ಜಕಾರ್ತಾ ಏಷ್ಯನ್ ಗೇಮ್ಸ್ 1962: 4ನೇ ಏಷ್ಯನ್ ಗೇಮ್ಸ್‌ನ ಪ್ರಮುಖ ಮಾಹಿತಿ
ಮೊದಲ ಮೂರು ಏಷ್ಯನ್ ಗೇಮ್ಸ್‌ನ ಅದ್ಭುತ ಯಶಸ್ಸಿನ ಬಳಿಕ ನಾಲ್ಕನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಆಯೋಜನೆಗೊಂಡಿದ್ದು ಇಂಡೋನೇಷ್ಯಾದ ಜಕಾರ್ತಾದಲ್ಲಿ. 1962ರಲ್ಲಿ ಈ ಕ್ರೀಡಾಕೂಟ ಅದ್ಧೂರಿಯಾಗಿ ಆಯೋಜನೆಯಾಯಿತು. 1962ರ ಆಗಸ್ಟ್ 24ರಂದು ಆರಂಭವಾದ ಈ ಕ್ರೀಡಾಕೂಟ ಸೆಪ್ಟೆಂಬರ್ 4ರಂದು ಸಮಾರೋಪಗೊಂಡಿತು.
ಈ ಬಾರಿ ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) 17 ರಾಷ್ಟ್ರಗಳ ಒಟ್ಟು 1460 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಬ್ಯಾಡ್ಮಿಂಟನ್‌ಅನ್ನು ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಿಸುವ ಅವಕಾಶ ನೀಡಲಾಯಿತು.

ಈ ಕ್ರೀಡಾಕೂಟಕ್ಕೆ ಇಸ್ರೇಲ್ ಮತ್ತು ರಿಪಬ್ಲಿಕ್ ಆಫ್ ಚೀನಾ(ತೈವಾನ್)ವನ್ನು ಗೇಮ್ಸ್‌ನಿಂದ ಹೊರಗಿಡಲಾಯಿತು. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಮಧ್ಯಪ್ರಾಚ್ಯದಲ್ಲಿ ಸಹ-ಮುಸ್ಲಿಂ ಬಹುಸಂಖ್ಯಾತ ದೇಶಗಳೊಂದಿಗೆ ಒಗ್ಗಟ್ಟಿನಿಂದ ಇಂಡೋನೇಷ್ಯಾದ ವಲಸೆ ಅಧಿಕಾರಿಗಳು ಇಸ್ರೇಲಿ ಮತ್ತು ತೈವಾನ್ ಕ್ರೀಡಾಪಟುಗಳಿಗೆ ಪ್ರವೇಶ ವೀಸಾಗಳನ್ನು ನೀಡಲು ನಿರಾಕರಿಸಿದರು.
ಇದು ಏಷ್ಯನ್ ಗೇಮ್ಸ್ ಫೆಡರೇಶನ್‌ನ ನಿಯಮಗಳ ಉಲ್ಲಂಘನೆಯಾಗಿತ್ತು ಹೀಗಾಗಿ ಇಂಡೋನೇಷ್ಯಾವನ್ನು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಅಮಾನತುಗೊಳಿಸಲಾಯಿತು ಮತ್ತು ನಂತರ 1964 ರ ಬೇಸಿಗೆ ಒಲಿಂಪಿಕ್ಸ್‌ನಿಂದ ಹೊರಗಿಡಲಾಯಿತು.
ಇನ್ನು ಈ ಬಾರಿಯೂ ಜಪಾನ್ ಈ ಹಿಂದಿನ ಆವೃತ್ತಿಗಳಂತೆಯೇ ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಜಪಾನ್ 73 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರೆ 56 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ ಒಟ್ಟು 152 ಪದಕಗಳು ಜಪಾನ್ ದೇಶದ ಪಾಲಾಯಿತು. ಇನ್ನು ಎರಡನೇ ಸ್ಥಾನದಲ್ಲಿ ಆತಿಥೆಯ ಇಂಡೋನೇಷ್ಯಾ ಇದ್ದು 11 ಚಿನ್ನ 12 ಬೆಳ್ಳಿ ಹಾಗೂ 28 ಕಂಚಿನ ಪದಕ ಗೆದ್ದುಕೊಂಡಿತ್ತು.
ಇನ್ನು ಭಾರತ ಈ ಬಾರಿ 10 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಪದಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು. 13 ಬೆಳ್ಳಿ ಪದಕ ಹಾಗೂ 28 ಕಂಚಿನ ಪದಕಗಳು ಗೆದ್ದು ಒಟ್ಟು 33 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಮುಡಿಗೇರಿಸಿಕೊಂಡಿದ್ದರು. ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ಐದನೇ ಸ್ಥಾನದಲ್ಲಿ ಫಿಲಿಫೈನ್ಸ್ ದೇಶ ಇತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications