Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಂಕಾಕ್ ಏಷ್ಯನ್ ಗೇಮ್ಸ್ 1966: 5ನೇ ಏಷ್ಯನ್ ಗೇಮ್ಸ್‌ನ ಪ್ರಮುಖ ಮಾಹಿತಿ

ಏಷ್ಯನ್ ಗೇಮ್ಸ್‌ನ ನಾಲ್ಕನೇ ಆವೃತ್ತಿಯ ಆಯೋಜನೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದು ಥಾಯ್ಲೆಂಡ್. ಇಲ್ಲಿನ ಬ್ಯಾಂಕಾಕ್ ನಗರದಲ್ಲಿ ಐದನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅದ್ದೂರಿಯಾಗಿ ನೆರವೇರಿತು. 1966ರ ಡಿಸೆಂಬರ್ 9ರಂದು ಆರಂಭವಾದ ಈ ಕ್ರೀಡಾಕೂಟ 20ರಂದು ಸಮಾರೋಪಗೊಂಡಿತು.

ಈ ಬಾರಿ ಏಷ್ಯನ್ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಎನ್‌ಒಸಿ) 18 ದೇಶಗಳ ಒಟ್ಟು 2500ರಷ್ಟಯ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು.. ಒಟ್ಟು ಹದಿನಾರು ವಿಭಿನ್ನ ಕ್ರೀಡೆಗಳ 142 ಸ್ಪರ್ಧೆಗಳಲ್ಲಿ ಈ ಕ್ರೀಡಾಪಟುಗಳು ಪದಕಕ್ಕಾಗಿ ಸೆಣೆಸಾಟ ನಡೆಸಿದ್ದರು. ಈ ಹಿಂದಿನ ಏಷ್ಯಾಡ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ತೈವಾನ್ ಹಾಗೂ ಇಸ್ರೇಲ್ ದೇಶಗಳು ಮತ್ತೆ ಈ ಕ್ರೀಡಾಕೂಟದಲ್ಲಿ ಅವಕಾಶ ಪಡೆದುಕೊಂಡಿದ್ದವು. ಈ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ವಾಲಿಬಾಲ್‌ಗೆ ಅವಕಾಶ ನೀಡಲಾಗಿತ್ತು.

5th Asian Games; Bankok, Thailand 1966, History and other details

ಬ್ಯಾಂಕಾಕ್‌ನ ರಾಷ್ಟ್ರೀಯ ಕ್ರೀಡಾಂಗಣ ಈ ಕ್ರೀಡಾಕೂಟದ ಮುಖ್ಯ ತಾಣವಾಗಿತ್ತು. ಥಾಯ್ಲೆಂಡ್‌ನ ಅಂದಿನ ರಾಜ ಭೂಮಿಬೋಲ್ ಅದುಲ್ಯದೇಜ್ ಈ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಈ ಕ್ರೀಡಾಕೂಟ ಅದ್ಭುತ ಯಶಸ್ಸು ಸಾಧಿಸಿದ್ದು ಜಗತ್ತಿನ ಕ್ರೀಡಾಪ್ರೇಮಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇನ್ನು ಈ ಬಾರಿಯ ಕ್ರೀಡಾಕೂಟದಲ್ಲಿಯೂ ಈ ಹಿಂದಿನ ಕ್ರೀಡಾಕೂಟಗಳಂತೆ ಜಪಾನ್ ಪಾರುಪತ್ಯ ಮುಂದುವರಿದಿತ್ತು. ಜಪಾನ್ ಒಟ್ಟು 78 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 53 ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿತ್ತು. 33 ಕಂಚಿನ ಪದಕಗಳು ಆ ದೇಶದ ಪಾಲಾಗಿದ್ದು ಒಟ್ಟು 164 ಪದಕಗಳನ್ನು ಜಪಾನ್ ತನ್ನದಾಗಿಸಿಕೊಂಡಿತ್ತು.

ಇನ್ನು ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದ್ದು 12 ಚಿನ್ನ 18 ಬೆಳ್ಳಿ ಹಾಗೂ 21 ಕಂಚಿನ ಪದಕ ಗೆದ್ದುಕೊಂಡಿತ್ತು. ಮೂರನೇ ಸ್ಥಾನದಲ್ಲಿ ಥಾಯ್ಲೆಂಡ್, ನಾಲ್ಕನೇ ಸ್ಥಾನದಲ್ಲಿ ಮಲೇಶಿಯಾ ಇದ್ದರೆ ಭಾರತ ಐದನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಕ್ರೀಡಾಕೂಡದಲ್ಲಿ ಭಾರತ 7 ಚಿನ್ನದ ಪದಕ ಗೆದ್ದಿದ್ದರೆ 3 ಬೆಳ್ಳಿ ಹಾಗೂ 11 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.

Story first published: Wednesday, August 9, 2023, 22:02 [IST]
Other articles published on Aug 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+