For Quick Alerts
ALLOW NOTIFICATIONS  
For Daily Alerts

ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಸೋಲು ಸಂಭ್ರಮಿಸಿದ ಜಮ್ಮು & ಕಾಶ್ಮೀರದ 7 ವಿದ್ಯಾರ್ಥಿಗಳ ಬಂಧನ!

ಆಘಾತಕಾರಿ ಘಟನೆಯೊಂದರಲ್ಲಿ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡದ ಸೋಲನ್ನು ಸಂಭ್ರಮಿಸಿದ ಜಮ್ಮು ಮತ್ತು ಕಾಶ್ಮೀರದ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಸೋತ ಬಳಿಕ ವಿದ್ಯಾರ್ಥಿಗಳು ಭಾರತ ವಿರೋಧಿ ಮತ್ತು ಪಾಕಿಸ್ತಾನಿ ಪರ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಆರೋಪಿಸಲಾಗಿದೆ.

7 Students in Jammu & Kashmir Arrested for Celebrating Indias Defeat in ICC World Cup 2023 Finals

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಯ ಸಂಬಂಧಿತ ವಿಭಾಗಗಳ ಪ್ರಕಾರ ಆರೋಪಿಗಳನ್ನು ಬಂಧಿಸಲಾಗಿದ್ದು, ಇದರರ್ಥ ಅಪರಾಧದಲ್ಲಿ ಭಾಗಿಯಾದವರು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡಕ್ಕೂ ಒಳಗಾಗುವ ಸಾಧ್ಯತೆ ಇದೆ.

ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲನ್ನು ಸಂಭ್ರಮಿಸಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ, ಏಳು ಜನರ ವಿರುದ್ಧ ಮತ್ತೊಬ್ಬ ವಿದ್ಯಾರ್ಥಿಯು ಅಧಿಕೃತ ದೂರು ದಾಖಲಿಸಿದ ನಂತರ ಬಂಧನ ಮಾಡಲಾಗಿದೆ.

ಗೆಲುವಿನ ತಂಡವನ್ನು ಹುರಿದುಂಬಿಸಿದ್ದಕ್ಕೆ ಅಪರಾಧೀಕರಿಸಲಾಗಿದೆ: ಮೆಹಬೂಬಾ ಮುಫ್ತಿ

ರಾಯಿಟರ್ಸ್ ವರದಿ ಪ್ರಕಾರ, ಪ್ರಕರಣವನ್ನು ನಿರ್ವಹಿಸುವ ಪೊಲೀಸ್ ಅಧಿಕಾರಿಯೊಬ್ಬರು ಭಾರತ ವಿರೋಧಿ ಘೋಷಣೆಗಳನ್ನು ಕೂಗುವ ವಿಡಿಯೋ ಸಾಕ್ಷ್ಯದ ಮೇಲೆ ಕೈಗೆ ಸಿಕ್ಕ ನಂತರ ಆರೋಪಗಳನ್ನು ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಈ ಏಳು ಬಂಧಿತ ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದವರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೆ ರಾಜಕೀಯ ಪಕ್ಷಗಳ ನಾಯಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಈ ವಿಷಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಬಂಧನದ ಕ್ರಮವು ಆಘಾತಕಾರಿ ಎಂದು ಹೇಳಿದ್ದಾರೆ.

"ಕಾಶ್ಮೀರದಲ್ಲಿ ಗೆಲ್ಲುವ ತಂಡವನ್ನು ಹುರಿದುಂಬಿಸುವುದನ್ನು ಅಪರಾಧೀಕರಿಸಿರುವುದು ಆಘಾತಕಾರಿಯಾಗಿದೆ," ಎಂದು ಮೆಹಬೂಬಾ ಮುಫ್ತಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಐಸಿಸಿ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಪ್ರದರ್ಶನನ ಕುರಿತು ಮಾತನಾಡುವುದಾದರೆ, ಚೆನ್ನೈನಲ್ಲಿ ಐದು ಬಾರಿ ಚಾಂಪಿಯನ್ ಎನಿಸಿದ್ದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ಆದರೆ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಸೋಲು ಅನುಭವಿಸಿದರು. ಇದು ಕೋಟ್ಯಂತರ ಭಾರತೀಯರ ಕ್ರಿಕೆಟ್ ಅಭಿಮಾನಿಗಳ ಹೃದಯಗಳನ್ನು ಒಡೆಯಿತು.

ಫೈನಲ್‌ವರೆಗೂ ಭಾರತ ಸತತ 10 ಪಂದ್ಯಗಳ ಗೆಲುವಿನೊಂದಿಗೆ ಅಜೇಯವಾಗಿ ಉಳಿದಿತ್ತು. ಆದರೆ, ಅಂತಿಮ ಪಂದ್ಯ ಗೆಲ್ಲಲು ವಿಫಲವಾದ ಕಾರಣ ಆಸ್ಟ್ರೇಲಿಯಾ ಆರನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು ಮತ್ತು 2023ರ ಆವೃತ್ತಿಯಲ್ಲಿ ರನ್ನರ್-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

Story first published: Wednesday, November 29, 2023, 16:27 [IST]
Other articles published on Nov 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+