Neeraj Chopra: ಚಿನ್ನದ ಹುಡುಗನ ಬಂಗಾರದಂತಹ ಸಾಧನೆಗಳು ಒಂದಾ..ಎರಡಾ..
ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಇತಿಹಾಸ ನಿರ್ಮಾಣವಾಗಿದೆ. ಯೆಸ್.. ಆ ಇತಿಹಾಸವನ್ನು ನಿರ್ಮಾಣ ಮಾಡಿದ್ದು ಭಾರತದ ನೀರಜ್ ಚೋಪ್ರಾ.. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ಸೋಲಿಸಿ ಚೋಪ್ರಾ ಈ ಸಾಧನೆಯನ್ನು ಮಾಡಿದ್ದಾರೆ.
ನೀರಜ್ ಚೋಪ್ರಾ ಚಿನ್ನದ ಬೇಟೆಯಾಡಿದ್ದು ಇದೇನು ಮೊದಲೇನೂ ಅಲ್ಲ. 2020ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನ ಬೇಟೆಯಾಡಿ ರಾತ್ರೋರಾತ್ರಿ ಜನಪ್ರಿಯರಾಗಿದ್ದರು. ಆ ವೇಳೆ, ಚೋಪ್ರಾಗೆ ಅಭಿನಂದನೆ ಮತ್ತು ಬಹುಮಾನ ಪ್ರವಾಹೋಪಾದಿಯಲ್ಲಿ ಹರಿದು ಬಂದಿತ್ತು.

ಹರ್ಯಾಣದ ಪಾಣಿಪತ್ ನಲ್ಲಿ ಡಿಸೆಂಬರ್ 24, 1997ರಂದು ಜನಿಸಿದ ಚೋಪ್ರಾ, ಬಾಲ್ಯದಿಂದಲೂ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದವರು. ಕ್ರೀಡೆಗಾಗಿ ತಮ್ಮ ತೂಕವನ್ನು ಇಳಿಸಲು ಕ್ರೀಡಾ ಅಕಾಡೆಮಿಗೆ ಸೇರಿದ ನಂತರ ಇವರ ಕ್ರೀಡಾ ಜೀವನದ ದಿಕ್ಕೇ ಬದಲಾಯಿತು.
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ರಾಷ್ಟ್ರಗೀತೆ ಕಡೆಯ ಸಾರಿ ಮೊಳಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ. ಅಂದು ಶೂಟರ್ ಅಭಿನವ ಬಿಂದ್ರಾ ಬಂಗಾರ ಗೆದ್ದು ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗುವಂತೆ ಮಾಡಿ ಹೆಮ್ಮೆ ಮೂಡಿಸಿದ್ದರು. ಅದಾಗಿ 13 ವರ್ಷಗಳ ಬಳಿಕ ಅಂದರೆ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುವ ಮೂಲಕ ಮತ್ತೆ ಈ ಸಾಧನೆಯನ್ನು ಮಾಡಿದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕೃಷಿ ಕುಟುಂಬದ ಹಿನ್ನಲೆಯ ಚೋಪ್ರಾ ಅವರದ್ದು ಅವಿಭಕ್ತ ಕುಟುಂಬ
ಟೋಕಿಯೋ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದರು. ಇದು ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಲಭಿಸಿದ್ದ ಚೊಚ್ಚಲ ಪದಕ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸಿದ ಮೊದಲನೇ ಚಿನ್ನದ ಪದಕವಾಗಿತ್ತು.
ಕೃಷಿ ಕುಟುಂಬದ ಹಿನ್ನಲೆಯ ಚೋಪ್ರಾ ಅವರದ್ದು ಅವಿಭಕ್ತ ಕುಟುಂಬ, ಸಾಮಾನ್ಯ ಕುಟುಂಬದಿಂದ ಬಂದ ನೀರಜ್ ಚೋಪ್ರಾ ಅವರ ತಂದೆ ಸತೀಶ್ ಕುಮಾರ್ ಅವರು ಕೃಷಿಕರು, ಅವರ ತಾಯಿ ಸರೋಜಾ ದೇವಿ ಗೃಹಿಣಿ. ಜಾವೆಲಿನ್ ಥ್ರೋನಲ್ಲಿ ವೈಯಕ್ತಿಕ ಅತ್ಯುತ್ತಮ 88.07 ಮೀ ರಾಷ್ಟ್ರೀಯ ದಾಖಲೆಯನ್ನು ಇವರು ಹೊಂದಿದ್ದಾರೆ.
ಚೋಪ್ರಾ ಅವರಿಂದಾದ ಪ್ರಮುಖ ಸಾಧನೆಗಳು
> ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
> 2018 ಏಷ್ಯನ್ ಗೇಮ್ಸ್ ಚಿನ್ನದ ಪದಕ
> 2018 ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ
> 2016 ವಿಶ್ವ ಜೂನಿಯರ್ ಚಾಂಪಿಯನ್ ಕಿರಿಯ ವಿಶ್ವ ದಾಖಲೆ ಹೊಂದಿರುವವರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications