For Quick Alerts
ALLOW NOTIFICATIONS  
For Daily Alerts

ತೆಹ್ರಾನ್ ಆತಿಥ್ಯದಲ್ಲಿ ನಡೆದ ಏಷ್ಯನ್ ಗೇಮ್ಸ್ 1974: 7ನೇ ಏಷ್ಯನ್ ಗೇಮ್ಸ್‌ನ ಪ್ರಮುಖ ಮಾಹಿತಿ

ಐದು ಮತ್ತು ಆರನೇ ಆವೃತ್ತಿಯ ಏಷ್ಯನ್ ಗೇಮ್ಸ್‌ ಕ್ರೀಡಡಾಕೂಟವನ್ನು ಥಾಯ್ಲೆಂಡ್‌ನ ಬ್ಯಾಂಕಾಕ್ ವಹಿಸಿಕೊಂಡ ಬಳಿಕ 7ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಆಯೋಜನೆ ಮಾಡುವ ಅವಕಾಶವನ್ನು ಇರಾನ್ ವಹಿಸಿಕೊಂಡಿತ್ತು. ಇರಾನ್‌ನ ತೆಹ್ರಾನ್ ನಗರದಲ್ಲಿ ಈ ಕ್ರೀಡಾಕೂಟ ಅದ್ಊರಿಯಾಗಿ ಆಯೋಜನೆಯಾಯಿತು. ಇದು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಆಯೋಜನೆಯಾದ ಪ್ರಪ್ರಥಮ ಏಷ್ಯನ್ ಗೇಮ್ಸ್ ಕ್ರೀಡಾಕೂಟವೂ ಹೌದು.

ಇರಾನ್‌ನ ರಾಜಧಾನಿ ತೆಹ್ರಾನ್‌ನಲ್ಲಿ ಆಯೋಜನೆಯಾದ ಈ ಕ್ರೀಡಾಕೂಟದಲ್ಲಿ ಅಲ್ಲಿಯವರೆಗೆ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದು ಈ ಕ್ರೀಡಾಕೂಟದ ವಿಶೇಷತೆ. 19 ರಾಷ್ಟ್ರಗಳ 3010 ಕ್ರೀಡಾಪಟುಗಳು ಈಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಈ ಆವೃತ್ತಿಯಲ್ಲಿ ಫೆನ್ಸಿಂಗ್, ಜಿಮ್ನಾಸ್ಟಿಕ್, ಮಹಿಳಾ ಬಾಸ್ಕೆಟ್‌ಬಾಲ್ ಹೊಸದಾಗಿ ಸೇರ್ಪಡೆಯಾಗಿತ್ತು.

7th Asian Games; Tehran, Iran 1974, History and other details

ಇನ್ನು ಈ ಕ್ರೀಡಾಕೂಟದಲ್ಲಿ ತೈವಾನ್‌ಅನ್ನು ಹೊರಗಿಟ್ಟು ಚೀನಾಗೆ ಅವಕಾಶ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಕ್ರೀಡಾಕೂಟದ ಆರಂಭಕ್ಕೂ 10 ತಿಂಗಳ ಮುನ್ನ ನಡೆದ ಏಷ್ಯ ಗೇಮ್ಸ್ ಫೆಡರೇಶನ್‌ನ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಇದೇ ಮೊದಲ ಬಾರಿಗೆ ಚೀನಾ ಕೂಡ ಈ ಈ ಕ್ರೀಡಾಕೂಟದಲ್ಲಿ ಭಾಗಿಯಾಗಿತ್ತು.

ಇನ್ನು 7ನೇ ಏಷ್ಯಾಡ್‌ನಲ್ಲಿಯೂ ಈ ಹಿಂದಿನ ಕ್ರೀಡಾಕೂಟಗಳಂತೆ ಜಪಾನ್ ಪಾರುಪತ್ಯ ಮುಂದುವರಿಯಿತು. ಈ ಬಾರಿ ಜಪಾನ್ ಒಟ್ಟು 75 ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ 49 ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿತ್ತು. ಮತ್ತು 51 ಕಂಚಿನ ಪದಕಗಳು ಆ ದೇಶದ ಪಾಲಾಗಿದ್ದು ಈ ಮೂಲಕ ಒಟ್ಟು 175 ಪದಕಗಳನ್ನು ಜಪಾನ್ ತನ್ನದಾಗಿಸಿಕೊಂಡಿತ್ತು. ಇನ್ನು ಎರಡನೇ ಸ್ಥಾನದಲ್ಲಿ ಇರಾನ್ ಇದ್ದು 36 ಚಿನ್ನ 28 ಬೆಳ್ಳಿ ಹಾಗೂ 17 ಕಂಚಿನ ಪದಕ ಗೆದ್ದುಕೊಂಡಿತು.

ಇದೇ ಮೊದಲ ಬಾರಿಗೆ ಈ ಕ್ರೀಡಾಕೂಟದಲ್ಲಿ ಅವಕಾಶ ಪಡೆದ ಚೀನಾ ತನ್ನ ಮೊದಲ ಆವೃತ್ತಿಯಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿತು. ಚೀನಾ 33 ಚಿನ್ನ, 46 ಬೆಳ್ಳಿ ಹಾಗೂ 27 ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಭಾರತ ಈ ಬಾರಿ ನೀರಸ ಪ್ರದರ್ಶನ ನೀಡಿದ್ದು 4 ಚಿನ್ನದ ಪದಕ ಮಾತ್ರವೇ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 12 ಬೆಳ್ಳಿ ಹಾಗೂ 12 ಕಂಚಿನ ಪದಕದೊಂದಿಗೆ ಒಟ್ಟು 28 ಪದಕ ಗೆದ್ದ ಭಾರತ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು.

Story first published: Friday, August 11, 2023, 23:20 [IST]
Other articles published on Aug 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+