾರಣ ಕ್ರೀಡಾಜ್ಯೋತಿಯನ್ನು ಈ ಕ್ರೀಡಾಕೂಟಕ್ಕೆ ಬಳಸಿರಲಿಲ್ಲ. ಆದರೆ 1958ರ ಕ್ರೀಡಾಕೂಟದಲ್ಲಿ ಮತ್ತೆ ಕ್ರೀಡಾಜ್ಯೋತಿಯನ್ನು ಬಳಸಿಕೊಳ್ಳಲಾಯಿತು.

2nd Asian Games; Manila, Philippines 1954 History and other details
Photo Credit: facebook

ಇನ್ನು ಈ ಕ್ರೀಡಾಕೂಟದಲ್ಲಿಯೂ ಜಪಾನ್ ಅತಿ ಹೆಚ್ಚು ಪದಕಗಳನ್ನು ಗೆದ್ದು ಪದಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯಿತು. ಜಪಾನ್ ಈ ಬಾರಿ ಒಟ್ಟು 38 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 36 ಬೆಳ್ಳಿ ಪದಕ ಹಾಗೂ 24 ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಮೂಲಕ ಒಟ್ಟು 98 ಪದಕಗಳು ಜಪಾನ್ ಪಾಲಾಗಿತ್ತು. ಆತಿಥೆಯ ಫಿಲಿಫೈನ್ಸ್ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರೆ ದಕ್ಷಿಣ ಕೊರಿಯಾ ಮೂರನೇ ಸ್ಥಾನ ಪಡೆಯಿತು. ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇನ್ನು ಭಾರತ ಈ ಬಾರಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಮೊದಲ ಕ್ರೀಡಾಕೂಟದಲ್ಲಿ 15 ಚಿನ್ನದ ಪದಕ ಪಡೆದಿದ್ದ ಭಾರತ ಈ ಬಾರಿ 5 ಚಿನ್ನದ ಪದಕ ಮಾತ್ರವೇ ಗೆದ್ದುಕೊಂಡಿತ್ತು. ನಾಲ್ಕು ಬೆಳ್ಳಿ ಹಾಗೂ 8 ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಈ ಮೂಲಕ 17 ಪದಕಗಳು ಭಾರತದ ಪಾಲಾಗಿದ್ದವು.

Story first published: Thursday, August 3, 2023, 18:27 [IST]
Other articles published on Aug 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+